ಮೂರು ಮದುವೆಗಳ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು, ಅವರಿಂದ ಏಕೆ ಬೇರೆಯಾಗಿದ್ದು ಎಂಬ ವಿಚಾರ ರಿವೀಲ್…!

ನಟ ಬಾಲಕೃಷ್ಣ ಹೋಸ್ಟ್ ಮಾಡುವಂತಹ ಅನ್ ಸ್ಟಾಪುಬಲ್ ವಿತ್ ಎನ್.ಬಿ.ಕೆ 2 ನಲ್ಲಿ ಪವನ್ ಕಲ್ಯಾಣ್ ಎಪಿಸೋಡ್ ಗೆ ಸಂಬಂಧಿಸಿದ ಪಾರ್ಟ್-1 ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮಿಡಿಯಾದಲ್ಲಿ ನಂಬರ್‍ ಟ್ರೆಂಡಿಂಗ್…

ನಟ ಬಾಲಕೃಷ್ಣ ಹೋಸ್ಟ್ ಮಾಡುವಂತಹ ಅನ್ ಸ್ಟಾಪುಬಲ್ ವಿತ್ ಎನ್.ಬಿ.ಕೆ 2 ನಲ್ಲಿ ಪವನ್ ಕಲ್ಯಾಣ್ ಎಪಿಸೋಡ್ ಗೆ ಸಂಬಂಧಿಸಿದ ಪಾರ್ಟ್-1 ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮಿಡಿಯಾದಲ್ಲಿ ನಂಬರ್‍ ಟ್ರೆಂಡಿಂಗ್ ನಲ್ಲಿದೆ. ಈ ಹಿಂದೆ ಪ್ರಭಾಸ್ ರವರ ಎಪಿಸೋಡ್ ಸಹ ಸಖತ್ ಸದ್ದು ಮಾಡಿತ್ತು. ಇದೀಗ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸಹ ಈ ಶೋ ನಲ್ಲಿ ಭಾಗಿಯಾಗಿದ್ದು, ಈ ಶೋ ನಲ್ಲಿ ಪವನ್ ಕಲ್ಯಾಣ್ ತಾನು ಮೂರು ಮದುವೆಗಳ ಬಗ್ಗೆ ಮಾತನಾಡಿದ್ದಾರೆ.

