Film News

ನಮ್ಮ ತಂದೆಯಿಂದಲೇ ಲಾಲ್ ಸಲಾಂ ಸಿನೆಮಾ ಫ್ಲಾಪ್ ಆಯ್ತು ಎಂದ ಐಶ್ವರ್ಯ ರಜನಿಕಾಂತ್, ವೈರಲ್ ಆದ ಕಾಮೆಂಟ್ಸ್……!

ದೇಶದ ಸಿನಿರಂಗದ ಸ್ಟಾರ್‍ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ಜೈಲರ್‍ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡಿದ್ದರು. ಯಂಗ್ ನಿರ್ದೇಶಕ ನೆಲ್ಸನ್ ದಿಲೀಪ್ ಸಾರತ್ಯದಲ್ಲಿ ಮೂಡಿಬಂದ ಈ ಸಿನೆಮಾ ಬರೊಬ್ಬರಿ 700 ಕೋಟಿಗೂ ಅಧಿಕ ವಸೂಲಿ ಮಾಡಿತ್ತು. ಈ ಸಿನೆಮಾದ ಬಳಿಕ ರಜನಿಕಾಂತ್ ರವರು ತಮ್ಮ ಪುತ್ರಿಯ ನಿರ್ದೇಶನದಲ್ಲಿ ಲಾಲ್ ಸಲಾಂ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾಗೆ ಅವರು ಭಾರಿ ಸಂಭಾವನೆ ಸಹ ಪಡೆದುಕೊಂಡಿದ್ದರು. ಆದರೆ ಈ ಸಿನೆಮಾ ಫ್ಲಾಪ್ ಆಗಿದ್ದು, ಸಿನೆಮಾ ಫ್ಲಾಫ್ ಆಗಲು ತನ್ನ ತಂದೆಯೇ ಕಾರಣ ಎಂದು ಐಶ್ವರ್ಯ ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ರಜಿನಿಕಾಂತ್ ನಿರ್ದೇಶನದಲ್ಲಿ ಭಾರಿ ನಿರೀಕ್ಷೆಯಿಂದ ಲಾಲ್ ಸಿನೆಮಾ ಸೆಟ್ಟೇರಿತ್ತು. ಫೆ.9 ರಂದು ಈ ಸಿನೆಮಾ ಸಹ ಅದ್ದೂರಿಯಾಗಿ ತೆರೆಕಂಡಿತ್ತು. ಭಾರಿ ನಿರೀಕ್ಷೆಯಿಂದ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಸಿನೆಮಾಗಾಗಿ ರಜನಿಕಾಂತ್ ರವರು 40 ಕೋಟಿ ಸಂಭಾವನೆಯನ್ನು ಸಹ ಪಡೆದುಕೊಂಡರು ಎನ್ನಲಾಗಿದೆ. ಈ ಸಿನೆಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರ ಮಾಡಿದರೂ ಸಹ ಅವರು ತಮ್ಮದೇ ಸಿನೆಮಾ ಎಂಬಂತೆ ಭಾರಿ ರೇಂಜ್ ನಲ್ಲೇ ಪ್ರಮೋಟ್ ಮಾಡಿದ್ದರು. ಇದೀಗ ಈ ಸಿನೆಮಾ ಫ್ಲಾಪ್ ಆಗಿದ್ದ ಕಾರಣದ ಬಗ್ಗೆ ನಿರ್ದೇಶಕಿ ಐಶ್ವರ್ಯ ರಜನಿಕಾಂತ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಲಾಲ್ ಸಲಾಂ ಸಿನೆಮಾದಲ್ಲಿ ರಜನಿಕಾಂತ್ ರವರು ಮೊಹಿದಿನ್ ಭಾಯ್ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಿಂದಲೇ ಸಿನೆಮಾ ಫ್ಲಾಪ್ ಆಗಿದೆ ಎಂದು ಐಶ್ವರ್ಯ ಕಾಮೆಂಟ್ ಮಾಡಿದ್ದಾರೆ. ಸಿನೆಮಾದಲ್ಲಿ ರಜನಿಕಾಂತ್  ಪಾತ್ರ ತುಂಭಾ ಸಣ್ಣ ಪಾತ್ರವಾಗಿತ್ತಂತೆ, ಹಾಗೆ ಬಂದು ಹಾಗೆ ಹೋಗಬೇಕಾಗಿತ್ತಂತೆ. ಆದರೆ ಆತನ ಪಾತ್ರವನ್ನು ಮತಷ್ಟು ಏರಿಸಿದ ಕಾರಣದಿಂದ ಕಥೆ ಹೆಚ್ಚಾಗಿದೆ. ಫ್ಲಾಪ್ ಆಗಲು ಅದೇ ಮುಖ್ಯ ಕಾರಣ ಎಂದು ಐಶ್ವರ್ಯ ಹೇಳಿದ್ದಾರೆ ಎನ್ನಲಾಗಿದೆ. ಸಿನೆಮಾದ ಕಟೆಂಟ್ ತುಂಬಾನೆ ಚೆನ್ನಾಗಿದೆ. ಆದರೆ ರಜನಿಕಾಂತ್ ರವರನ್ನು ತೋರಿಸಿದ ಬಳಿಕ ಪ್ರೇಕ್ಷಕರ ಮೈಂಡ್ ಸೆಟ್ ಬದಲಾಗಿದೆ. ಅವರು ಇಂಟ್ರವೆಲ್ ಆದ ಬಳಿಕ ಬರುತ್ತಾರೆ. ಅದೂ 10 ನಿಮಿಷ ಮಾತ್ರ. ಆದರೆ ಕಥೆ ಆತನ ಸುತ್ತಲೂ ತಿರುಗುಂತೆ ಬದಲಿಸಿದ ಕಾರಣದಿಂದಲೇ ಸಿನೆಮಾ ಡಿಜಾಸ್ಟರ್‍ ಆಗಿದೆ ಎಂದು ಐಶ್ವರ್ಯ ಹೇಳಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top