Film News

ಆದಿಪುರುಷ್ ಸಿನೆಮಾದ ರಿವ್ಯೂ ಕೊಟ್ಟ ಸೇಹ್ವಾಗ್, ಆದಿಪುರುಷ್ ನೋಡಿದ ಬಳಿಕ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ ಎಂದು ತಿಳಿತು ಎಂದ ಕ್ರಿಕೆಟಿಗ…..!

ಭಾರಿ ನಿರೀಕ್ಷೆಗಳಿಂದ ತೆರೆಕಂಡ ಆದಿಪುರುಷ್ ಸಿನೆಮಾ ಅನೇಕ ವಿಮರ್ಶೆಗಳ ನಡುವೆ ಪ್ರದರ್ಶನ ಕಂಡಿದೆ. ಈ ಸಿನೆಮಾ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಮರ್ಶೆಗಳಿಗೆ ವಿವಾದಗಳಿಗೆ ಗುರಿಯಾಗುತ್ತಲೇ ಇತ್ತು.  ಅನೇಕರು ಈ ಸಿನೆಮಾವನ್ನು ಬ್ಯಾನ್ ಮಾಡಬೇಕು ಎಂದೂ ಸಹ ಆಗ್ರಹಿಸಿದ್ದರು. ಇದೀಗ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆದಿಪುರುಷ್ ಸಿನೆಮಾದ ರಿವ್ಯೂ ನೀಡಿದ್ದಾರೆ. ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ ಎಂಬುದು ಆದಿಪುರುಷ್ ಸಿನೆಮಾ ನೋಡಿದ ಬಳಿಕ ತಿಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಪ್ರಭಾಸ್ ಫ್ಯಾನ್ಸ್ ಮಾತ್ರ ಸೆಹ್ವಾಗ್ ವಿರುದ್ದ ಫೈರ್‍ ಆಗುತ್ತಿದ್ದಾರೆ.

ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ಬಾಹುಬಲಿ ಸಿನೆಮಾದ ಬಳಿಕ ಸಾಹೋ, ರಾಧೆಶ್ಯಾಮ್, ಆದಿಪುರುಷ್ ಸಿನೆಮಾಗಳು ಅಭಿಮಾನಿಗಳನ್ನು ಭಾರಿ ನಿರಾಸೆ ಮಾಡಿದೆ. ಪ್ರಪಂಚದಾದ್ಯಂತ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿರುವ ಪ್ರಭಾಸ್ ಆದಿಪುರುಷ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನನ್, ದೇವ್ ದತ್ತಾ ಪ್ರಧಾನ ಪಾತ್ರದಲ್ಲಿ ಆದಿಪುರುಷ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಓಂ ರಾವತ್ ನಿರ್ದೇಶನ ಮಾಡಿದ್ದು, ಜೂನ್ 16 ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ರಾಮಾಯಣದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನೆಮಾ ತೆರೆಗೆ ತರಲಾಗಿದೆ. ಆದರೆ ತಮಗೆ ಇಷ್ಟಬಂದಂತೆ ಈ ಸಿನೆಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದ ಕೆಲವೊಂದು ದೃಶ್ಯಗಳು ವಿವಾದಕ್ಕೆ ಸಹ ಗುರಿಯಾಗಿದೆ.

ಇನ್ನೂ ಆದಿಪುರುಷ್ ಸಿನೆಮಾದ ನೋಡಿದ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ತನ್ನದೇ ಆದ ಸ್ಟೈಲ್ ನಲ್ಲಿ ರಿವ್ಯೂ ಕೊಟ್ಟಿದ್ದಾರೆ. ಆದಿಪುರುಷ್ ಸಿನೆಮಾ ನೋಡಿದ ಬಳಿಕ ಕಟ್ಟಪ್ಪ ಬಾಹುಬಲಿಯನ್ನು ಏಕೆ ಸಾಯಿಸಿದ್ದು ಎಂದು ತಿಳಿಯಿತು ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಪ್ರಭಾಸ್ ಅಭಿಮಾನಿಗಳು ಆತನ ಟ್ವೀಟ್ ವಿರುದ್ದ ಫೈರ್‍ ಆಗುತ್ತಿದ್ದಾರೆ. ನೀವು ಅಂತಹವರು ಆದ ಕಾರಣದಿಂದಲೇ ಧೋನಿ ನಿಮ್ಮನ್ನು ಟೀಂ ನಿಂದ ಹೊರಹಾಕಿದರು ಎಂದು ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಟಾಲಿವುಡ್ ಫ್ಯಾನ್ಸ್ ವಾರ್‍ ಸಹ ಶುರುವಾಗಿದೆ. ನಮ್ಮ ಹಿರೋ ಗ್ರೇಟ್, ನಮ್ಮ ಹಿರೋ ಗ್ರೇಟ್ ಎಂದು ಕಾಮೆಂಟ್ ಗಳ ರೂಪದಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ.

ಇನ್ನೂ ಆದಿಪುರುಷ್ ಸಿನೆಮಾ ಸೆಟ್ಟೇರಿದಾಗಿನಿಂದ ಒಂದಲ್ಲ ಒಂದು ಕಾರಣದಿಂದ ವಿವಾದದ ಸುಳಿಯಲ್ಲಿ ಸಿಲುಕುತ್ತಾ ಬಂದಿದೆ. ಅದರಲ್ಲೂ ಸಿನೆಮಾ ಬಿಡುಗಡೆಯಾದ ಬಳಿಕ ಅನೇಕ ಹಿಂದೂ ಪರ ಮುಖಂಡರು ತೀವ್ರ ಆಕ್ರೋಷ ಹೊರಹಾಕಿದ್ದಾರೆ. ಸದ್ಯ ಸಿನೆಮಾ ಬಿಡುಗಡೆಯಾಗಿದ್ದು, ಮೊದಲ ಮೂರು ದಿನಗಳ ಕಾಲ ಕೊಂಚ ಮಟ್ಟಿಗೆ ಕಲೆಕ್ಷನ್ ಮಾಡಿದರೂ ಸಹ ಈ ಸಿನೆಮಾ ಅಂದುಕೊಂಡಷ್ಟು ನಿರೀಕ್ಷೆಯನ್ನು ತಲುಪಲು ವಿಫಲವಾಗಿದೆ.

Most Popular

To Top