Film News

ಸೌತ್ ಸಿನೆಮಾಗಳ ಬಗ್ಗೆ ಹುಚ್ಚು ಮಾತುಗಳನ್ನಾಡಿದ ಸೀನಿಯರ್ ನಟ ನಜೀರುದ್ದಿನ್, ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು….!

ಇತ್ತೀಚಿಗೆ ಸೌತ್ ಸಿನೆಮಾಗಳು ಇಡೀ ವಿಶ್ವ ಮಟ್ಟದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ ಕೆಲವೊಂದು ಸಿನೆಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಹಿಂದೆ ದೇಶದ ಸಿನಿರಂಗದಲ್ಲಿ ಮೊದಲ ಸ್ಥಾನದಲ್ಲಿದ್ದಂತಹ ಬಾಲಿವುಡ್ ಸಿನೆಮಾಗಳನ್ನೂ ಮೀರಿಸುವಂತೆ ಸೌತ್ ಸಿನೆಮಾಗಳು ಮೂಡಿಬರುತ್ತಿವೆ. ಜೊತೆಗೆ ಅನೇಕ ಬಾಲಿವುಡ್ ಸ್ಟಾರ್‍ ಗಳೂ ಸಹ ಸೌತ್ ಸಿನೆಮಾಗಳನ್ನು ಮೆಚ್ಚುತ್ತಿದ್ದಾರೆ. ಅಷ್ಟೇಅಲ್ಲದೇ ಪ್ಯಾನ್ ಇಂಡಿಯಾ ಸಿನೆಮಾಗಳು ಹೆಚ್ಚು ತೆರೆಕಾಣುತ್ತಿರುವ ಕಾರಣದಿಂದ ಭಾಷಾ ಭೇದ ಹೋಗುತ್ತಿದೆ ಎನ್ನಬಹುದಾಗಿದೆ.

ಈ ಹಿಂದೆ ಕೆಲವರು ಸೌತ್ ಸಿನೆಮಾಗಳ ಬಗ್ಗೆ ಮಾತನಾಡಿದ್ದರು. ಇದೀಗ ಮತ್ತೋರ್ವ ಸೀನಿಯರ್‍ ನಟ ನಜಿರುದ್ದೀನ್ ಷಾ ಸಂದರ್ಶನವೊಂದರಲ್ಲಿ ಸೌತ್ ಸಿನೆಮಾಗಳ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.  ಸೌತ್ ಸಿನೆಮಾದಲ್ಲಿ ಕನಿಷ್ಟ ಲಾಜಿಕ್ ಸಹ ಇರುವುದಿಲ್ಲ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಸಿನೆಮಾದಲ್ಲಿ ಯಾವುದೇ ಲಾಜಿಕ್ ಇರುವುದಿಲ್ಲ. ಆ ಸಿನೆಮಾಗಳು ಸೂಪರ್‍ ಹಿಟ್ ಆದರೂ ಸಹ ಲಾಜಿಕ್ ಲೆಸ್ ದೃಶ್ಯಗಳೇ ಹೆಚ್ಚಾಗಿರುತ್ತವೆ. ಕೆಲವೊಂದು ಸನ್ನಿವೇಗಳಂತೂ ಊಹೆಗೂ ಮೀರಿದಂತೆ ಕಾಣುತ್ತವೆ. ಇದು ಸಾಲದು ಎಂಬಂತೆ ಹುಚ್ಚು ಹುಚ್ಚು ಹಾಡುಗಳೇ ಹೆಚ್ಚಾಗಿರುತ್ತದೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನೂ ಸೌತ್ ನ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ಬಳಿ ದೊಡ್ಡ ಮಟ್ಟದ ಗೆಲುವು ಸಾಧಿಸಿದರೂ ಸಹ ಸಿನೆಮಾಗಳಲ್ಲಿನ ಲಾಜಿಕ್ ಪಾಲನೆ ಮಾಡುವುದಿಲ್ಲ. ಆದರೆ ಇತ್ತೀಚಿಗೆ ಹಿಂದಿ ಸಿನೆಮಾಗಳಿಗಿಂತ ಸೌತ್ ಸಿನೆಮಾಗಳು ಹೆಚ್ಚು ಪ್ರದರ್ಶನ ಆಗುತ್ತಿವೆ ಎಂಬುದನ್ನು ಒಪ್ಪುತ್ತೇನೆ ಎಂದು ಸಹ ಹೇಳಿದ್ದಾರೆ. ಇನ್ನೂ ನಜೀರುದ್ದೀನ್ ಈ ಹೇಳಿಕೆಗಳನ್ನು ನೀಡುತ್ತಿದ್ದಂತೆ ನೆಟ್ಟಿಗರೂ ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸೌತ್ ನಲ್ಲಿ ತೆರೆಕಂಡ ಅನೇಕ ಸಿನೆಮಾಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಆಕ್ರೋಷ ಹೊರಹಾಕಿದ್ದಾರೆ.

ಸೌತ್ ಸಿನೆಮಾಗಳಾದ RRR, ಕೆಜಿಎಫ್-2, ಪುಷ್ಪಾ, ವಿಕ್ರಂ, ಕಾಂತಾರ ಸೇರಿದಂತೆ ಕೆಲವೊಂದು ಸಿನೆಮಾಗಳು ಭಾರಿ ಸಕ್ಸಸ್ ಕಂಡಿವೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವ ಮಟ್ಟದಲ್ಲಿ ದೊಡ್ಡ ಸಕ್ಸಸ್ ಕಂಡುಕೊಂಡಿವೆ. ಈ ಸಿನೆಮಾಗಳನ್ನು ಒಮ್ಮೆ ನೋಡಿ ಮತ್ತೇ ಮಾತನಾಡಿ ಎಂದು ನೆಟ್ಟಿಗರು ನಜೀರುದ್ದೀನ್ ವಿರುದ್ದ ಕಿಡಿಕಾರಿದ್ದಾರೆ. ಇನ್ನೂ ಬಾಲಿವುಡ್ ನ ಅನೇಕ ಸಿನೆಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಾಣುತ್ತಿದ್ದರೇ ಆ ಸಮಯದಲ್ಲಿ ಶಾರುಖ್ ಖಾನ್ ರವರ ಪಠಾನ್ ಸಿನೆಮಾ ಉಸಿರು ಕೊಟ್ಟಿದೆ ಎನ್ನಬಹುದಾಗಿದೆ.

Most Popular

To Top