ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾದ ಆಲಿಯಾ ಭಟ್, ಕ್ಯಾಮೆರಾ ಮೆನ್ ಗೆ ಚಪ್ಪಲಿ ಎತ್ತಿಕೊಟ್ಟ ನಟಿ ಆಲಿಯಾ…..!

Follow Us :

ಬಣ್ಣದ ಲೋಕದ ಸ್ಟಾರ್‍ ಸೆಲೆಬ್ರೆಟಿಗಳು ಮಾಡುವಂತಹ ಕೆಲಸಗಳಿಗೆ ವಿಮರ್ಶೆಗಳು ಹಾಗೂ ಮೆಚ್ಚುಗೆಗೆ ಗುರಿಯಾಗುತ್ತಿರುತ್ತಾರೆ. ಕೆಲವೊಮ್ಮೆ ನಟಿಯರು ಮಾಡುವ ಒಳ್ಳೆಯ ಕೆಲಸಗಳಿಗೆ ಯಾವ ರೀತಿ ಮೆಚ್ಚುಗೆ ಸೂಚಿಸುತ್ತಾರೋ ಅದೇ ಮಾದರಿಯಲ್ಲಿ ಕೆಟ್ಟದ್ದನ್ನು ಮಾಡಿದರೇ ಟ್ರೋಲ್ ಸಹ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟಿ ಆಲಿಯಾ ಭಟ್ ಮಾಡಿದ ಒಂದು ಕೆಲಸಕ್ಕೆ ನೆಟ್ಟಿಗರು ಆಕೆಯನ್ನು ಹೊಗಳುತ್ತಿದ್ದಾರೆ. ಕ್ಯಾಮೆರಾಮೆನ್ ಒಬ್ಬರ ಚಪ್ಪಲಿಯನ್ನು ಎತ್ತಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದರು. ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಗರ್ಭಿಣಿಯಾದ ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಆಲಿಯಾ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾಗೂ ಮುಂಚೆ ಆಕೆ RRR ಸಿನೆಮಾದಲ್ಲಿ ಪ್ರಮುಖ ಪಾಯ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಸೌತ್ ಪ್ರೇಕ್ಷಕರನ್ನು ಸಹ ಸೆಳೆದುಕೊಂಡರು. ಇನ್ನೂ ಮಗುವಿನ ಲಾಲನೆ ಪಾಲನೆಯ ಜೊತೆಗೆ ಅವಾರ್ಡ್‌ಗಳ ಫಂಕ್ಷನ್ ಗಳಿಗೂ ಸಹ ಹಾಜರಾಗುತ್ತಾ ಸೋಷಿಯಲ್ ಮಿಡಿಯಾದಲ್ಲೂ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇದೀಗ ಆಲಿಯಾ ಭಟ್ ರವರಿಗೆ ಸಂಬಂಧಿಸಿದ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮುಂಬೈನಲ್ಲಿನ ಏರಿಯಾ ಒಂದರಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಲಿಯಾ ರವರ ಪೊಟೋಗಳನ್ನು ತೆಗೆಯಲು ಕ್ಯಾಮೆರಾ ಮೆನ್ ಗಳು ಮುಂದಾಗಿದ್ದಾರೆ. ಜೊತೆಗೆ ಆಲಿಯಾ ಸಹ ಪೊಟೋಗ್ರಾಫರ್‍ ಗಳಿಗೆ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ವೇಳೆ ಪೊಟೋಗಳನ್ನು ತೆಗೆಯುವ ಭರದಲ್ಲಿ ಓರ್ವ ಪೊಟೋಗ್ರಾಫರ್‍ ಹಾಕಿಕೊಂಡಿದ್ದ ಚಪ್ಪಲಿ ಜಾರಿ ಬೀಳುತ್ತದೆ. ಅದನ್ನು ನೋಡಿದ ಆಲಿಯಾ ಕೂಡಲೇ ತಾನೆ ಆ ಚಪ್ಪಲಿಯನ್ನು ತೆಗೆದು ಆತನ ಹತ್ತಿರ ಹೋಗಿ ಕೊಟ್ಟಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಲಿಯಾ ಭಟ್ ರವರ ಈ ವಿಡಿಯೋ ನೋಡಿದ ಅನೇಕರು ಆಕೆಯ ಸರಳತೆ, ಒಳ್ಳೆಯ ಗುಣಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಓರ್ವ ಸ್ಟಾರ್‍ ನಟಿ ದೊಡ್ಡ ಮಟ್ಟದ ಇಮೇಜ್ ಹೊಂದಿರುವ ನಟಿ ಈ ರೀತಿಯಲ್ಲಿ ಓರ್ವ ಪೊಟೋಗ್ರಾಫರ್‍ ಚಪ್ಪಲಿಯನ್ನು ಎತ್ತಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಆಕೆ ಮಾಡಿದ ಕೆಲಸಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಆಲಿಯಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಶೀಘ್ರದಲ್ಲೇ ಆಲಿಯಾ ಅಭಿನಯದ ಎರಡು ಸಿನೆಮಾಗಳು ತೆರೆಗೆ ಬರಲಿದೆ. ಅದರಲ್ಲಿ ಒಂದು ಹಾಲಿವುಡ್ ಮತ್ತೊಂದು ಬಾಲಿವುಡ್ ಸಿನೆಮಾ. ಹಾರ್ಟ್ ಆಫ್ ಸ್ಟೋನ್ ಎಂಬ ಸಿನೆಮಾದ ಮೂಲಕ ಆಲಿಯಾ ಹಾಲಿವುಡ್ ರಂಗಕ್ಕೆ ಕಾಲಿಡಲಿದ್ದಾರೆ.