ಶಾರ್ಟ್ ಡ್ರೆಸ್ ನಲ್ಲಿ ಕ್ಯೂಟ್ ಅಂಡ್ ಬ್ಯೂಟಿಪುಲ್ ಆಗಿ ಸ್ಮೈಲ್ ಕೊಡುತ್ತಾ ಮಸ್ಮರೈಜ್ ಮಾಡಿದ ಯಂಗ್ ಬ್ಯೂಟಿ ಅನನ್ಯ ನಾಗಳ್ಳ…….!

ತೆಲುಗು ಸಿನಿರಂಗದ ಯಂಗ್ ಬ್ಯೂಟಿ ಅನನ್ಯ ನಾಗಳ್ಳ ಮಲ್ಲೇಶಂ, ವಕೀಲ್ ಸಾಭ್ ಮೊದಲಾದ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಈ ಸಿನೆಮಾಗಳಲ್ಲಿ ಬಹುತೇಕ ಸಂಪ್ರದಾಯವಾಗಿಯೇ ಕಾಣಿಸಿಕೊಂಡ ಈಕೆ ಇದೀಗ ತಾನು ಗ್ಲಾಮರಸ್ ಪಾತ್ರಗಳಲ್ಲೂ ಸಹ ನಟಿಸಬಲ್ಲೇ ಎಂಬುದನ್ನು ಸಾರಿ ಹೇಳುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಶಾರ್ಟ್ ಡ್ರೆಸ್ ನಲ್ಲಿ ಕ್ಯೂಟ್ ಸ್ಮೈಲ್ ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ.

ತೆಲುಗು ಮೂಲದ ನಟಿ ಅನನ್ಯ ನಾಗಳ್ಳ ತಮ್ಮ ಹುಟ್ಟುಹಬ್ಬವನ್ನು ಕೆಲವು ದಿನಗಳ ಹಿಂದೆಯಷ್ಟೆ ಆಚರಿಸಿಕೊಂಡರು. ಆಗಸ್ಟ್ 1 ರಂದು ಅನನ್ಯ ನಾಗಳ್ಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆಕೆ ಅಭಿನಯದ ಸಿನೆಮಾಗಳ ಅಪ್ಡೇಟ್ ಗಳು ಸಹ ದೊರೆತಿದೆ. ಸದ್ಯ ಅನನ್ಯ ನಾಗಳ್ಳ ಮೂರು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಹಿಷ್ಕರಣ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಹಳ್ಳಿ ಹುಡುಗಿಯಾಗಿ ರಂಜಿಸಲಿದ್ದಾರೆ. ಅನ್ವೇಷಿ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಸಹ ರಿವೀಲ್ ಮಾಡಲಾಯಿತು. ಇದರ ಜೊತೆಗೆ ತಂತ್ರ ಎಂಬ ಸಿನೆಮಾದ ಫಸ್ಟ್ ಲುಕ್ ಸಹ ಬಿಡುಗಡೆಯಾಯ್ತು. ಇದರ ಜೊತೆಗೆ ಬೂಟ್ ಕಟ್ ಬಾಲರಾಜು ಸಿನೆಮಾದಲ್ಲೂ ಸಹ ಅನನ್ಯ ನಟಿಸುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಅಂಗವಾಗಿ ಈ ಸಿನೆಮಾಗಳ ಫಸ್ಟ್ ಲುಕ್ ಪೋಸ್ಟರ್‍ ಗಳು ಸಹ ಬಿಡುಗಡೆಯಾಗಿದ್ದು, ಎಲ್ಲರನ್ನೂ ಆಕರ್ಷಣೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಅನನ್ಯ ನಾಗಳ್ಳ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಾಷಯಗಳನ್ನು ತಿಳಿಸಿದ ಎಲ್ಲರಿಗೂ ಹಾಗೂ ಸಿನೆಮಾ ತಂಡಗಳಿಗೂ ಅನನ್ಯ ಸ್ಪೇಷಲ್ ಥ್ಯಾಕ್ಸ್ ಹೇಳಿದ್ದಾರೆ. ಕೇಕ್ ಕಟ್ ಮಾಡಿದ ಪೊಟೋಗಳನ್ನು ಆಕೆ ಹಂಚಿಕೊಂಡಿದ್ದಾರೆ. ಜೊತೆಗೆ ಬ್ಯೂಟಿಪುಲ್ ಪೊಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಸಂತೋಷವಾಗಿ ಕಾಣಿಸಿಕೊಂಡಿದ್ದಾರೆ. ಸಿನೆಮಾ ಯೂನಿಟ್ ಕೇಕ್ ಕಟ್ ಮಾಡಿಸಿದ್ದು, ಸ್ನೇಹಿತರ ಮನೆಯಲ್ಲಿ ಹುಟ್ಟುಹಬ್ಬ ಮಾಡಿಕೊಂಡಿದ್ದು, ತನ್ನ ಹತ್ತಿರದ ಸ್ನೇಹಿತರಿಂದ ಶುಭಾಷಯಗಳನ್ನು ಪಡೆದುಕೊಂಡಿದ್ದು, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಿನಿ ಗೌನ್ ಧರಿಸಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಸ್ಮೈಲ್ ಕೊಡುತ್ತಾ ಆಕೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ಆ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಕ್ಯೂಟ್ ಆಗಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಈ ಪೊಟೋಗಳಲ್ಲಿ ಆಕೆ ಕ್ಯೂಟ್ ಸ್ಮೈಲ್ ಕೊಟ್ಟಿದ್ದು, ಆಕೆ ಸ್ಮೈಲ್ ಮೂಲಕವೇ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಸದ್ಯ ಅನನ್ಯ ಒಳ್ಳೆಯ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಒಂದು ಬ್ರೇಕ್ ಸಿಕ್ಕರೇ ಆಕೆ ಸಹ ತೆಲುಗು ಸಿನಿರಂಗದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.