ಪವನ್ ಕಲ್ಯಾಣ್ ಅಲ್ಲ, ಪವರ್ ಸ್ಟಾರ್ ಅನ್ಬೇಕು ಎಂಬ ಕ್ರಿಕೆಟರ್, ಸ್ಟಾರ್ ಕ್ರಿಕೆಟರ್ ಇರ್ಫಾನ್ ಪಠಾನ್ ಕಾಮೆಂಟ್ಸ್ ವೈರಲ್……!

ಸಿನಿರಂಗದಲ್ಲಿ ಹಾಗೂ ರಾಜಕೀಯದಲ್ಲಿ ತುಂಬಾನೆ ಫೇಂ ಪಡೆದುಕೊಂಡಂತಹ ನಟ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ನಟ ಪವನ್ ಕಲ್ಯಾಣ್ ರವರು ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ.…

ಸಿನಿರಂಗದಲ್ಲಿ ಹಾಗೂ ರಾಜಕೀಯದಲ್ಲಿ ತುಂಬಾನೆ ಫೇಂ ಪಡೆದುಕೊಂಡಂತಹ ನಟ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ನಟ ಪವನ್ ಕಲ್ಯಾಣ್ ರವರು ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಸಿನಿರಸಿಕರನ್ನು ಮಾತ್ರವಲ್ಲದೇ ರಾಜಕೀಯ ನಾಯಕರು, ಕ್ರಿಕೆಟಿಗರೂ ಸೇರಿದಂತೆ ವಿವಿಧ ರಂಗಗಳ ಜನರು ಸಹ ಪವನ್ ಕಲ್ಯಾಣ್ ರವರ ಮೇಲೆ ಅಭಿಮಾನ ಬೆಳೆಸಿಕೊಂಡಿದ್ದಾರೆ. ಇದೀಗ ಸ್ಟಾರ್‍ ಕ್ರಿಕೆಟಿಗ ಇರ್ಫಾನ್ ಪಠಾನ್ ಪವನ್ ಕಲ್ಯಾಣ್ ರವರ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ.

ಸ್ಟಾರ್‍ ಕ್ರಿಕೆಟರ ಇರ್ಫಾನ್ ಪಠಾನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪವನ್ ಕಲ್ಯಾಣ್ ರವರ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಅಲ್ಲ ಪವರ್‍ ಸ್ಟಾರ್‍ ಎಂದು ಕರೆಯಬೇಕು ಎಂದು ಹೇಳಿದ್ದಾರೆ. ಮಾಜಿ ಟೀಂ ಇಂಡಿಯಾ ಆಟಗಾರ ಇರ್ಫಾನ್ ಪಠಾನ್ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಆತ ನಟಿಸಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಕಮರ್ಷಿಯಲ್ ಆಗಿ ಒಳ್ಳೆಯ ಸಕ್ಸಸ್ ಕಂಡಿವೆ. ಸ್ಟೇಜ್ ಮೇಲೆ ಆಂಕರ್‍ ಮಾತನಾಡುವಾಗ ಪವನ್ ಕಲ್ಯಾಣ್ ಎಂದು ಹೇಳಿದರೇ, ಕೂಡಲೇ ಪವನ್ ಕಲ್ಯಾಣ್ ಅಲ್ಲ ಪವರ್‍ ಸ್ಟಾರ್‍ ಎಂದು ಕರೆಯಬೇಕು ಎಂದು ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪವನ್ ಕಲ್ಯಾಣ್ ಅಭಿಮಾನಿಗಳು ಈ ವಿಡಿಯೋ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟ ಪವನ್ ಕಲ್ಯಾಣ್ ರವರು ಎಂದರೇ ಅನೇಕ ಸೆಲೆಬ್ರೆಟಿಗಳೂ ಸಹ ಅಭಿಮಾನಿಸುತ್ತಾರೆ. ಪವನ್ ಕಲ್ಯಾಣ್ ರವರು ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಗುರ್ತಿಸಿಕೊಳ್ಳದೇ ಇದ್ದರೂ ಸಹ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಕ್ರೇಜ್ ಹೊಂದಿದ್ದಾರೆ. ಸಂಭಾವನೆಯ ವಿಚಾರಕ್ಕೆ ಬಂದರೇ ಟಾಪ್ ಸ್ಥಾನದಲ್ಲಿರುತ್ತಾರೆ. ಸದ್ಯ ಸಿನಿಮಾಗಳಿಗೆ ಬ್ರೇಕ್ ಕೊಟ್ಟು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಇನ್ನೂ ಈಗಾಗಲೇ ಪವನ್ ಕಲ್ಯಾಣ್ ರವರ ಹರಿಹರ ವೀರಮಲ್ಲು, ಉಸ್ತಾದ್ ಭಗತ್ ಸಿಂಗ್, OG ಸಿನೆಮಾಗಳು ಶೂಟಿಂಗ್ ಹಂತದಲ್ಲಿವೆ. ಕೆಲವು ದಿನಗಳಿಂದ ನಿರ್ದೇಶಕ ಕ್ರಿಷ್ ಹರಿಹರ ವೀರಮಲ್ಲು ಸಿನೆಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗುತ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕಿದೆ. ಪವನ್ ಕಲ್ಯಾಣ್ ರವರ ಕೆರಿಯರ್‍ ನಲ್ಲಿ ಹರಿಹರ ವೀರಮಲ್ಲು ಹೆವಿ ಬಜೆಟ್ ಸಿನೆಮಾ ಎಂದೇ ಹೇಳಬಹುದಾಗಿದೆ. ಈ ಸಿನೆಮಾ ಯಾವಾಗ ಪೂರ್ಣಗೊಳ್ಳುತ್ತದೆ, ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಮಾತ್ರ ಕಾಯುತ್ತಿದ್ದಾರೆ.