ಸಿದ್ದಾರ್ಥ್ ಹಾಗೂ ಅದಿತಿ ಜೊತೆಗೆ ಡ್ಯಾನ್ಸ್, ವೈರಲ್ ಆದ ವಿಡಿಯೋ, ಡೇಟಿಂಗ್ ಬಗ್ಗೆ ಕ್ಲಾರಿಟಿ ಸಿಕ್ಕದಂತೆನಾ?

ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ…

ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಇಬ್ಬರೂ ಹಾಡೊಂದಕ್ಕೆ ಭರ್ಜರಿಯಾಗಿ ನೃತ್ಯ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾಲಿವುಡ್ ಸಿನಿರಂಗದ ನಟ ಸಿದ್ದಾರ್ಥ್ ಅನೇಕ ನಟಿಯರೊಂದಿಗೆ ಅನಧಿಕೃತವಾಗಿ ಅಫೈರ್‍ ನಡೆಸಿದ್ದಾಗಿ ಕೇಳಿದ್ದೇವೆ. ಇದೀಗ ಅದಿತಿ ರಾವ್ ಹೈದರಿ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಅನೇಕ ಕಾರ್ಯಕ್ರಮಗಳಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುವುದು. ಜೊತೆಗೆ ವೇಕೆಷನ್ ಗಳಿಗೆ ಹೋಗುವುದು ಕ್ಯಾಮೆರಾಗಳಲ್ಲಿ ಸೆರಯಾಗಿದೆ. ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಹ ಆಗಿವೆ. ಇದೀಗ ಮತ್ತೊಮ್ಮೆ ಈ ಜೋಡಿಯ ಚರ್ಚೆ ಶುರುವಾಗಿದೆ. ವಿಶಾಲ್ ಸಿನೆಮಾದಲ್ಲಿನ ಹಾಡೊಂದಕ್ಕೆ ಇಬ್ಬರೂ ಜೊತೆಯಾಗಿ ಭರ್ಜರಿಯಾಗಿ ಕುಣಿದಿದ್ದಾರೆ. ಈ ವಿಡಿಯೋ ಅದಿತಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿಗೆ ನಟಿ ಸಿದ್ದಾರ್ಥ್ ಹಾಗೂ ಅದಿತಿ ರವರ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ, ಸದ್ಯ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಲವರ್‍ ಬಾಯ್ ಎಂದು ಖ್ಯಾತಿ ಪಡೆದುಕೊಂಡ ನಟ ಸಿದ್ದಾರ್ಥ್ ಹೈದರಾಬಾದ್ ಬ್ಯೂಟಿ ಅದಿತಿ ರಾವ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿಗೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಹಿಂದೆ ಮುಂಬೈ ಹೋಟೆಲ್ ನಲ್ಲಿ ಇಬ್ಬರೂ ಕ್ಯಾಮೆರಾ ಕಣ್ಣೀಗೆ ಬಿದಿದ್ದರು. ಜೊತೆಗೆ ಅದಿತಿ ಹುಟ್ಟುಹಬ್ಬಕ್ಕೆ ಸಿದ್ದಾರ್ಥ್ ವಿಶೇಷವಾಗಿ ಶುಭ ಕೋರಿದ್ದರು. ಇನ್ನೂ ರೂಮರ್‍ ಗಳು ಕೇಳಿಬರುತ್ತಿದ್ದರೂ ಸಹ ಈ ಬಗ್ಗೆ ಇವರಿಬ್ಬರಲ್ಲಿ ಯಾರೂ ಸಹ ಸ್ಪಂಧಿಸಿಲ್ಲ. ಇದೀಗ ಮತ್ತೊಂದು ಸುದ್ದಿ ಈ ಜೋಡಿಯ ಬಗ್ಗೆ ಹರಿದಾಡುತ್ತಿದೆ.

ಇನ್ನೂ ಸಿದ್ದಾರ್ಥ್ ಮೇಘನ ಎಂಬ ಯುವತಿಯೊಂದಿಗೆ ಕಳೆದ 2003 ರಲ್ಲಿ ವಿವಾಹವಾಗಿದ್ದರು. ಬಳಿಕ ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ 2007 ರಲ್ಲಿ ಬೇರೆಯಾದರು. ಬಳಿಕ ಸಿದ್ದಾರ್ಥ್ ಬೇರೆ ಮದುವೆಯಾಗಲಿಲ್ಲ. ಇನ್ನೂ ನಟಿ ಅದಿತಿ ರಾವ್ ಸಹ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದು, ಆಕೆ ಸಹ ಪತಿಯೊಂದಿಗೆ ಯಾರಿಗೂ ತಿಳಿಯದಂತೆ ವಿಚ್ಚೇದನ ಪಡೆದುಕೊಂಡಿದ್ದಾರೆ. ಮಹಾಸಮುದ್ರ ಸಿನೆಮಾದಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ನಟಿಸಿದ್ದರು. ಈ ಸಿನೆಮಾದ ಬಳಿಕ ಇವರಿಬ್ಬರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.