ತುಮಕೂರಿನಲ್ಲಿ ಮನಕಲುಕವ ಘಟನೆ, ಕ್ರೀಡಾಕೂಟದಲ್ಲಿ ಭಾಗಿಯಾದ 15 ವರ್ಷ ಬಾಲಕ ಹೃದಯಾಘಾತಕ್ಕೆ ಬಲಿ…!

Follow Us :

ಜೀವನದಲ್ಲಿ ಆಗಾಗ ಯಾರೂ ಊಹೆ ಮಾಡಿದಂತಹ ಘಟನೆಗಳು ಕ್ಷಣ ಮಾತ್ರದಲ್ಲೇ ನಡೆಯುತ್ತಿರುತ್ತವೆ. ಅದರಲ್ಲೂ ಹೃದಯಾಘಾತದಂತಹ ಘಟನೆಗಳು ಕ್ಷಣದಲ್ಲೆ ನಡೆಯುತ್ತವೆ. ಚೆನ್ನಾಗಿಯೇ ಇದ್ದಂತಹ ವ್ಯಕ್ತಿಗಳು ಹೃದಯಾಘಾತದಿಂದ ಹಾಗೆಯೇ ಕುಸಿದು ಬಿದ್ದು ಇಹಲೋಕ ತ್ಯೆಜಿಸುತ್ತಾರೆ. ಅಂತಹುದೇ ಮನಕಲುವ ಘಟನೆಯೊಂದು ತುಮಕೂರು ಭಾಗದಲ್ಲಿ ನಡೆದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ 15 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತುಮಕೂರಿನ ಚಿಕ್ಕತೊಟ್ಟಿಲು ಕೆರೆ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಭೀಮಾಶಂಕರ್‍ (15) ಎಂದು ಗುರ್ತಿಸಲಾಗಿದೆ. ಕ್ರೀಡಾಕೂಟದಲ್ಲಿ ಈ ಬಾಲಕ ಭಾಗಿಯಾಗಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್‍ ತುಮಕೂರು ತಾಲೂಕಿನ ಬೇಳದರ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಚಿಕ್ಕ ತೊಟ್ಟಿಲು ಕೆರೆ ಬಳಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕ ಸಹ ಭಾಗಿಯಾಗಿದ್ದ. ಈ ವೇಳೆ ರಿಲೇ ಆಟದಲ್ಲಿ ಸಹ ದ್ವಿತಿಯ ಬಹುಮಾನ ಸಹ ಪಡೆದಿದ್ದ ಎನ್ನಲಾಗಿದೆ.

ಇನ್ನೂ ಬಹುಮಾನ ಸ್ವೀಕರಿಸುವ ಮುಂಚೆಯೇ ಭೀಮಾಶಂಕರ್‍ ಗೆ ಹೃದಯಾಘಾತವಾಗಿದೆ. ಕೂಡಲೇ ಅಲ್ಲಿದ್ದ ಶಿಕ್ಷಕರು ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನಗಳನ್ನು ಸಹ ಮಾಡಿದ್ದಾರೆ. ಆದರೆ ಅಷ್ಟರೊಳಗೆ ವಿದ್ಯಾರ್ಥಿ ಕೊನೆಯ ಉಸಿರನ್ನೇಳೆದಿದ್ದಾನೆ. ಇನ್ನೂ ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.