ಗರ್ಭಿಣಿಯಾಗಿದ್ದಾಗ ನನ್ನ ಬಗ್ಗೆ ಅಂತಹ ಕಾಮೆಂಟ್ ಗಳನ್ನು ಮಾಡಿದ್ದರು, ಶೀಘ್ರದಲ್ಲೇ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದ ಕಾಜಲ್….!

Follow Us :

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಕಾಜಲ್ ತನ್ನ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳನ್ನೂ ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಗರ್ಭಿಣಿಯಾಗಿದ್ದಾಗ ಆಕೆಯ ಬಗ್ಗೆ ಕೇಳಿಬಂದ ಕಾಮೆಂಟ್ ಗಳ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದಾರೆ.

ಸಿನಿರಂಗದಲ್ಲಿ ಎಂದೂ ಸಹ ಫೇಡ್ ಔಟ್ ಆಗದ ನಟಿಯೆಂದರೇ ಕಾಜಲ್ ಅಗರ್ವಾಲ್ ಎಂದು ಹೇಳಬಹುದು. ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಆಕೆಯ ಕೆರಿಯರ್‍ ನಲ್ಲಿ ಎಂದೂ ಸಹ ಆಕೆಯ ಸಕ್ಸಸ್ ಗ್ರಾಫ್ ಸಹ ಕೆಳಗೆ ಬೀಳಲಿಲ್ಲ ಎನ್ನಬಹುದು. ಇನ್ನೂ ಕಾಜಲ್ ಅಗರ್ವಾಲ್ ಕಳೆದ 2020 ಅಕ್ಟೋಬರ್‍ ಮಾಹೆಯಲ್ಲಿ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ಕಳೆದ ವರ್ಷ ಕಾಜಲ್ ಕಿಚ್ಲು ದಂಪತಿಗೆ ಮುದ್ದಾದ ಗಂಡು ಮಗು ಸಹ ಜನಿಸಿತು. ಸದ್ಯ ಕಾಜಲ್ ತನ್ನ ಮುದ್ದಿನ ಮಗನೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ತನ್ನ ಪತಿ ಹಾಗೂ ಮಗನೊಂದಿಗೆ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಕಾಜಲ್ ಅಗರ್ವಾಲ್ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ತಾನು ಗರ್ಭಿಣಿಯಾಗಿದ್ದಾಗ ಆಕೆಯ ಬಗ್ಗೆ ವಿವಿಧ ರೀತಿಯ ಕಾಮೆಂಟ್ ಗಳು ಬಂದಿದ್ದವಂತೆ. ಕಾಜಲ್ ತುಂಬಾ ದಪ್ಪ ಆಗಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ನಟಿಸಲು ಕೆಲಸಕ್ಕೆ ಬರೊಲ್ಲ. ಆಕೆ ಹಿರೋಯಿನ್ ಆಗಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಆಡಿದ್ದರು. ಕಾಜಲ್ ಔಟ್ ಆಫ್ ಶೇಪ್ ಆಗಿದ್ದಾರೆ ಎಂದು ಹೇಳಿದರು. ಇದೀಗ ಸಿನೆಮಾಗಳಲ್ಲಿ ನಟಿಸುತ್ತಿದ್ದರೇ ಮಗುವನ್ನು ಬಿಟ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಕಾಮೆಂಟ್ ಗಳ ಕಾರಣದಿಂದ ನನಗೆ ತುಂಬಾನೆ ಬೇಸರ ಉಂಟಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಮೊದಲ ಬಾರಿಗೆ ಈ ಬಗ್ಗೆ ಆಗ್ರಹ ಸಹ ವ್ಯಕ್ತಪಡಿಸಿದ್ದಾರೆ. ನನ್ನ ಮಗನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುತ್ತೇನೆ. ನಾನು ಗರ್ವ ಪಡುವಂತೆ ಅವನನ್ನು ಬೆಳೆಸುತ್ತೇನೆ. ನನ್ನನ್ನು ವಿಮರ್ಶೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಕಾಜಲ್ ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಒಳ್ಳೆಯ ಆಫರ್‍ ಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ಕಮಲ್ ಹಾಸನ್ ಜೊತೆಗೆ ಇಂಡಿಯನ್-2, ನಂದಮೂರಿ ಬಾಲಕೃಷ್ಣ ಜೊತೆಗೆ ಸಹ ನಟಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಘೋಸ್ಟಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.