Film News

ಮೊದಲ ಬಾರಿಗೆ ಎರಡನೇ ಮದುವೆಯ ಬಗ್ಗೆ ರಿಯಾಕ್ಟ್ ಆದ ಮನೋಜ್, ಆಕೆ ನನ್ನ ಜೀವನದಲ್ಲಿ ಬಂದಿದ್ದು ಅದೃಷ್ಟ ಎಂದ ನಟ…..!

ಸುಮಾರು ದಿನಗಳಿಂದ ಸಿನಿರಂಗದಲ್ಲಿ ಸಖತ್ ಹರಿದಾಡುತ್ತಿರುವ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಮದುವೆ ವಿಚಾರ.  ಈ ಹಿಂದೆ ಅನೇಕ ಬಾರಿ ಈ ಕುರಿತು ರಿಯಾಕ್ಟ್ ಆಗದ ಮನೋಜ್ ಇದೀಗ ಮೊದಲ ಬಾರಿಗೆ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮೋನಿಕಾ ನನ್ನ ಜೀವನದಲ್ಲಿ ಬಂದಿದ್ದು ನನ್ನ ಅದೃಷ್ಟ ಎಂದು ಮಂಚು ಮನೋಜ್ ನೀಡಿದ ಕಾಮೆಂಟ್ ಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಅಂದಹಾಗೆ ಈ ಜೋಡಿಯ ಮದುವೆ ಮಾರ್ಚ್-3 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ.

ತೆಲುಗು ನಟ ಮಂಚು ಮನೋಜ್ ತನ್ನ ಮೊದಲನೇ ಪತ್ನಿ ಪ್ರಣತಿಯನ್ನು ಕಳೆದ 2015 ರಲ್ಲಿ ಮದುವೆಯಾದರು. ಬಳಿಕ 2019 ರಲ್ಲಿ ವಿಚ್ಚೇದನ ಪಡೆದುಕೊಂಡರು. ಬಳಿಕ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿರುವ ಮನೋಜ್ ಮಾಜಿ ಮಂತ್ರಿ ಭೂಮಾನಾಗಿರೆಡ್ಡಿ ಮಗಳು ಭೂಮಾ ಮೌನಿಕಾ ರೆಡ್ಡಿಯೊಂದಿಗೆ ಸಹಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದನ್ನು ಪುಷ್ಟಿ ಕರಿಸುವಂತೆ ಕಳೆದ ಗಣೇಶ ಹಬ್ಬದಂದು ಇಬ್ಬರೂ ಜೊತೆಯಾಗಿಯೇ ಬಂದು ಪೂಜೆಯಲ್ಲಿ ಭಾಗವಹಿಸಿದ್ದರು. ಅಂದಿನಿಂದ ಇಬ್ಬರ ಬಗ್ಗೆ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಇದೀಗ ಮಾರ್ಚ್-3 ರಂದು ಈ ಜೋಡಿಯ ವಿವಾಹ ನೆರವೇರಲಿದೆಯಂತೆ. ಇನ್ನೂ ಅಭಿಮಾನಿಗಳು ಈ ವಿಚಾರ ಕೇಳಿ ಖುಷಿಯಾಗಿದ್ದಾರೆ.

ಇನ್ನೂ ಈ ಹಿಂದೆ ಎಂದೂ ಸಹ ಮನೋಜ್ ಈ ಬಗ್ಗೆ ರಿಯಾಕ್ಟ್ ಆಗಿರಲಿಲ್ಲ. ಇದೀಗ ಮೊದಲ ಬಾರಿಗೆ ಮನೋಜ್ ಮೋನಿಕಾ ಬಗ್ಗೆ ಮಾತನಾಡಿದ್ದಾರೆ. ಮನೋಜ್ ಮೋನಿಕಾ ಬಗ್ಗೆ ಮಾತನಾಡುತ್ತಾ, ಮೊದಲಿಗೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಬಳಿಕ ನಮ್ಮಿಬ್ಬರ ಮನಸ್ಸುಗಳು ಬೆರೆತು ಪ್ರೀತಿ ಹುಟ್ಟಿದೆ. ನಾನು ಕಷ್ಟದಲ್ಲಿರುವಾಗ ಭೂಮಾ ಮೋನಿಕಾ ನನಗೆ ತುಂಬಾ ಸಪೋರ್ಟ್ ಮಾಡಿದ್ದರು. ಆಕೆ ನನ್ನ ಜೀವನದಲ್ಲಿ ಬಂದಿದ್ದು ನನ್ನ ಅದೃಷ್ಟ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಮನೋಜ್ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಮಾಚ್-3 ರಂದು ಈ ಜೋಡಿಯ ಮದುವೆ ನಡೆಯಲಿದೆ. ಕುಟುಂಬಸ್ಥರು ಹಾಗೂ ತುಂಬಾ ಹತ್ತಿರದವರ ಸಮ್ಮುಖದಲ್ಲಿ ಮದುವೆ ನಡೆಯಲಿದೆಯಂತೆ. ಮದುವೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.

ಮನೋಜ್ ಮದುವೆಯ ಎಲ್ಲಾ ಕೆಲಸಗಳನ್ನು ಅವರ ಸಹೋದರಿ ಮಂಚು ಲಕ್ಷ್ಮೀ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ಮಂಚು ಲಕ್ಷ್ಮೀ ಮನೆಯಲ್ಲಿ ವಿಶೇಷ ಪೂಜೆಯನ್ನು ಸಹ ನೆರವೇರಿಸಲಾಗಿತ್ತು. ಈಗಾಗಲೇ ಮದುವೆಯ ಎಲ್ಲಾ ಕೆಲಸಗಳು ಪೂರ್ಣ ಗೊಂಡಿದೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top