News

ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ ಸೀಮಾ ಹೈದರ್, ಭಾರತ-ನೇಪಾಳ ಗಡಿಯ ಸೇವೆಯಲ್ಲಿದ್ದ ಇನ್ಸ್ಪೆಕ್ಟರ್, ಕಾನಿಸ್ಟೇಬಲ್ ಅಮಾನತ್ತು….!

ಕೆಲವು ದಿನಗಳಿಂದ ದೇಶದಲ್ಲಿ ಸೀಮಾ ಹೈದರ್‍ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಪಬ್ ಜಿ ಗೇಮ್ ಮೂಲಕ ಪರಿಚಯವಾದ ಗೆಳನಿಯಗಾಗಿ ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಳು. ಪಾಕಿಸ್ತಾನದಿಂದ ನೇಪಾಳ ಗಡಿ ದಾಟಿ ಕಳೆದ ಮೇ.13 ರಂದು ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದರು. ಈ ಸಂಬಂಧ ಸಶಸ್ತ್ರ ಸೀಮಾ ಬಲದ ಒಬ್ಬ ಇನ್ಸ್‌ ಪೆಕ್ಟರ್‍ ಹಾಗೂ ಹೆಡ್ ಕಾನಿಸ್ಟೇಬಲ್ ರನ್ನು ಅಮಾನತ್ತು ಗೊಳಿಸಿ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸೀಮಾ ಹೈದರ್‍ ಪಬ್ ಜಿ ಮೂಲಕ ಭಾರತದ ಉತ್ತರ ಪ್ರದೇಶದ ಯುವಕನೊಂದಿಗೆ ಪರಿಚಯ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೀಮಾ ವಿವಾಹತಿ ಮಹಿಳೆ. ಆಕೆಗೆ ನಾಲ್ಕು ಮಂದಿ ಮಕ್ಕಳು ಸಹ ಇದ್ದಾರೆ. ಆಕೆಯ ಪತಿ ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೂ ಆನ್ ಲೈನ್ ಗೇಮ್ ಆಡುತ್ತಿದ್ದಂತಹ ಸೀಮಾಗೆ ಕಳೆದ 2019 ರಲ್ಲಿ ಉತ್ತರ ಪ್ರದೇಶದ ಗ್ರೇಟರ್‍ ನೊಯ್ಡಾದ ರಬುಪುರ ಎಂಬ ಪ್ರದೇಶದ ನಿವಾಸಿ ಸಚಿನ್ ಮೀನಾ ಎಂಬಾತ ಪರಿಚಯವಾಗಿದ್ದಾನೆ. ಇಬ್ಬರ ನಡುವೆ ಬಾಂದವ್ಯ ಹುಟ್ಟಿಕೊಂಡಿದ್ದು, ನೇಪಾಳದಲ್ಲಿ ಭೇಟಿಯಾಗಿ ಅಲ್ಲಿಯೇ ಒಟ್ಟಿಗೆ ವಾಸ ಮಾಡಲು ಸಹ ಪ್ಲಾನ್ ಮಾಡಿದ್ದರಂತೆ. ಅದರಂತೆ ಸೀಮಾ ತನ್ನ ನಾಲ್ಕು ಮಂದಿ ಮಕ್ಕಳೊಂದಿಗೆ ಪಾಕಿಸ್ತಾನದಿಂದ ದುಬೈ ಮೂಲಕ ನೇಪಾಳಕ್ಕೆ ತಲುಪಿದ್ದರು. ಬಳಿಕ ನೇಪಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದರು. ಇನ್ನೂ ಪ್ರಕರಣ ಬೆಳಕಿಗೆ ಬಂದ ಬಳಿಕ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ ಸೀಮಾ ರನ್ನು ಹಾಗೂ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಸಚಿನ್ ರವರನ್ನೂ ಸಹ ಜು.4 ರಂದು ಬಂಧಿಸಲಾಗಿತ್ತು. ಜು.7 ರಂದು ಅವರಿಬ್ಬರಿಗೂ ಜಾಮೀನು ಮಂಜೂರಾಗಿತ್ತು. ಸದ್ಯ ಸೀಮಾ ಮಕ್ಕಳೊಂದಿಗೆ ಸಚಿನ್ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾರೆ.

ಇನ್ನೂ ಸೀಮಾ ಹೈಧರ್‍ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರು ಅಮಾನತ್ತಾಗಿದ್ದಾರೆ. ಸುಮಾರು 1751 ಕಿಮೀ ಉದ್ದದ ಭಾರತ ನೇಪಾಳ ಗಡಿಯ ಕಾವಲು ಕಾಯುವ ಜವಾಬ್ದಾರಿಯನ್ನು ಸಶಸ್ತ್ರ ಸೀಮಾ ಬಲದ ಹೊತ್ತುಕೊಂಡಿದೆ. ಆದರೆ ಸೀಮಾ ಹಾಗೂ ಆಕೆಯ ನಾಲ್ವರು ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ ಅನ್ನು ಇನ್ಸ್ ಪೆಕ್ಟರ್‍ ಹಾಗೂ ಕಾನಿಸ್ಟೇಬಲ್ ತಪಾಸಣೆ ನಡೆಸಿದ್ದರು. ಆದರೂ ಸಹ ಸೀಮಾ ಅಕ್ರಮ ಪ್ರವೇಶದ ಬಗ್ಗೆ ತಿಳಿಯಲು ವಿಫಲರಾದರು.  ಆದ್ದರಿಂದ 43ನೇ ಬೆಟಾಲಿಯನ್ ಇನ್ಸ್ ಪೆಕ್ಟರ್‍ ಸುಜಿತ್ ಕುಮಾರ್‍ ವರ್ಮಾ ಹಾಗೂ ಹೆಡ್ ಕಾನಿಸ್ಟೇಬಲ್ ಚಂದ್ರ ಕಮಲ್ ಕಲಿತಾ ಎಂಬುವವರುನ್ನು ಅಮಾನತ್ತಿನಲ್ಲಿರಿಸಿದ್ದಾರೆ. ಜೊತೆಗೆ ಇಲಾಖೆ ತನಿಖೆಗೆ ಆದೇಶ ಮಾಡಲಾಗಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೂ ಇಬ್ಬರೂ ಅಮಾನತ್ತಿಲ್ಲಿರಿಸಲಾಗಿದೆ ಎನ್ನಲಾಗಿದೆ.

Most Popular

To Top