ಪುಷ್ಪಾ-2 ಸಿನೆಮಾದಲ್ಲಿ ಮೆಗಾ ಡಾಟರ್ ನಿಹಾರಿಕಾ ಕೊಣಿದೆಲಾ, ಆಕೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ?

ಟಾಲಿವುಡ್ ಸ್ಟಾರ್‌ ನಿರ್ದೇಶಕ ಸುಕುಮಾರ್‍ ಹಾಗೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ತೆರೆಕಂಡ ಪುಷ್ಪಾ ಸಿನೆಮಾ ಇಡೀ ವಿಶ್ವದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿದೆ. ಈ ಸಿನೆಮಾದ ಸೀಕ್ವೆಲ್ ಪುಷ್ಪಾ-2 ಸಿನೆಮಾಗಾಗಿ ಅನೇಕರು ತುದಿಗಾಲಿನ ಮೇಲೆ ಕಾದು ಕುಳಿತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಶುರುವಾದಾಗಿನಿಂದ ಅನೇಕ ರೂಮರ್‍ ಗಳು, ಸುದ್ದಿಗಳು ಕೇಳಿಬರುತ್ತಲೇ ಇದ್ದು, ಇದೀಗ ಪುಷ್ಪಾ-2 ಸಿನೆಮಾದಲ್ಲಿ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ನಟಿಸಲಿದ್ದು ಆಕೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ.

ಪುಷ್ಪಾ ಸಿನೆಮಾ ಇಡೀ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಅನೇಕರು ಕಾಯುತ್ತಿದ್ದಾರೆ. ಪುಷ್ಪಾ ಸಿನೆಮಾಗೂ ಮೀರಿದಂತೆ ಪುಷ್ಪಾ-2 ಸಿನೆಮಾ ತೆರೆಗೆ ತರಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾದ ಮೇಲೆ ಈಗಾಗಲೇ ಅನೇಕ ಅಪ್ಡೇಟ್ ಗಳು, ರೂಮರ್‍ ಗಳೂ ಸಹ ಕೇಳಿಬರುತ್ತಿವೆ. ಆ ಮೂಲಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟುತ್ತಿದೆ. ಈ ಹಾದಿಯಲ್ಲೇ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ಪುಷ್ಪಾ-2 ಸಿನೆಮಾದ ಕ್ರೇಜಿ ಅಪ್ಡೇಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇಡೀ ದೇಶದಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲೇ ಅನೇಕರು ಪುಷ್ಪಾ-2 ಸಿನೆಮಾಗಾಗಿ ಕಾಯುತ್ತಿದ್ದಾರೆ. ಪುಷ್ಪಾ-2 ಸಿನೆಮಾದ ಅಪ್ಡೇಟ್ ಗಾಗಿ ಈ ಹಿಂದೆ ಪ್ರತಿಭಟನೆಗಳನ್ನು ನಡೆಸಿದ ಉದಾಹರಣೆಗಳಿವೆ. ಇದೀಗ ಪುಷ್ಪಾ-2 ಸಿನೆಮಾದಲ್ಲಿ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ನಿಹಾರಿಕಾ ಗಿರಿಜನ ಯುವತಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಆ ಪಾತ್ರಕ್ಕಾಗಿ ನಿಹಾರಿಕಾರವರನ್ನು ಸಂಪರ್ಕ ಮಾಡಿದ್ದು, ಆಕೆ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲದೇ ಇದ್ದರೂ ಸಹ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಇದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಮೆಗಾ ಅಭಿಮಾನಿಗಳು ಮಾತ್ರ ಪುಲ್ ಥ್ರಿಲ್ ಆಗಿದ್ದಾರೆ.

ಇನ್ನೂ ಪುಷ್ಪಾ-2 ಸಿನೆಮಾದಲ್ಲಿ ಅನೇಕ ಸ್ಟಾರ್‍ ಗಳು ನಟಿಸಲಿದ್ದಾರಂತೆ. ಈ ಹಿಂದೆ ಪುಷ್ಪಾ-2 ಸಿನೆಮಾದ ಶೂಟಿಂಗ್ ಸೆಟ್ ನಿಂದ ಕೆಲವೊಂದು ಪೊಟೋಗಳೂ ಸಹ ಲೀಕ್ ಆಗಿತ್ತು. ಅಲ್ಲು ಅರ್ಜುನ್ ರವರ ಲುಕ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಈ ಸಿನೆಮಾವನ್ನು ಭಾರಿ ಮಟ್ಟದಲ್ಲೇ ತೆರೆಗೆ ತರಲು ಮೈತ್ರಿ ಮೂವಿ ಮೇಕರ್ಸ್ ಸಹ ಪ್ಲಾನ್ ಮಾಡಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಅಂಗವಾಗಿ ಪುಷ್ಪಾ-2 ಟೀಸರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ.