ತಾಯಿ ಮರಣದ ಬಗ್ಗೆ ಎಮೋಷನಲ್ ಕಾಮೆಂಟ್ಸ್ ಮಾಡಿದ ಜಾನ್ವಿ, ಆ ಸಮಯದಲ್ಲಿ ನನಗೆ ಯುದ್ದದಂತಿತ್ತು ಎಂದ ನಟಿ…..!

Follow Us :

ಬಾಲಿವುಡ್ ಸಿನಿರಂಗದ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‍ ನಟಿಯರಿಗಿಂತಲೂ ಹೆಚ್ಚಿನ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆಯ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅತಿಲೋಕ ಸುಂದರಿ ಶ್ರೀದೇವಿಯವರ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಆಕೆ ತಮ್ಮ ತಾಯಿ ಮರಣದ ಬಗ್ಗೆ ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಜಾನ್ವಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಸದ್ಯ ಜಾನ್ವಿ ಕಪೂರ್‍ ಮುಂದಿನ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನೆಮಾ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿರುತ್ತಾರೆ. ಧಡಕ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾನ್ವಿ ಕಪೂರ್‍ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಮೊದಲನೇ ಸಿನೆಮಾ ಸೋತರೂ ಸಹ ಆಕೆಗೆ ಅವಕಾಶಗಳು ಮಾತ್ರ ಹರಿದುಬಂದವು. ಕಮರ್ಷಿಯಲ್ ಸಿನೆಮಾಗಳಿಂದ ದೂರ ಉಳಿದು, ಬೇರೆ ಸಿನೆಮಾಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೂ ಎಂಟ್ರಿ ಕೊಡಲಿದ್ದಾರೆ.

ಸದ್ಯ ಜಾನ್ವಿ ಕಪೂರ್‍ ಬವಾಲ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಬಾಲಿವುಡ್ ಸ್ಟಾರ್‍ ನಟ ವರುಣ್ ಧಾವನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನೆಮಾ ಅಮೇಜಾನ್ ಪ್ರೈಂ ನಲ್ಲಿ ಜು.21 ರಿಂದ ಸ್ಟ್ರೀಮಂಗ್ ಆಗಲಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ ನಡೆಯುತ್ತಿದೆ. ಈ ಹಾದಿಯಲ್ಲೇ ಪ್ರಮೋಷನ್ ಒಂದರ ಇಂಟರ್‍ ವ್ಯೂ ನಲ್ಲಿ ಜಾನ್ವಿ ಕಪೂರ್‍ ತನ್ನ ತಾಯಿಯ ಮರಣ ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ತಾನು ತನ್ನ ತಾಯಿಯ ಮರಣದ ವಾರ್ತೆಯನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಆ ನೋವಿನಿಂದ ಹೊರಬರಲು ದೊಡ್ಡ ಯುದ್ದವೇ ಮಾಡಬೇಕಾಯಿತು ಎಂದು ಜಾನ್ವಿ ಹೇಳಿದ್ದಾರೆ.

ಇನ್ನೂ ನಾನು ಧಡಕ್ ಸಿನೆಮಾದ ಶೂಟಿಂಗ್ ವೇಳೆ ನಮ್ಮ ತಾಯಿ ಮೃತಪಟ್ಟ ವಾರ್ತೆ ತಿಳಿಯಿತು. ಆಕೆ ಇಲ್ಲದ ಕೊರತೆಯನ್ನು ಯಾರು ತುಂಬಲಾರರು. ಅಂದಿನ ಪರಿಸ್ಥಿತಿಗಳನ್ನು ಎದುರಿಸಿಕೊಳ್ಳಲು ತುಂಬಾ ಕಷ್ಟಕರವಾಗಿತ್ತು. ಆ ಸಮಯ ಹೇಗೆ ಕಳೆಯಿತು ಎಂಬುದು ನನಗೆ ಅಸ್ಪಷ್ಟವಾಗಿತ್ತು. ಆ ತಿಂಗಳು ಪೂರ್ಣ ನನಗೆ ಏಣಾಯ್ತು ಎಂಬುದು ತಿಳಿಯಲೇ ಇಲ್ಲ. ನಮ್ಮ ತಾಯಿ ನನಗೆ ಲಡ್ಡು ಎಂದು ಕರೆಯುತ್ತಿದ್ದರು. ಆಕೆಯಿಲ್ಲದ ಕೊರಗು ಈಗಲೂ ಸಹ ನನಗೆ ಕಾಡುತ್ತಿದೆ ಎಂದು ಜಾನ್ವಿ ಎಮೋಷನಲ್ ಆಗಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.