Film News

ಅದೆಲ್ಲಾ ನನಗೆ ಕಿರಿಕಿರಿಯಲ್ಲ, ನನ್ನ ಮದುವೆಯಾಗುವವ ಅವನೇ, ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಶೋಭಿತಾ…..!

ಕಳೆದ ಒಂದು ವರ್ಷದಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ನಾಗಚೈತನ್ಯ ರವರ ಹೊಸ ಮನೆಗೆ ಶೋಭಿತಾರನ್ನು ಕರೆದುಕೊಂಡು ಬಂದಿದ್ದಾರಂತೆ. ಇಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬೆಲ್ಲಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಈ ಸುದ್ದಿಯನ್ನು ಇತ್ತಿಚಿಗೆ ನಾಗಚೈತನ್ಯ ಟೀಂ ಸಹ ತಳ್ಳಿ ಹಾಕಿದ್ದರು. ಜೊತೆಗೆ ಶೋಭಿತಾ ಸಹ ಅನೇಕ ಬಾರಿ ಎಲ್ಲವನ್ನೂ ಸುಳ್ಳು ಎಂದು ಹೇಳಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಮತ್ತೊಮ್ಮೆ ಶೋಭಿತಾ ಕೊಂಚ ಖಾರವಾಗಿಯೇ ರಿಯಾಕ್ಟ್ ಆಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಶೋಭಿತಾ ಧೂಳಿಪಾಲ ಹಾಗೂ ನಾಗಚೈತನ್ಯ ಲಂಡನ್ ನಲ್ಲಿ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಆ ರೆಸ್ಟೋರೆಂಟ್ ನ ಚೆಫ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಸೆಲ್ಫಿ ಪೊಟೋದಲ್ಲಿ ಶೋಭಿತಾ ಹಿಂದೆ ಕುಳಿತಿರುತ್ತಾರೆ. ಬಳಿಕ ಆ ಪೊಟೋವನ್ನು ಡಿಲೀಟ್ ಮಾಡಿಸಲಾಗಿತ್ತು. ಇದರಿಂದ ಮತ್ತೊಮ್ಮೆ ಅವರಿಬ್ಬರ ಡೇಟಿಂಗ್ ಸುದ್ದಿ ಮತ್ತೊಮ್ಮೆ ಹರಿದಾಡಿತ್ತು. ಈ ಕಾರಣದಿಂದ ಶೋಭಿತಾ ಹಾಗೂ ನಾಗಚೈತನ್ಯ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅನೇಕರು ನಂಬುತ್ತಿದ್ದಾರೆ. ಇನ್ನೂ ಇದೀಗ ಈ ರೂಮರ್‍ ಗಳ ಬಗ್ಗೆ ಶೋಭಿತಾ ಮತ್ತೊಮ್ಮೆ ರಿಯಾಕ್ಟ್ ಆಗಿದ್ದಾರೆ. ಆಕೆಯ ಅಭಿನಯದ ದಿ ನೈಟ್ ಮ್ಯಾನೇಜರ್‍-2 ಪ್ರಮೋಷನ್ ನಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಈ ಪ್ರಮೋಷನ್ ಸಮಯದಲ್ಲೇ ಆಕೆ ರೂಮರ್‍ ಗಳ ಬಗ್ಗೆ ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಆಗಿದ್ದಾರೆ.

ನಟಿ ಶೋಭಿತಾ ದಿ ನೈಟ್ ಮ್ಯಾನೇಜರ್‍-2 ಸಿನೆಮಾದ ಪ್ರಮೋಷನ್ ನಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಈ ವೇಳೆ ಆಕೆ ತನ್ನನ್ನು ಮದುವೆಯಾಗುವ ಹುಡುಗನ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ನನ್ನನ್ನು ಮದುವೆಯಾಗುವವನು ತುಂಬಾ ಸರಳವಾಗಿ ಇರಬೇಕು. ಒಳ್ಳೆಯ ಮನಸ್ಸು ಇರಬೇಕು. ಬೇರೊಬ್ಬರಿಗೆ ಸಹಾಯ ಮಾಡುವ ಗುಣ ಹೊಂದಿರಬೇಕು. ಜೀವನ ಎಂಬುದು ತುಂಬಾ ಸಣ್ಣದು, ಅದನ್ನು ಪ್ರತಿ ಕ್ಷಣ ಆಸ್ವಾದಿಸಬೇಕು ಎಂಬುದನ್ನು ನಂಬಬೇಕು. ಪ್ರಕೃತಿಯನ್ನು ಸಹ ಪ್ರೀತಿಸಬೇಕು. ಅಂತಹ ವ್ಯಕ್ತಿ ನನಗೆ ಪತಿಯಾಗಿ ಬರಬೇಕೆಂದು ಕೋರುತ್ತೇನೆ ಎಂದಿದ್ದಾರೆ. ಜೊತೆಗೆ ನಾಗಚೈತನ್ಯ ಜೊತೆಗಿನ ಡೇಟಿಂಗ್ ರೂಮರ್‍ ಬಗ್ಗೆ ಸಹ ಆಕೆ ರಿಯಾಕ್ಟ್ ಆಗಿದ್ದಾರೆ. ಅಂತಹ ರೂಮರ್‍ ಗಳನ್ನು ನಾನು ಕಿವಿಗೆ ಸಹ ಹಾಕಿಸಿಕೊಳ್ಳುವುದಿಲ್ಲ. ನಟಿಯಾಗಿ ನಾನು ಇಂದಿಗೂ ಸಹ ಪ್ರತೀ ಕ್ಷಣ ಕಷ್ಟಪಡುತ್ತಿದ್ದೇನೆ. ಯಾರಾದರೂ ನನ್ನ ಕೆಲಸದ ಬಗ್ಗೆ ಮಾತನಾಡಿದರೇ ಚೆನ್ನಾಗಿರುತ್ತದೆ ಎಂದು ಹೇಳಿದ್ದು, ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಶೋಭಿತಾ ತೆಲುಗು ಮೂಲದವರಾದರೂ ಸಹ ರಾಮನ್ ರಾಘವ್ 2.0 ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಗೂಢಾಚಾರಿ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಇತ್ತಿಚಿಗಷ್ಟೆ ತೆರೆಕಂಡ ಪೊನ್ನಿಯನ್ ಸೆಲ್ವನ್ ಸಿರೀಸ್ ನಲ್ಲೂ ಸಹ ಶೋಭಿತಾ ತುಂಬಾ ಅದ್ಬುತವಾಗಿ ನಟಿಸಿದ್ದರು. ಸದ್ಯ ಆಕೆ ದಿ ನೈಟ್ ಮ್ಯಾನೇಜರ್‍ 2 ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದು, ಹಾಲಿವುಡ್ ನ ಮಂಕಿ ಮ್ಯಾನ್ ಎಂಬ ಸಿರೀಸ್ ನಲ್ಲೂ ಸಹ ಶೋಭಿತಾ ನಟಿಸುತ್ತಿದ್ದಾರೆ.

Most Popular

To Top