Film News

ಅನಾಥ ಮಕ್ಕಳ ಹಸಿವು ನೀಗಿಸಿದ ಮನೋಜ್ ಮೋನಿಕಾ, ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾದ ಜೋಡಿ…..!

ಟಾಲಿವುಡ್ ನಟ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ಕೆಲವು ತಿಂಗಳ ಹಿಂದೆಯಷ್ಟೆ ನಡೆಯಿತು. ಈ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮನೋಜ್ ಸಹೋದರಿ ಮಂಚು ಲಕ್ಷ್ಮೀ ವಹಿಸಿಕೊಂಡಿದ್ದರು. ಅವರ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬಂದವು. ಅವರಿಬ್ಬರ ಮದುವೆ ಮೋಹನ್ ಬಾಬು ರವರಿಗೆ ಇಷ್ಟವಿರಲಿಲ್ಲ ಎಂಬ ಸುದ್ದಿಗಳೂ ಸಹ ಕೇಳಿಬಂದಿತ್ತು. ಸದ್ಯ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಈ ಜೋಡಿ ಅನಾಥ ಮಕ್ಕಳ ಹಸಿವು ನೀಗಿಸಿದ್ದು, ಎಲ್ಲರು ಈ ಜೋಡಿಯನ್ನು ಮೆಚ್ಚುತ್ತಿದ್ದಾರೆ.

ನಟ ಮಂಚು ಮನೋಜ್ ಸೀನಿಯರ್‍ ಸ್ಟಾರ್‍ ನಟ ಮೋಹನ್ ಬಾಬು ಮಗನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆತ ನಟಿಸಿದ್ದು, ಕೆಲವೇ ಸಿನೆಮಾಗಳಲ್ಲಾದರೂ ಸಹ ತನ್ನದೇ ಆದ ಖ್ಯಾತಿ ಪಡೆದುಕೊಂಡರು. ಕೆಲವು ದಿನಗಳಿಂದ ಮನೋಜ್ ಸಿನೆಮಾಗಳಿಂದ ದೂರವೇ ಇದ್ದರು. ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸದ್ಯ ಮನೋಜ್ ಭೂಮಾ ಮೋನಿಕಾ ರೆಡ್ಡಿ ಜೊತೆಗೆ ಎರಡನೇ ಮದುವೆಯಾದರು. ಶೀಘ್ರದಲ್ಲೇ ಮನೋಜ್ ತಂದೆಯಾಗಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ಈ ಸಂತಸದ ವಿಚಾರವನ್ನು ಮನೋಜ್ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಸದ್ಯ ಟಿವಿ ಶೋಗಳು, ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಮನೋಜ್, ಆದರೂ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಸಹ ಸಮಯ ಮೀಸಲಿಡುತ್ತಿದ್ದಾರೆ.

ಈಗಾಗಲೇ ಅನೇಕ ಬಾರಿ ಅನಾಥ ಮಕ್ಕಳು, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಅವರು ತನ್ನಲ್ಲಿನ ಸೇವಾ ಮನೋಭಾವವನ್ನು ಸಾರಿದ್ದಾರೆ. ಹೈದರಾಬಾದ್ ನಲ್ಲಿನ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಊಟ ಏರ್ಪಡಿಸಿದ್ದಾರೆ. ಜೊತೆಗೆ ಪತಿ ಹಾಗೂ ಪತ್ನಿ ಇಬ್ಬರೂ ಮಕ್ಕಳಿಗೆ ಊಟ ಬಡಿಸಿದ್ದಾರೆ. ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಈ ಜೋಡಿ ಸಾಮಾಜಿಕ ಸೇವೆಯನ್ನು ಮೆಚ್ಚು ಪ್ರಶಂಸೆ ಮಾಡುತ್ತಿದ್ದಾರೆ. ಇನ್ನೂ ಮಂಚು ಮನೋಜ್ ಉಸ್ತಾದ್ (ರಾಂಪ್ ಆಡಿದ್ದಾಂ) ಎಂಬ ಬಿಗೆಸ್ಟ್ ಗೇಂ ಶೋ ಹೋಸ್ಟ್ ಮಾಡುತ್ತಿದ್ದಾರೆ. ಪೀಪುಲ್ಸ್ ಮಿಡಿಯಾ ಫ್ಯಾಕ್ಟರಿ ಈ ಶೋ ನಿರ್ವಹಿಸುತ್ತಿದ್ದಾರೆ. ಜೊತೆಗೆ ವಾಟ್ ದ ಫಿಶ್ ಎಂಬ ಸಿನೆಮಾದಲ್ಲೂ ಸಹ ಮನೋಜ್ ನಟಿಸುತ್ತಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Most Popular

To Top