ಶೂಟಿಂಗ್ ನಲ್ಲಿ ಅವಘಡ, ನಟಿ ಕಲ್ಯಾಣಿ ಪ್ರಿಯದರ್ಶಿನಿಗೆ ಗಂಭೀರ ಗಾಯಗಳು…..!

Follow Us :

ಅನೇಕ ಸಿನೆಮಾಗಳ ಶೂಟಿಂಗ್ ವೇಳೆ ಅವಘಡಗಳು ಸಂಭವಿಸುತ್ತಿರುತ್ತವೆ. ಶೂಟಿಂಗ್ ನಲ್ಲಿ ಭಾಗಿಯಾಗಿದ ನಟ-ನಟಿಯರು ಸೇರಿದಂತೆ ಅನೇಕ ಕಲಾವಿದರು ಸಹ ಗಾಯಗೊಂಡಿರುವ ಘಟನೆಗಳನ್ನು ಬಹಳಷ್ಟು ಕೇಳಿದ್ದೇವೆ. ಇದೀಗ ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಕಲ್ಯಾಣಿ ಪ್ರಿಯದರ್ಶಿನಿ ಸಹ ಶೂಟಿಂಗ್ ನಲ್ಲಿ ಗಾಯಗೊಂಡಿದ್ದಾರೆ. ಆಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಆಕೆ ಗಾಯಗೊಂಡಿದ್ದು, ಈ ಸಂಬಂಧ ವಿಡಿಯೋ ಮೂಲಕ ಆಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಯಂಗ್ ಬ್ಯೂಟಿ ಕಲ್ಯಾಣಿ ಪ್ರಿಯದರ್ಶಿನಿ ಸೌತ್ ಸಿನಿರಂಗದಲ್ಲಿ ಅದರಲ್ಲೂ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ತೆಲುಗಿನ ಅನೇಕ ಸಿನೆಮಾಗಳ ನಟಿಸಿದ್ದಾರೆ. ಹಲೋ, ಚಿತ್ರಲಹರಿ, ರಣರಂಗಂ ಎಂಬ ಸಿನೆಮಾಗಳ ಮೂಲಕ ಯುವಕರಲ್ಲಿ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡರು. ಆದರೆ ಆಕೆಗೆ ಟಾಲಿವುಡ್ ನಲ್ಲಿ ಸಾಲೀಡ್ ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಮಲಯಾಳಂ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ವೇಳೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೀಗ ಆಕೆ ಮಲಯಾಳಂ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ವೇಳೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಲಯಾಳಂ ನಲ್ಲಿ ಆಂಟೋನಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಕೆಲವೊಂದು ಆಕ್ಷನ್ ದೃಶ್ಯಗಳಲ್ಲಿ ಕಲ್ಯಾಣಿ ನಟಿಸುತ್ತಿದ್ದಾಗ ದಿಢೀರ್‍ ನೇ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಕಲ್ಯಾಣಿಯ ಎಡಗೈಗೆ ಗಾಯವಾಗಿದೆ. ಈ ವಿಚಾರವನ್ನು ಕಲ್ಯಾಣಿ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಕಾಮೆಂಟ್ಸ್ ಸಹ ಮಾಡಿದ್ದಾರೆ. ಸ್ಟಂಟ್ ಗಳು ನನ್ನಂತ ಬಲಹೀನರವರಿಗಲ್ಲ ಎಂದು ಆಕೆ ಕ್ಯಾಪ್ಷನ್ ಹಾಕಿದ್ದಾರೆ. ಆಂಟೋನಿ ಶೂಟಿಂಗ್ ನ 29 ನೇ ದಿನ ಗಾಯವಾಗಿದೆ ಎಂದಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋ ನೋಡಿದ ಆಕೆಯ ಫಾಲೋವರ್ಸ್ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕಲ್ಯಾಣಿ ನೀವು ಶೀಘ್ರ ಗುಣಮುಖರಾಗಿ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ಕಲ್ಯಾಣಿ ತೆಲುಗಿನಲ್ಲಿ ಅನೇಕ ಸ್ಟಾರ್‍ ಗಳ ಜೊತೆ ನಟಿಸಿದರೂ ಸರಿಯಾದ ಸಕ್ಸಸ್ ಸಿಗದ ಕಾರಣ ತನ್ನ ಸಂಪೂರ್ಣ ಪೋಕಸ್ ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೇಲಿಟ್ಟಿದ್ದಾರೆ.