ತೆಲುಗಿನಲ್ಲಿ ಇತ್ತೀಚಿಗೆ ತುಂಬಾ ಫೇಮಸ್ ಆಗುತ್ತಿರುವ ಕಿರುತೆರೆಯ ಶೋಗಳಲ್ಲಿ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಶೋ ಒಂದಾಗಿದೆ. ಈ ಶೋ ಅನ್ನು ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುತ್ತಾರೆ. ಈ ಶೋ ನಲ್ಲಿ ಭಾಗಿಯಾಗುವ ಎಲ್ಲರನ್ನೂ ಬಾಲಕೃಷ್ಣ ಅನೇಕ ಆಸಕ್ತಿಕರವಾದ ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಪವನ್ ಕಲ್ಯಾಣ್ ಸಹ ಈ ಶೋ ನಲ್ಲಿ ಹಾಜರಾಗಿದ್ದು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ದಿನಗಳಿಂದ ಪವನ್ ಕಲ್ಯಾಣ್ ರವರನ್ನು ಕಾಡುತ್ತಿರುವ ಒಂದು ಪ್ರಶ್ನೆಯನ್ನು ಬಾಲಕೃಷ್ಣ ಕೇಳಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಸಹ ಉತ್ತರ ನೀಡಿದ್ದಾರೆ. ತಾನು ಮೂರು ಮದುವೆಯಾಗಿದ್ದು ಏಕೆ, ಬೇರೆಯಾಗಿದ್ದು ಏಕೆ ಎಂಬ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಈಗಾಗಲೇ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಶೋ ನಲ್ಲಿ ಪವನ್ ಕಲ್ಯಾಣ್ ಭಾಗಿಯಾಗಿದ್ದು ಈ ಎಪಿಸೋಡ್ ಗಾಗಿ ಅಭಿಮಾನಿ ಈಗರ್‍ ಆಗಿ ಕಾಯುತ್ತಿದ್ದಾರೆ. ಈಗಾಗಲೇ ಈ ಎಪಿಸೋಡ್ ನಲ್ಲಿ ಎದುರಾದ ಕೆಲವೊಂದು ಪ್ರಶ್ನೆಗಳು ರಿವೀಲ್ ಆಗಿದ್ದು, ಪವನ್ ಕಲ್ಯಾಣ್ ಸಹ ಅನೇಕ ಉತ್ತರಗಳನ್ನು ನೀಡಿದ್ದಾರೆ. ಈ ಶೋ ನಲ್ಲಿ ಪವನ್ ಕಲ್ಯಾಣ್ ರವರಿಗೆ ಬಾಲಕೃಷ್ಣ ಮೂರು ಮದುವೆಯ ಗೊಡವೆ ಏನು ಎಂದು ಕೇಳಿದ್ದಾರೆ. ಅದಕ್ಕೆ ಪವನ್ ಕಲ್ಯಾಣ್ ಸಹ ಉತ್ತರಿಸಿದ್ದಾರೆ. ನನಗೆ ಮೊದಲನೇ ಮದುವೆ ಆದಾಗ ಮದುವೆ ಎಂದರೇ ಏನು ಎಂದು ಗೊತ್ತಿರಲಿಲ್ಲ. ಮದುವೆ ಸಿದ್ದವಾಗಿರಲಿಲ್ಲ. ಆದರೆ ನನಗೆ ಕುಟುಂಬಸ್ಥರು ಮದುವೆ ಮಾಡಿದರು. ಇದರಿಂದ ಮೊದಲನೇ ಪತ್ನಿಯೊಂದಿಗೆ ಅಭಿಪ್ರಾಯಗಳು ಸರಿಹೋಗದೆ ಅದಕ್ಕೆ ಬೇರೆಯಾದೆ. ಎರಡನೇ ಪತ್ನಿಯೊಂದಿಗೂ ಸಹ ಅಭಿಪ್ರಾಯಗಳು ಹೊಂದಾಣಿಕೆ ಆಗಲಿಲ್ಲ.  ಬಳಿಕ ಮೂರನೇ ಮದುವೆಯಾದೆ. ನಿಜಕ್ಕೂ ಮೊದಲಿಗೆ ಪವನ್ ಕಲ್ಯಾಣ್ ರವರಿಗೆ ಮದುವೆಯಾಗುವ ಆಲೋಚನೆ ಇರಲಿಲ್ಲವಂತೆ. ಜೀವನ ಪರ್ಯಂತ ಮದುವೆ ಬೇಡ ಅಂದುಕೊಂಡಿದ್ದೆ. ಆದರೆ ಪರಿಸ್ಥಿತಿಗಳು ಮದುವೆಯಾಗುವಂತೆ ಮಾಡಿತ್ತು ಎಂದು ಹೇಳಿದ್ದಾರೆ.

ಇನ್ನೂ ನನ್ನನ್ನು ರಾಜಕೀಯವಾಗಿ ಟೀಕೆ ಮಾಡಲು ಬೇರೆ ವಿಚಾರ ಇಲ್ಲದ ಕಾರಣದಿಂದ ಮದುವೆ ವಿಚಾರದ ಬಗ್ಗೆ ವಿಮರ್ಶೆ ಮಾಡುತ್ತಾರೆ. ನಾನು ಸಹ ಅವರನ್ನು ತಿರುಗಿ ಟೀಕೆ ಮಾಡಬಹುದು ಆದರೆ ನನಗೆ ಸಂಸ್ಕಾರ ಅಡ್ಡಿ ಬರುತ್ತದೆ. ಅವರಿಗೂ ಸಹ ಕುಟುಂಬ ಇರುತ್ತದೆ. ನಾನು ಅವರನ್ನು ಬೈದರೇ ಅವರು ದುಃಖ ಪಡುತ್ತಾರೆ. ಈ ಕಾರಣದಿಂದ ನಾನು ಸೈಲೆಂಟ್ ಆಗಿರುತ್ತೇನೆ ಎಂದಿದ್ದಾರೆ.