ತೆಲುಗು ಸಿನೆಮಾಗಳಲ್ಲಿ ನಟಿಸೋಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಂಡಿಷನ್ಸ್ ಹಾಕುತ್ತಿದ್ದಾರಂತೆ?

Follow Us :

ಸೌತ್ ಸಿನಿರಂಗದಲ್ಲಿ ಮದುವೆಯಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುವ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿಯೇ ಫೇಮಸ್ ಆಗಿದ್ದಾರೆ. ತುಂಬಾ ಕಷ್ಟ ಪಟ್ಟು ಸಿನಿರಂಗದಲ್ಲಿ ಬೆಳೆದು ಇದೀಗ ಲೇಡಿ ಸೂಪರ್‍ ಸ್ಟಾರ್‍ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಗಳನ್ನು ನೀಡಿದ್ದಾರೆ. ಸದ್ಯ ಹೆಚ್ಚಾಗಿ ತಮಿಳು ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ. ತೆಲುಗು ಮೇಕರ್ಸ್ ಆಕೆಯನ್ನು ನಟಿಸಲು ಕೇಳಿದ್ರೇ ಕಂಡಿಷನ್ ಗಳನ್ನು ಹಾಕುತ್ತಿದ್ದಾರಂತೆ. ಸದ್ಯ ಇಂತಹ ರೂಮರ್‍ ವೈರಲ್ ಆಗುತ್ತಿದೆ.

ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ದೊಡ್ಡ ಸ್ಟಾರ್‍ ನಟರಿಗೂ ಕಡಿಮೆಯಿಲ್ಲ ಎಂಬಂತೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಯನತಾರಾ ಕಳೆದ ವರ್ಷ ಜೂನ್ 9 ರಂದು ಮದುವೆಯಾದರು. ಮದುವೆಯಾದಾಗಿನಿಂದ ಆಕೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನೂ ಆಕೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಸಹ ಪಡೆದುಕೊಂಡರು. ಅನೇಕ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್‍ ನಟರಿಗೂ ಕಡಿಮೆಯಿಲ್ಲ ಎಂಬುದನ್ನೂ ಸಹ ನಿರೂಪಿಸಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಿಗೆ ಸ್ಪರ್ಧೆ ಸಹ ನೀಡುತ್ತಿರುತ್ತಾರೆ. ಈ ಹಿಂದೆ ನಯನತಾರಾ ಸಿನೆಮಾಗಳು ಬಿಡುಗಡೆಯಾಗುತ್ತಿದೆ ಎಂದರೇ ಸ್ಟಾರ್‍ ಹಿರೋಗಳೂ ಸಹ ಭಯಪಡುವ ಸ್ಥಿತಿ ಇತ್ತು ಎಂದು ಸಹ ಹೇಳಲಾಗಿತ್ತು.

ಇನ್ನೂ ನಯನತಾರಾ ಕೆರಿಯರ್‍ ಅಷ್ಟೊಂದು ಸುಲಭವಾಗಿ ಸಾಗಿರಲಿಲ್ಲ. ಅನೇಕ ಏಳು ಬೀಳುಗಳ ನಡುವೆ ಅನೇಕ ರೂಮರ್‍ ಗಳನ್ನು ಮೆಟ್ಟಿ ನಿಂತು ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಆಗಿ ಕ್ರೇಜ್ ಪಡೆದುಕೊಂಡರು. ತೆಲುಗಿನಲ್ಲೂ ಸಹ ಬಂದಂತಹ ಅವಕಾಶಗಳನ್ನು ಪಡೆದುಕೊಂಡು ಸ್ಟಾರ್‍ ಹಿರೋ, ಸೀನಿಯರ್‍ ಹಿರೋಗಳು ಎಂಬ ಭೇದಭಾವವಿಲ್ಲದೇ ಪ್ರತಿಯೊಬ್ಬರ ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ ತೆಲುಗು ಸಿನೆಮಾಗಳ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ನಯನತಾರಾ ರವರೊಂದಿಗೆ ಸಿನೆಮಾ ಮಾಡಲು ಮೇಕರ್ಸ್ ಆಕೆಯನ್ನು ಸಂಪರ್ಕ ಮಾಡಿದರೇ ಕೆಲವೊಂದು ಕಂಡಿಷನ್ಸ್ ಹಾಕುತ್ತಿದ್ದಾರಂತೆ. ತೆಲುಗು ಸಿನೆಮಾಗಳಲ್ಲಿ ನಟಿಸಬೇಕಾದರೇ ಆಕೆ ಹಿರೋಗಳಿಗೆ ಕೊಟ್ಟಂತೆ ಸಂಭಾವನೆಯನ್ನು ಕೊಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಸದ್ಯ ಈ ಸುದ್ದಿ ನಿಜವೋ ಸುಳ್ಳೋ ತಿಳಿಯದು, ಸುದ್ದಿ ಮಾತ್ರ ತೆಲುಗು ಸಿನಿ ಅಂಗಳದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಬಗ್ಗೆ ನಯನತಾರಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಸಿನಿರಂಗದಲ್ಲಿ ಭಾರಿ ಸಂಭಾವನೆಯನ್ನು ಪಡೆದುಕೊಳ್ಳುವ ನಟಿಯರ ಸಾಲಿನಲ್ಲಿ ನಯನತಾರಾ ಸಹ ಸೇರಿಕೊಳ್ಳುತ್ತಾರೆ. ಸದ್ಯ ಆಕೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗೂ ಸಹ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.