Film News

ರೂಮರ್ ಗಳು ತುಂಬಾ ಕಷ್ಟವಾಗಿರುತ್ತದೆ, ಟ್ರೋಲರ್ ಗಳಿಗೆ ಕ್ರೇಜಿಯಾಗಿ ಕೌಂಟರ್ ಕೊಟ್ಟ ಕೃತಿ ಶೆಟ್ಟಿ…….!

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಸಾಲಿಗೆ ಯಂಗ್ ನಟಿ ಕೃತಿ ಶೆಟ್ಟಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡ ಈಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.   ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಂಡ ಈಕೆಗೆ ಇದೀಗ ಬ್ಯಾಕ್ ಟು ಬ್ಯಾಕ್ ಸೋಲುಗಳು ಎದುರಾಗುತ್ತಿದೆ. ಇದೀಗ ಆಕೆ ಟ್ರೋಲ್ ಗಳಿಗೂ ಸಹ ತುತ್ತಾಗುತ್ತಿದ್ದು, ಇದೀಗ ಆಕೆ ಆ ಟ್ರೋಲರ್‍ ಗಳಿಗೆ ಗಟ್ಟಿಯಾಗಿ ಕೌಂಟರ್‍ ಕೊಟ್ಟಿದ್ದಾರೆ.

ಮೊದಲನೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದ ನಟಿ ಕೃತಿ ಶೆಟ್ಟಿ ಸಿನೆಮಾಗಳ ಆಯ್ಕೆಯಲ್ಲಿ ಕೆಲವೊಂದು ತಪ್ಪುಗಳ ಕಾರಣದಿಂದ ಆಕೆಯ ಪ್ಲಾಫ್ ಗಳನ್ನು ನೋಡಬೇಕಾಯಿತು. ಇದೀಗ ಆಕೆ ಅಳೆದು ತೂಗಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮೊದಲಿಗಿಂತ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಭಾರಿ ಟ್ರೋಲ್ಸ್ ಗೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಕೆ ಬಾಡಿ ಶೇಮಿಂಗ್ ಕಾರಣದಿಂದ ತುಂಬಾನೆ ವಿಮರ್ಶೆ ಎದುರಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದಾರೆ. ಮೈಂಡ್ ಬ್ಲೋಯಿಂಗ್ ಕೌಂಟರ್‍ ಕೊಟ್ಟಿದ್ದಾರೆ ಟ್ರೋಲರ್‍ ಗಳಿಗೆ. ಆಕೆ ಬಾಡಿ ಶೇಮಿಂಗ್ ಬಗ್ಗೆ ದೊಡ್ಡ ಮಟ್ಟದಲ್ಲೇ ಟ್ರೋಲ್ ಗಳಿಗೆ ತುತ್ತಾಗುತ್ತಿದ್ದಾರೆ. ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಪ್ರಚಾರ ಸಹ ನಡೆಯುತ್ತಿದೆ. ಇನ್ನೂ ಸೌಂದರ್ಯಕ್ಕಾಗಿ ಅನೇಕ ನಟಿಯರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಅದೇ ಮಾದರಿಯಲ್ಲಿ ಕೃತಿ ಶೆಟ್ಟಿ ಸಹ ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ರೂಮರ್‍ ಗಳು ಸೊಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಕೃತಿ ಶೆಟ್ಟಿ ತನ್ನ ಮೇಲಿನ ರೂಮರ್‍ ಗಳಿಗೆ ಕ್ರೇಜಿಯಾಗಿ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಕೃತಿ ಶೆಟ್ಟಿ ತನ್ನ ಮೇಲಿನ ಟ್ರೋಲ್ಸ್ ಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ತನ್ನ ವಿರುದ್ದದ ಟ್ರೋಲ್ ಗಳ ಬಗ್ಗೆ ಕೌಂಟರ್‍ ಕೊಡುತ್ತಾ, ಇಂತಹ ಸುದ್ದಿಗಳನ್ನು ಹೇಗೆ ಬರೆಯುತ್ತಾರೋ, ಏತಕ್ಕಾಗಿ ಬರೆಯುತ್ತಾರೋ ಅರ್ಥ ಆಗುತ್ತಿಲ್ಲ. ಇಂತಹ ರೂಮರ್‍ ಗಳನ್ನು ಕೇಳಿದಾಗ ಮನಸಿಗೆ ತುಂಬಾ ನೋವಾಗುತ್ತದೆ. ಉಪ್ಪೇನ ಸಿನೆಮಾದಲ್ಲಿ ಇದ್ದಂತೆ ನಾನು ಈಗ ಇಲ್ಲ. ಸದಾ ಎಂದೂ ಒಂದೆ ಮಾದರಿಯಲ್ಲಿ ಇರೊಲ್ಲ. ವಯಸ್ಸು ಆಗುತ್ತಿದ್ದಂತೆ ಸಾಮಾನ್ಯವಾಗಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ಎಲ್ಲರಲ್ಲೂ ಬರುವಂತೆ ನನ್ನಲ್ಲೂ ಸಹ ಕೆಲವೊಂದು ಬದಲಾವಣೆಗಳಾಗಿವೆ. ಕೆಲವೊಮ್ಮೆ ಮೇಕಪ್ ಹಾಗೂ ಹೇರ್‍ ಸ್ಟೈಲ್ ಕಾರಣದಿಂದ ಸಹ ಮುಖದಲ್ಲಿ ಬದಲಾವಣೆ ಕಾಣಿಸುತ್ತದೆ. ಹಾಗಂತ ಅದು ಪ್ಲಾಸ್ಟಿಕ್ ಸರ್ಜರಿ ಅಂದುಕೊಂಡರೇ ಹೇಗೆ ಎಂದು ಆಕ್ರೋಷ ಹೊರಹಾಕಿದ್ದಾರೆ.

ಕೆಲವೊಂದು ವಾಸ್ತವತೆಗಳನ್ನು ತಿಳಿದುಕೊಂಡು ಏನಾದರೂ ಕಾಮೆಂಟ್ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕು. ಈ ರೀತಿಯಾಗಿ ಕಿರಿಕಿರಿ ಮಾಡುವುದು ಸರಿಯಲ್ಲ. ನಮಗೂ ಸಹ ಕುಟುಂಬಗಳಿರುತ್ತವೆ. ಅವರು ಸಹ ನೋವನ್ನು ಪಡುತ್ತಾರೆ ಎಂದು ವಿಷಾದಿಸಿದರು. ಇನ್ನೂ ಆಕೆ ತನ್ನ ವಿರುದ್ದದ ಕೌಂಟರ್‍ ಗಳಿಗೆ ಸ್ಟ್ರಾಂಗ್ ಕೌಂಟರ್‍ ಕೊಡುವುದರ ಜೊತೆಗೆ ಎಮೋಷನಲ್ ಆಗಿಯೂ ರಿಯಾಕ್ಟ್ ಆಗಿದ್ದಾರೆ, ಇನ್ನಾದರೂ ಈ ಟ್ರೋಲ್ ಗಳು ನಿಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top