Film News

ಮುಂಬೈನಲ್ಲಿ ಯಂಗ್ ಬ್ಯೂಟಿ ಕೃತಿ ಶೆಟ್ಟಿ ಹಾಟ್ ಪೋಸ್, ವೈಟ್ ಟಾಪ್, ಬ್ಲೂ ಜೀನ್ಸ್ ನಲ್ಲಿ ಕಾಣಿಸಿಕೊಂಡ ಕೃತಿಶೆಟ್ಟಿ…..!

ನಟಿ ಕೃತಿ ಶೆಟ್ಟಿ ಸೌತ್ ಸಿನಿರಂಗದಲ್ಲಿ ಸ್ಟಾರ್‍ ಇಮೇಜ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಓದುತ್ತಾ, ಮತ್ತೊಂದು ಕಡೆ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸಿನೆಮಾಗಳಂತೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಆಕೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಇದೀಗ ವೈರಲ್ ಆಗಿದೆ.

ನಟಿ ಕೃತಿ ಶೆಟ್ಟಿ ಪಂಜಾ ವೈಷ್ಣವ್ ತೇಜ್ ಜೊತೆಗೆ ಉಪ್ಪೇನಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕರ್ನಾಟಕದ ಮೂಲದ ಈಕೆ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಂಡ ಈಕೆ ಇದೀಗ ಸಾಲು ಸಾಲು ಪ್ಲಾಫ್ ಗಳನ್ನು ಸಹ ಕಂಡಿದ್ದಾರೆ. ಆದರೂ ಸಹ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಆಕೆ ಬ್ಯೂಟಿ, ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಜೊತೆಗೆ ಫ್ಯಾನ್ಸ್ ಜೋತೆ ಮಿಟಿಂಗ್ ಸಹ ಮಾಡುತ್ತಿರುತ್ತಾರೆ. ಜೊತೆಗೆ ಹೊರಗೂ ಸಹ ಆಗಾಗ ಬರುತ್ತಿದ್ದು, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಈ ಹಾದಿಯಲ್ಲೇ ನಟಿ ಕೃತಿ ಶೆಟ್ಟಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ತಂದೆಯೊಂದಿಗೆ ಹೋಟೆಲ್ ಒಂದಕ್ಕೆ ಹೋಗಿದ್ದಾರೆ. ವೈಟ್ ಟಾಪ್, ಬ್ಲೂ ಜೀನ್ಸ್ ಧರಿಸಿ ಕೃತಿ ಶೆಟ್ಟಿ ಮಾಡ್ರನ್ ಲುಕ್ಸ್ ಕೊಟ್ಟಿದ್ದಾರೆ. ಈ ವೇಳೆ ಅಲ್ಲಿನ ಪಾಪರಾಜಿಗಳಿಗೆ ಸಿಕ್ಕಿದ್ದು, ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಅಭಿಮಾನಿಗಳಿಗೆ ಹಾಯ್ ಎಂದು ಹೇಳಿ ಹೋಟೆಲ್ ಒಳಗೆ ಹೋಗಿದ್ದಾರೆ. ಇತ್ತೀಚಿಗೆ ಕೃತಿ ಶೆಟ್ಟಿ ಸಿನೆಮಾಗಳಿಗಿಂತ ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ. ಇನ್ನೂ ಕೃತಿ ಶೆಟ್ಟಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಕೃತಿ ಶೆಟ್ಟಿ ಉಪ್ಪೇನಾ, ಶ್ಯಾಮ ಸಿಂಗರಾಯ್, ಬಂಗರಾರಾಜು ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಹಿಟ್ ಪಡೆದುಕೊಂಡರು. ಬಳಿಕ ತೆರೆಕಂಡ ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗಂ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಸೋಲನ್ನು ಸಹ ಕಂಡರು. ಇನ್ನೂ ಕೃತಿ ಶೆಟ್ಟಿ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಕಸ್ಟಡಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಜೊತೆಗೆ ತಮಿಳಿನ ಸಿನೆಮಾವೊಂದರಲ್ಲೂ ಸಹ ಕೃತಿ ಬಣ್ಣ ಹಚ್ಚಿದ್ದಾರೆ.

Most Popular

To Top