ಸ್ಟಾರ್ ಕ್ರಿಕೆಟರ್ ನನಗೆ ಬಾವ ಆಗುತ್ತಾನೆ ಎಂದ ನಟಿ, ವೈರಲ್ ಆದ ಕಾಮೆಂಟ್ಸ್, ಆ ನಟಿ ಯಾರು ಗೊತ್ತಾ?

Follow Us :

ಸ್ಟಾರ್‍ ಕ್ರಿಕೆಟರ್‍ ವಿರಾಟ್ ಕೊಹ್ಲಿ ಸಿನೆಮಾ ನಟರಗಿಂತಲೂ ಕಡಿಮೆಯಿಲ್ಲ ಎಂಬಂತೆ ಭಾರಿ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸ್ಟಾರ್‍ ನಟರಂತೆ ಅವರು ಸೋಷಿಯಲ್ ಮಿಡಿಯಾದಲ್ಲಿ ಹಿರೋ ಲುಕ್ಸ್ ಕೊಡುತ್ತಿರುತ್ತಾರೆ. ಇದೀಗ ಓರ್ವ ನಟಿ ವಿರಾಟ್ ಕೊಹ್ಲಿ ನನಗೆ ಭಾವ ಆಗುತ್ತಾನೆ ಎಂದು ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆ ನಟಿಯಾರು ಎಂಬ ವಿಚಾರಕ್ಕೆ ಬಂದರೇ,

ಚಿಲಸೌ ಎಂಬ ಸಿನೆಮಾದ ಮೂಲಕ ಪರಿಚಯವಾದ ರುಹಾನಿ ಶರ್ಮಾ ಶೀಘ್ರದಲ್ಲೇ ವಿಕ್ಟರಿ ವೆಂಕಟೇಶ್ ಅಭಿನಯದ ಸೈಂಧವ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹಿಟ್, ಡರ್ಟಿ ಹರಿ, 101 ಜಿಲ್ಲಾಲ ಅಂದಗಾಡು ಮೊದಲಾದ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ರುಹಾನಿ ಸೈಂಧವ್ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಇದೇ ಜ.13 ರಂದು ತೆರೆಕಾಣಲಿದೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ. ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ರುಹಾನಿ ಶರ್ಮಾ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದಂತಹ ರುಹಾನಿ, ನಾನು ಬಾಲ್ಯದಿಂದ ವೆಂಕಿ ಸರ್‍ ಸಿನೆಮಾಗಳನ್ನು ನೋಡಿ ಬೆಳೆದಿದ್ದೇನೆ. ಸೈಂಧವ್ ಸಿನೆಮಾದಲ್ಲಿ ಆತನೊಂದಿಗೆ ನಟಿಸಿದ ಬಳಿಕ ಅವರಿಗೆ ದೊಡ್ಡ ಅಭಿಮಾನಿಯಾದೆ. ಅವರೊಂದಿಗೆ ಸಿನೆಮಾ ಮಾಡಿದ್ದು ತುಂಬಾ ಸಂತೋಷವಾಗಿದೆ. ಬಾಲ್ಯದಿಂದಲೂ ನನಗೆ ಡಾಕ್ಟರ್‍ ಆಗಬೇಕೆಂಬ ಆಸೆಯಿತ್ತು. ಆದರೆ ಸಿನಿರಂಗದತ್ತ ಬಂದೆ. ಸೈಂಧವ್ ಸಿನೆಮಾದಲ್ಲಿ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಇದೇ ಸಮಯದಲ್ಲಿ ಆಂಕರ್‍ ಅನುಷ್ಕಾ ಶರ್ಮಾ ಗೂ ನಿಮಗೂ ಏನು ಸಂಬಂಧ ಎಂದು ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಕೇಳಿದ ಕೂಡಲೇ ರುಹಾನಿ ಶರ್ಮಾ ಶಾಕ್ ಆಗಿದ್ದಾರೆ.

ಈ ಸುದ್ದಿಯನ್ನು ನಾನು ಎಂದೂ ಮಿಡಿಯಾದ ಮುಂದೆ ಹೇಳಿಲ್ಲ. ಗೌಪ್ಯವಾಗಿಯೇ ಇಟ್ಟಿದ್ದೆ. ನಿಮಗೆ ಹೇಗೆ ಗೊತ್ತಾಯ್ತು. ನಿಮಗೆ ತಿಳಿದಿದೆ ಎಂದು ಈಗ ಹೇಳುತ್ತಿದ್ದೇನೆ. ಅನುಷ್ಕಾ ನನಗೆ ಸಹೋದರಿಯಾಗುತ್ತಾಳೆ. ಅನುಷ್ಕಾ ಅಕ್ಕಾ ಆದರೇ ವಿರಾಟ್ ಕೊಹ್ಲಿ ನಿಮಗೆ ಬಾವ ಆಗುತ್ತಾರೆ ಎಂದು ಆಂಕರ್‍ ಹೇಳುತ್ತಾ, ನಿಮ್ಮೊಂದಿಗೆ ನಿಮ್ಮ ಬಾವ ಹೇಗಿರುತ್ತಾರೆ ಎಂಬ ಪ್ರಶ್ನೆ ಸಹ ಎದುರಾಗುತ್ತದೆ. ಅದಕ್ಕೆ ಉತ್ತರಿಸಿದ ರುಹಾನಿ ವಿರಾಟ್ ನನ್ನೊಂದಿಗೆ ತುಂಬಾ ಚೆನ್ನಾಗಿರುತ್ತಾರೆ. ಅವರಿಬ್ಬರೂ ಫಿಲ್ಟರ್‍ ಇಲ್ಲದೇ ಸಿಂಪಲ್ ಆಗಿರುತ್ತಾರೆ. ಅದು ನನಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ರುಹಾನಿ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಅವರು ತುಂಬಾನೆ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಸಹ ಏರಿಸಿಕೊಳ್ಳುತ್ತಿರುತ್ತಾರೆ.