Film News

ಸಮಂತಾ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ ಶೋಭಿತಾ, ನಾಗಚೈತನ್ಯ ಒಳ್ಳೆಯವನು ಎಂದ ನಟಿ…..!

ತೆಲುಗು ಸಿನಿರಂಗದ ಸ್ಟಾರ್‍ ನಟಿ ಸಮಂತಾ ಹಾಗೂ ನಾಗಚೈತನ್ಯ ಕೆಲವೊಂದು ವಿಬೇದಗಳ ಕಾರಣದಿಂದ ವಿಚ್ಚೇದನ ಪಡೆದುಕೊಂಡ ಬಗ್ಗೆ ತಿಳಿದೇ ಇದೆ. ವಿಚ್ಚೇದನದ ಬಳಿಕ ಅವರಿಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರರಾಗಿದ್ದಾರೆ. ಸುಮಾರು ತಿಂಗಳುಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಇದೀಗ ಶೋಭಿತಾ ಮೊದಲ ಬಾರಿಗೆ ಎಂಬಂತೆ ಸಮಂತಾ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ, ಜೊತೆಗೆ ನಾಗಚೈತನ್ಯ ಬಗ್ಗೆ ಸಹ ಆಕೆ ಮಾತನಾಡಿದ್ದಾರೆ.

ಸಿನಿರಂಗದಲ್ಲಿ ಸೆಲೆಬ್ರೆಟಿಗಳ ನಡುವೆ ಡೇಟಿಂಗ್, ಅಫೈರ್‍ ಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ತೆಲುಗು ಸಿನಿರಂಗದಲ್ಲಿ ಇತ್ತೀಚಿಗೆ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಡೇಟಿಂಗ್ ನಲ್ಲಿದ್ದಾರೆ ಎಂದು ರೂಮರ್‍ ಗಳು ಹರಿದಾಡುತ್ತಿವೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರಿಬ್ಬರು ಕೆಲವೊಮ್ಮೆ ಜಂಟಿಯಾಗಿ ಕಾಣಿಸಿಕೊಂಡ ಕಾರಣ ಈ ರೂಮರ್‍ ಗಳು ಮತಷ್ಟು ಹೆಚ್ಚಾಗಿತ್ತು. ಆದರೆ ಶೋಭಿತಾ ಈ ಬಗ್ಗೆ ಅನೇಕ ಬಾರಿ ರಿಯಾಕ್ಟ್ ಆಗಿದ್ದಾರೆ. ಎಲ್ಲವೂ ಸುಳ್ಳು ಸುದ್ದಿಗಳು, ನಮ್ಮ ನಡುವೆ ಅಂತಹುದು ಏನು ಇಲ್ಲ ಎಂದು ಶೋಭಿತಾ ರೂಮರ್‍ ಗಳ ಬಗ್ಗೆ ತಿಳಿಸಿದ್ದರು. ಇದೀಗ ಶೋಭಿತಾ ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಶೋಭಿತಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಮೊದಲಿಗೆ ಸಮಂತಾ ಬಗ್ಗೆ ಮಾತನಾಡಿದ ಶೋಭಿತಾ ಸ್ಯಾಮ್ ಪ್ರಯಾಣ ತುಂಭಾ ಕೂಲ್ ಆಗಿ ಸಾಗಿದೆ ಎಂದು ಭಾವಿಸುತ್ತೇನೆ. ಆಕೆ ಸಿನೆಮಾಗಳನ್ನು ಸೆಲೆಕ್ಷನ್ ಮಾಡುವ ವಿಧಾನ ತುಂಬಾ ಅದ್ಬುತವಾಗಿರುತ್ತದೆ. ಆಕೆಯ ಸಿನೆಮಾಗಳೂ ಸಹ ತುಂಬಾ ಚೆನ್ನಾಗಿರುತ್ತವೆ. ಆಕೆ ಇದೀಗ ಎಷ್ಟೆ ದೊಡ್ಡ ಸಿನೆಮಾ ಆದರೂ ಬ್ಯಾಲೆನ್ಸ್ ಮಾಡಲ ಕೆಪಾಸಿಟಿ ಇದೆ ಎಂದು ಭಾವಿಸುತ್ತೇನೆ ಎಂದು ಸಮಂತಾ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಚೈತನ್ಯ ಬಗ್ಗೆ ಸಹ ಆಕೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಚೈತನ್ಯ ತುಂಬಾ ಜಾಲಿ ಮ್ಯಾನ್, ಕೂಲ್ ಆಗಿರುತ್ತಾನೆ. ಬೇರೆಯವರ ಜೊತೆಗೆ ಮರ್ಯಾದೆಯಿಂದ ಇರುತ್ತಾನೆ,. ಎಲ್ಲರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳು‌ತ್ತಾನೆ ಎಂದು ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ರೂಮರ್‍ ಗಳ ಬಗ್ಗೆ ಕೇಳಿದರೇ ಆಕೆ ಆ ಬಗ್ಗೆ ಏನು ರಿಯಾಕ್ಷನ್ ಕೊಟ್ಟಿಲ್ಲ. ಇನ್ನೂ ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ಶೋಭಿತಾ ದಿ ನೈಟ್ ಮ್ಯಾನೇಜರ್‍ ಪಾರ್ಟ್-2 ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಜೋರಾಗಿ ನಡೆಯುತ್ತಿದ್ದು, ಶೋಭಿತಾ ಈ ಪ್ರಮೋಷನ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top