ಮತ್ತೊಮ್ಮೆ ಎಮೋಷನಲ್ ಪೋಸ್ಟ್ ಹಂಚಿಕೊಂಡ ಕಲ್ಯಾಣ್ ದೇವ್, ಮೋಸದಿಂದ ಅಲ್ಲ, ನಂಬಿಕೆಯಿಂದ ಆಗುತ್ತೆ ಎಂದ ಕಲ್ಯಾಣ್ ದೇವ್….!

ಸುಮಾರು ತಿಂಗಳುಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಕೊಣಿದೆಲಾ ಹಾಗೂ ಕಲ್ಯಾಣ್ ದೇವ್ ಬೇರೆಯಾಗಿದ್ದಾರೆ, ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಅಧಿಕೃತವಾಗಿ ವಿಚ್ಚೇದನದ ಬಗ್ಗೆ ಘೋಷಣೆ ಮಾಡದಿದ್ದರೂ ಸಹ ಕೆಲವೊಂದು ಮೂಲಗಳಿಂದ ಇದು ಸತ್ಯ…

ಸುಮಾರು ತಿಂಗಳುಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಕೊಣಿದೆಲಾ ಹಾಗೂ ಕಲ್ಯಾಣ್ ದೇವ್ ಬೇರೆಯಾಗಿದ್ದಾರೆ, ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಅಧಿಕೃತವಾಗಿ ವಿಚ್ಚೇದನದ ಬಗ್ಗೆ ಘೋಷಣೆ ಮಾಡದಿದ್ದರೂ ಸಹ ಕೆಲವೊಂದು ಮೂಲಗಳಿಂದ ಇದು ಸತ್ಯ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಲ ಕೊಡುವಂತೆ ಕೆಲವೊಂದು ಆಧಾರಗಳೂ ಸಹ ಇದೆ ಎನ್ನಲಾಗಿದೆ. ಅವರಿಬ್ಬರ ಕೆಲವೊಂದು ಪೋಸ್ಟ್ ಗಳೂ ಸಹ ಈ ರೂಮರ್‍ ಗಳಿಗೆ ಮತಷ್ಟು ಬಲ ಕೊಡುತ್ತಿದೆ ಎನ್ನಲಾಗಿದೆ. ಇದೀಗ ಕಲ್ಯಾಣ್ ದೇವ್ ಹಂಚಿಕೊಂಡ ಮತ್ತೊಂದು ಪೋಸ್ಟ್ ಸಂಚಲನ ಸೃಷ್ಟಿ ಮಾಡಿದೆ.

ಚಿರು ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟ ಬಳಿಕ ಕಲ್ಯಾಣ್ ದೇವ್ ಮೆಗಾ ಕುಟುಂಬದಿಂದ ಬೇರೆಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ಎಮೋಷನಲ್ ಕಾಮೆಂಟ್ಸ್ ಸಹ ಮಾಡುತ್ತಿರುತ್ತಾರೆ. ಇನ್ನೂ ಶ್ರೀಜಾ ಸಹ ಕಲ್ಯಾಣ್ ದೇವ್ ಬಗ್ಗೆ ಎಲ್ಲೂ ಯಾವುದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ಆದರೆ ಇಬ್ಬರ ನಡುವೆ ವಿಬೇದಗಳು ಸೃಷ್ಟಿಯಾಗಿರುವುದು ಮಾತ್ರ ನಿಜ ಎಂದು ಹೇಳಲಾಗುತ್ತಿದೆ. ಇದೀಗ ಕಲ್ಯಾಣ್ ದೇವ್ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಶ್ರೀಜಾ ಹಾಗೂ ಕಲ್ಯಾಣ್  ದೇವ್ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ ಬಳಿಕ ಕಲ್ಯಾಣ್ ದೇವ್ ಹಾಗೂ ಶ್ರೀಜಾ ಸೋಷಿಯಲ್ ಮಿಡಿಯಾ ಖಾತೆಯ ಮೇಲೆ ಎಲ್ಲರು ಕಣ್ಣಾಕಿದ್ದಾರೆ. ಅವರು ಏನೇ ಪೊಸ್ಟ್ ಹಂಚಿಕೊಂಡರು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ

ಇದೀಗ ಕಲ್ಯಾಣ್ ದೇವ್ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ನಾವು ಎಂತಹ ಪ್ರಪಂಚದಲ್ಲಿ ಬದುಕಿದ್ದೇವೆ ಎಂದರೇ ಮೋಸ ಎಂದಿಗೂ ಯಾರನ್ನೂ ಆಶ್ಚರ್ಯಪಡಿಸುವುದಿಲ್ಲ, ಆದರೆ ನಂಬಿಕೆ ಆ ಕೆಲಸ ಮಾಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೊಸ್ಟ್ ಸಖತ್ ವೈರಲ್ ಆಗುತ್ತಿದೆ. ಮೋಸ ನಂಬಿಕೆ ಎಂದು ಕಲ್ಯಾಣ್ ದೇವ್ ಯಾರ ಬಗ್ಗೆ ಹೇಳಿದ್ದಾರೆ. ಯಾರನ್ನೋ ಟಾರ್ಗೆಟ್ ಮಾಡಿದ್ದಾರೆಂಬ ಅಭಿಪ್ರಾಯಗಳು ಸೋಷಿಯಲ್  ಮಿಡಿಯಾದಲ್ಲಿ ವ್ಯಕ್ತವಾಗುತ್ತಿವೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅವರಿಬ್ಬರ ನಡುವೆ ಕೋಲ್ಡ್ ವಾರ್‍ ನಡೆಯುತ್ತಲೇ ಇದೆ. ಈ ಹಿಂದೆ ಶ್ರೀಜಾ ತನಗೆ ಗೌರವ ಕೊಡುತ್ತಿಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಕೌಂಟರ್‍ ಆಗಿ ಪ್ರೀತಿ ಎಂಬುದನ್ನು ಪ್ರತಿ ವಿಚಾರದಲ್ಲಿ ಹುಡುಕಬಾರದು ಎಂದು ಶ್ರೀಜಾ ಕೌಂಟರ್‍ ಕೊಟ್ಟಿದ್ದರು. ಹೀಗೆ ಅವರ ನಡುವೆ ಕೋಲ್ಡ್ ವಾರ್‍ ನಡೆಯುತ್ತಲೆ ಇದೆ.

ಇನ್ನೂ ಶ್ರೀಜಾ ಕಳ್ಯಾಣ್ ದೇವ್ ರನ್ನು ಎರಡನೇ ವಿವಾಹ ಮಾಡಿಕೊಂಡರು. ಅವರಿಬ್ಬರಿಗೂ ಒಂದು ಹೆಣ್ಣು ಮಗುವಿದೆ. ಸದ್ಯ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡು ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇನ್ನೂ ಇಬ್ಬರೂ ಬೇರೆಯಾಗಿದ್ದಕ್ಕೆ ಅಧಿಕೃತ ಮಾಹಿತಿ ಇಲ್ಲ. ಅಷ್ಟೇಅಲ್ಲದೇ ಶ್ರೀಜಾ ಮತ್ತೆ ಮದುವೆಯಾಗಲಿದ್ದಾರೆಂಬ ಮಾತುಗಳೂ ಸಹ ಕೇಳಿಬರುತ್ತಿವೆ.