Film News

ಗೋಲ್ಡನ್ ಸೀರೆಯಲ್ಲಿ ಮಿಂಚಿದ ಗೋಲ್ಡನ್ ಬ್ಯೂಟಿ ಸಪ್ತಮಿ ಗೌಡ, ಚಿನ್ನದ ಗೊಂಬೆಯಂತಿದ್ದೀಯಾ ಎಂದ ಫ್ಯಾನ್ಸ್……!

ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ ಈಗಾಗಲೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ದೇಶದ ಅನೇಕ ಸಿನಿರಂಗಗಳ ಸೆಲೆಬ್ರೆಟಿಗಳೂ ಸಹ ಈ ಸಿನೆಮಾವನ್ನು ಮನಸಾರೆ ಹೊಗಳಿದ್ದಾರೆ. ಈ ಸಿನೆಮಾದ ಮೂಲಕ ಫೇಂ ಪಡೆದುಕೊಂಡಂತಹ ಸಪ್ತಮಿ ಗೌಡ ಸಹ ರಾಷ್ಟ್ರ ಮಟ್ಟದಲ್ಲಿ ಫೇಂ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಆಕೆ ಗೋಲ್ಡನ್ ಕಲರ್‍ ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಯಂಗ್ ನಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ ರಿಷಭ್ ಶೆಟ್ಟಿಯವರ ಕಾಂತಾರ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಕಾಂತಾರ ಸಿನೆಮಾದ ಬಳಿಕ ಸಪ್ತಮಿ ಗೌಡ ರವರಿಗೆ ಭಾರಿ ಆಫರ್‍ ಗಳು ಹುಡುಕಿಕೊಂಡು ಬರುತ್ತಿವೆ. ಈ ಹಾದಿಯಲ್ಲೇ ಆಕೆ ವಿವೇಕ್ ಅಗ್ನಿಹೋತ್ರಿ ರವರ ದಿ ವ್ಯಾಕ್ಸಿನ್ ವಾರ್‍ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ಕಾಳಿ ಎಂಬ ಕನ್ನಡ ಸಿನೆಮಾದಲ್ಲಿ ಅಭಿಷೇಕ್ ಅಂಬರೀಶ್ ಜೊತೆಗೂ ನಟಿಸುತ್ತಿದ್ದಾರೆ. ಇನ್ನೂ ಸಾಲು ಸಾಲು ಸಿನೆಮಾಗಳ ನಡುವೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ನಿದ್ದೆಗೆಡಿಸುತ್ತಿರುತ್ತಾರೆ.

ಇನ್ನೂ ನಟಿ ಸಪ್ತಮಿ ಗೌಡ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಸಪ್ತಮಿ ಗೋಲ್ಡನ್ ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ. ಆಕರ್ಷಣೆ ಮಾಡುವಂತಹ ಗೋಲ್ಡನ್ ಕಲರ ಸೀರೆಯಲ್ಲಿ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಸಿಂಪಲ್ ಆಗಿ ಹೇರ್‍ ಸ್ಟೈಲ್ ಮಾಡಿಕೊಂಡು, ಹಣೆಗೆ ಕಪ್ಪು ಬಣ್ಣದ ಬಿಂದಿಯನ್ನು ಇಟ್ಟು, ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕಲರ್‍ ಸೀರೆಯಲ್ಲಿ ತುಂಬಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದು, ಫಾಲೋವರ್ಸ್‌ಗಳನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿರುವ ಮೈತ್ರಿ ಮುಟ್ಟಿನ ಕಪ್  ಯೋಜನೆಗೆ ನಟಿ ಸಪ್ತಮಿ ಗೌಡ ರಾಯಭಾರಿಯಾಗಿದ್ದಾರೆ. ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಪ್ತಮಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಸಪ್ತಮಿ ಕೊನೆಯದಾಗಿ ದಿ ವ್ಯಾಕ್ಸಿನ್ ವಾರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.

Most Popular

To Top