ಡೇಟಿಂಗ್ ರೂಮರ್ ಬಗ್ಗೆ ರಿಯಾಕ್ಟ್ ಆದ ಶೋಭಿತಾ, ನನ್ನ ತಪ್ಪಿಲ್ಲದ ರೂಮರ್ ಗೆ ರಿಪ್ಲೆ ಯಾಕೆ ಬೇಕು ಎಂದ ನಟಿ…..!

ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ತೆಲುಗು ಮೂಲದ ನಟಿಯಾದರೂ ಸಹ ಬಾಲಿವುಡ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ.  ಹಾಟ್ ಬ್ಯೂಟಿ ಶೋಭಿತಾ ಧೂಳಿಪಾಲ ಬಾಲಿವುಡ್ ನಟಿಯರನ್ನೂ ಸಹ ಮೀರಿ ಹಾಟ್ ಪೋಸ್ ಗಳನ್ನು ಕೊಡುತ್ತಾರೆ. ಇನ್ನೂ ಆಕೆ ಸಿನೆಮಾಗಳು, ಪೊಟೋಶೂಟ್ಸ್ ಮೂಲಕ ಸುದ್ದಿಯಾಗುವುದರ ಜೊತೆಗೆ ಕೆಲವೊಂದು ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಡೇಟಿಂಗ ನಡೆಸುತ್ತಿದ್ದಾರೆ ಎಂಬ ರೂಮರ್ ಹರಿದಾಡುತ್ತಿದೆ. ಇದೀಗ ಆಕೆ ಈ ರೂಮರ್ ಬಗ್ಗೆ ಶಾಕಿಂಗ್ ರಿಪ್ಲೆ ಕೊಟ್ಟಿದ್ದಾರೆ.

ನಟಿ ಶೋಭಿತಾ ಧೂಳಿಪಾಲ ಕೊನೆಯದಾಗಿ ಪೊನ್ನಿಯನ್ ಸೆಲ್ವನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ರಾಮನ್ ರಾಘವ್ 2.0 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತೆಲುಗು ಮೂಲದ ನಟಿಯಾದರೂ ಸಹ ಆಕೆ ಮಾತ್ರ ಬಾಲಿವುಡ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತೆಲುಗಿಗಿಂತ ಆಕೆ ಹಿಂದಿಯಲ್ಲೇ ತುಂಬಾ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಗೂಢಾಚಾರಿ ಸಿನೆಮಾದ ಮೂಲಕ ಸೌತ್ ಸಿನೆಮಾಗಳತ್ತ ಮುಖ ಮಾಡಿದರು. ಇತ್ತಿಚಿಗೆ ಆಕೆಯ ಬಗ್ಗೆ ರೂಮರ್‍ ಒಂದು ಹರಿದಾಡುತ್ತಿದೆ. ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ರೂಮರ್‍ ಗಳು ಹರಿದಾಡುತ್ತಲೇ ಇದೆ. ಈ ಬಗ್ಗೆ ಶೋಭಿತಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಶೋಭಿತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಕೆಯ ಬಗ್ಗೆ ಅನೇಕ ವಿಚಾರಗಳನ್ನು ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ತನ್ನ ಮೇಲೆ ಬರುತ್ತಿರುವಂತಹ ಡೇಟಿಂಗ್ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನನ್ನ ಬಗ್ಗೆ ರೂಮರ್‍ ಗಳು ಹೆಚ್ಚು ಬರಲಿಲ್ಲ ಎಂದು ಕೊಳ್ಳುತ್ತೇನೆ. ಯಾರೋ ಒಬ್ಬರು ತಿಳಿಯದೇ ಮಾತನಾಡಿದ್ದರ ಬಗ್ಗೆ ರಿಯಾಕ್ಟ್ ಆಗುವ ಅವಶ್ಯಕತೆಯಿಲ್ಲ. ನನ್ನ ತಪ್ಪಿಲ್ಲದೇ ಬರುವಂತಹ ರೂಮರ್‍ ಗಳ ಬಗ್ಗೆ ರಿಪ್ಲೆ ಕೊಡುವಂತ ಅವಸರವೇ ಇಲ್ಲ ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಶೋಭಿತಾ ಮಾತನಾಡುತ್ತಾ ನನಗೆ ಡ್ಯಾನ್ಸ್ ಮಾಡುವುದೆಂದರೇ ತುಂಬಾ ಇಷ್ಟ. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲಿ ನಟಿಸಿದ್ದೇನೆ. ಈ ಸಿನೆಮಾದಲ್ಲಿ ನಾಲ್ಕು ಹಾಡುಗಳಿಗೆ ನೃತ್ಯ ಮಾಡಿದ್ದು ನನಗೆ ತುಂಬಾ ಅದ್ಬುತವಾದ ಅನುಭವ ತಂದುಕೊಟ್ಟಿದೆ.  ಎಂತಹುದೇ ಪರಿಸ್ಥಿತಿ ಇರಲಿ ಜೀವನ ಮುಂದೆ ಸಾಗಬೇಕು. ಅವಶ್ಯಕತೆಯಿಲ್ಲದ ವಿಚಾರಗಳ ಬಗ್ಗೆ ಯೋಚನೆ ಮಾಡುವ ಕೆಲಸವೇ ಇಲ್ಲ ಎಂದಿದ್ದಾರೆ. ಇನ್ನೂ ಶೋಭಿತಾ ಹಾಗೂ ನಾಗಚೈತನ್ಯ ಅವರ ಬಗೆಗಿನ ರೂಮರ್‍ ಗಳ ಬಗ್ಗೆ ಕ್ಲಾರಿಟಿ ಕೊಡುತ್ತಿದ್ದರೂ ಸಹ ರೂಮರ್‍ ಗಳು ಮಾತ್ರ ನಿಲ್ಲುತ್ತಿಲ್ಲ.