Film News

ಬೆಲ್ಲಿ ಡ್ಯಾನ್ಸ್ ಮೂಲಕ ಸೊಂಟ ಬಳುಕಿಸಿದ ಯಂಗ್ ಬ್ಯೂಟಿ ಕೃತಿ ಶೆಟ್ಟಿ, ಸೊಂಟವನ್ನು ಬುಗರಿಯಂತೆ ತಿರುಗಿಸಿದ ಬ್ಯೂಟಿ…….!

ಯಂಗ್ ಬ್ಯೂಟಿ ನಟಿ ಕೃತಿ ಶೆಟ್ಟಿ ಉಪ್ಪೆನ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡು ನಾಲ್ಕು ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಇದರಿಂದ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ಸ್ಟಾರ್‍ ಆಗಿಬಿಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳೂ ಸಹ ಕಂಡವು. ಆದರೆ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಬಹುದು. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಟಾಲಿವುಡ್ ಯಂಗ್ ಬ್ಯೂಟಿ ಕೃತಿ ಶೆಟ್ಟಿ ಉಪ್ಪೆನಾ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಮತ್ತೆರಡು ಸಿನೆಮಾಗಳು ಹಿಟ್ ಪಡೆದುಕೊಂಡು ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಆಕೆಯನ್ನು ಗೋಲ್ಡನ್ ಲೆಗ್ ಎಂತಲೂ ಕರೆದರು ಆದರೆ ಬಳಿಕ ತೆರೆಕಂಡ ಸಿನೆಮಾಗಳು ಸೋತವು. ಆಕೆಯ ಕೆರಿಯರ್‍ ಗ್ರಾಫ್ ಸಹ ಡೌನ್ ಆಗುತ್ತಾ ಬಂದಿದೆ. ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾಗಿದೆ. ಹ್ಯಾಟ್ರಿಕ್ ಸೋಲು ಕಂಡ ಕೃತಿ ಶೆಟ್ಟಿಗೆ ಟಾಲಿವುಡ್ ನಲ್ಲಿ ಆಫರ್‍ ಗಳು ಕಡಿಮೆಯಾಗಿದೆ. ಆದರೆ ಕಾಲಿವುಡ್ ನಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಂಡು ತಮಿಳು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ. ಅದರಲ್ಲೂ ಕಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಆಕೆ ಆಕೆಯ ವರಸೆ ಸಹ ಬದಲಾಗಿದೆ. ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಹಾಟ್ ಅವತಾರ ತಾಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ನಟಿ ಕೃತಿ ಶೆಟ್ಟಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಇದೀಗ ಆಕೆ ಬೆಲ್ಲಿ ಡ್ಯಾನ್‌ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಆಕೆ ಈ ಮಾದರಿಯಲ್ಲಿ ಸೊಂಟ ಬಳುಕಿಸಿದ್ದಾರೆ ಎನ್ನಬಹುದಾಗಿದೆ. ಬುಗುರಿಯಂತೆ ಆಕೆ ಸೊಂಟ ತಿರುಗಿಸಿದ್ದಾರೆ. ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನೆಮಾದಲ್ಲಿನ ಅರಬಿಕ್ ಕುತು ಸಾಂಗ್ ಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಲೆ ಆಕೆ ಸೊಂಟ, ನಾವೆಲ್ ಸೌಂದರ್ಯವನ್ನು ಶೋ ಮಾಡುವ ಮೂಲಕ ಫಾಲೋವರ್ಸ್‌ಗಳನ್ನು ಮಸ್ಮರೈಜ್ ಮಾಡಿದ್ದಾರೆ. ಮೊದಲಿಗಿಂತ ಮತಷ್ಟು ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ಕೃತಿಶೆಟ್ಟಿ ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಸದ್ಯ ಕೃತಿ ಶೆಟ್ಟಿ ಕಾಲಿವುಡ್ ಸಿನೆಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ವಿಚಾರಕ್ಕೆ ಬಂದರೇ, ತಮಿಳಿನಲ್ಲಿ ಆಕೆ ವಾ ವಾತಿಯಾರೆ,  ಜೀನಿ, ಲವ್ ಇನ್ಸುರೆನ್ಸ್ ಕಾರ್ಪೋರೇಷನ್ ಸಿನೆಮಾದ ಜೊತೆಗೆ ತೆಲುಗಿನಲ್ಲಿ ಶರ್ವಾ35 ಹಾಗೂ ಮಲಯಾಳಂ ನಲ್ಲೊಂದು ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top