Film News

ಬಾರ್ಬಿ ಬೊಂಬೆಯಂತೆ ಕಾಣಿಸಿಕೊಂಡ ಯಂಗ್ ಬ್ಯೂಟಿ ಕೃತಿಶೆಟ್ಟಿ, ಪಿಂಕ್ ಡ್ರೆಸ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ….!

ಯಂಗ್ ಬ್ಯೂಟಿ ಕೃತಿ ಶೆಟ್ಟಿ ಉಪ್ಪೆನಾ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಭಾರಿ ಕ್ರೇಜ್ ಪಡೆದುಕೊಳ್ಳುವುದರ ಜೊತೆಗೆ ಅನೇಕ ಯುವಕರ ಕ್ರಷ್ ಸಹ ಆದರು. ಅದರಲ್ಲೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಮಹಿಳಾ ದಿನಾಚರಣೆಯ ನಿಮಿತ್ತಾ ಅಭಿಮಾನಿಗಳು ಟ್ರೀಟ್ ನೀಡಿದ್ದಾರೆ ಎಂಬಂತೆ ಆಕೆ ಪಿಂಕ್ ಡ್ರೆಸ್ ನಲ್ಲಿ ಬಾರ್ಬಿ ಬೊಂಬೆಯಂತೆ ಕಾಣಿಸಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದ ಯಂಗ್ ಬ್ಯೂಟಿ ಕೃತಿ ಶೆಟ್ಟಿ ಉಪ್ಪೆನಾ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಮತ್ತೆರಡು ಸಿನೆಮಾಗಳು ಹಿಟ್ ಪಡೆದುಕೊಂಡು ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಆಕೆಯನ್ನು ಗೋಲ್ಡನ್ ಲೆಗ್ ಎಂತಲೂ ಕರೆದರು ಆದರೆ ಬಳಿಕ ತೆರೆಕಂಡ ಸಿನೆಮಾಗಳು ಸೋತವು. ಆಕೆಯ ಕೆರಿಯರ್‍ ಗ್ರಾಫ್ ಸಹ ಡೌನ್ ಆಗುತ್ತಾ ಬಂದಿದೆ. ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾಗಿದೆ. ಹ್ಯಾಟ್ರಿಕ್ ಸೋಲು ಕಂಡ ಕೃತಿ ಶೆಟ್ಟಿಗೆ ಟಾಲಿವುಡ್ ನಲ್ಲಿ ಆಫರ್‍ ಗಳು ಕಡಿಮೆಯಾಗಿದೆ. ಆದರೆ ಕಾಲಿವುಡ್ ನಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಂಡು ತಮಿಳು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ.

ಇನ್ನೂ ನಟಿ ಕೃತಿ ಶೆಟ್ಟಿ ಮೊದಲಿಗೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡರು. ಸಿನಿರಂಗದಲ್ಲಿ ಗ್ಲಾಮರ್‍ ಎಂಬುದು ತುಂಬಾನೆ ಮುಖ್ಯ ಎಂದು ಹೇಳಲಾಗುತ್ತದೆ. ಅದನ್ನು ಅರಿತ ಕೃತಿ ಶೆಟ್ಟಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ವಿವಿಧ ರೀತಿಯ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಮಹಿಳಾ ದಿನಾಚರಣೆ ನಿಮಿತ್ತ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಡ್ರೆಸ್ ನಲ್ಲಿ ಆಕೆ ಬ್ಯೂಟಿಪುಲ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾರ್ಬಿ ಡಾಲ್ ನಂತೆ ಆಕೆ ಕಾಣಿಸಿಕೊಂಡಿದ್ದಾರೆ ಎನ್ನಬಹುದು. ಬಾರ್ಬಿ ಡಾಲ್ ಸಹ ಅಷ್ಟೊಂದು ಮುದ್ದಾಗಿ ಕಾಣಲ್ಲ ಎಂದು ಆಕೆಯ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ.

ಇನ್ನೂ ಕೃತಿ ಶೆಟ್ಟಿ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಕೃತಿ ಶೆಟ್ಟಿ ತಮಿಳು ಸಿನೆಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲೂ ಸಹ ಆಕೆ ಎಂಟ್ರಿ ಕೊಡಲಿದ್ದಾರೆ.

Most Popular

To Top