Film News

ಡ್ರಗ್ಸ್ ಕೇಸ್ ನಲ್ಲಿ ತಳುಕುಹಾಕಿದ ಜೂನಿಯರ್ ಸಮಂತಾ ಅಷುರೆಡ್ಡಿ, ವೈರಲ್ ಆದ ರೂಮರ್….!

ಇತ್ತೀಚಿಗೆ ಸಿನಿರಂಗದಲ್ಲಿ ಡ್ರಗ್ಸ್ ಕೇಸ್ ಗಳಿಂದ ಅನೇಕ ತಾರೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅನೇಕ ಸ್ಟಾರ್‍ ಗಳು ಅನೇಖ ಬಾರಿ ವಿಚಾರಣೆಯನ್ನು ಸಹ ಎದುರಿಸಿದ್ದಾರೆ. ದಿವಂಗತ ಸುಶಾಂತ್ ಸಿಂಗ ನಿಧನದ ಬಳಿಕ ಈ ಡ್ರಗ್ಸ್ ಕೇಸ್ ಗಳು ಹೆಚ್ಚಾಗಿದೆ ಎಂದೇ ಹೇಳಬಹುದಾಗಿದೆ. ಈ ಪ್ರಕರಣದಲ್ಲಿ ಸಿನೆಮಾ ತಾರೆಯರ ಜೊತೆಗೆ ಕಿರುತೆರೆ ಕಲಾವಿದರು ಸಹ ಸಿಲುಕಿಕೊಳ್ಳುತ್ತಿದ್ದಾರೆ. ಇದೀಗ ಬಿಗ್ ಬಾಸ್ ಫೇಂ ನ ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಸಹ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿವೆ.

ನಿರ್ಮಾಪಕ ಕೆ.ಪಿ. ಚೌಧರಿ ಕೆಲವು ದಿನಗಳ ಹಿಂದೆಯಷ್ಟೆ ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿದ್ದರು. ಇದರಿಂದ ಮತ್ತೆ ಪೊಲೀಸರು ಡ್ರಗ್ಸ್ ಜಾಲವನ್ನು ಹುಡುಕುತ್ತಾ ಸಾಗಿದ್ದಾರೆ. ಕಿರುತೆರೆ ತಾರೆಯರು, ಐಟಂ ಸಾಂಗ್ ಹಿರೋಯಿನ್ ಗಳು ಸೇರಿದಂತೆ ಕೆಲವ ರಾಜಕೀಯ ಮುಖಂಡರುಗಳ ಹೆಸರುಗಳು ಸಹ ಕೇಳಿಬರುತ್ತಿದೆ. ಅದರಂತೆ ನಟಿ ಅಷುರೆಡ್ಡಿ ಹೆಸರು ಸಹ ಕೇಳಿಬರುತ್ತಿದೆ. ಟಿಕ್ ಟಾಕ್ ಮೂಲಕ ಫೇಂ ಪಡೆದುಕೊಂಡ ಅಷುರೆಡ್ಡಿ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ಸ್ಟಾರ್‍ ಆದರು. ಆಕೆ ನೋಡಲು ಸಮಂತಾ ರವರಂತೆ ಇರುವ ಕಾರಣದಿಂದ ಆಕೆಯನ್ನು ಜೂನಿಯರ್‍ ಸಮಂತಾ ಎಂತಲೂ ಕರೆದರು. ಬಳಿಕ ಬಿಗ್ ಬಾಸ್ ಗೆ ಹೋದ ಬಳಿಕ ಮತಷ್ಟು ಫೇಂ ಪಡೆದುಕೊಂಡರು. ನಂತರ ಆರ್‍.ಜಿ.ವಿ ಜೊತೆಗೆ ಆಕೆ ಮಾಡಿದ ಬೋಲ್ಡ್ ಸಂದರ್ಶನಗಳ ಮೂಲಕ ಸ್ಟಾರ್‍ ನಟಿಯಂತೆ ಫೇಮಸ್ ಆದರು.

ಇನ್ನೂ ಅಷುರೆಡ್ಡಿ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಸಂಚಲನ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಆಕೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ನಿರ್ಮಾಪಕ ಕೆ.ಪಿ.ಚೌದರಿ ಎಂಬಾತನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು ಆತನ್ನು ವಿಚಾರಿಸಿದ್ದಾರೆ. ಆತನ ಕಾಲ್ ಲೀಸ್ಟ್ ಸಹ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಬಿಗ್ ಬಾಸ್ ಫೇಂ ನ ಅಷುರೆಡ್ಡಿ ಸೇರಿದಂತೆ ಮತಷ್ಟು ಪ್ರಮುಖರ ಹೆಸರುಗಳು ಕೇಳಿಬಂದಿವೆ.ಜೊತೆಗೆ ಟಾಲಿವುಡ್ ನ ಐಟಂ ಸಾಂಗ್ಸ್ ಮಾಡುವಂತಹ ನಟಿಯೊಂದಿಗೆ ನೂರಾರು ಬಾರಿ ಮಾತನಾಡಿದ್ದಾಗಿ ತಿಳಿದು ಬಂಇದೆ. ಆದರೆ ಆ ಕರೆಗಳ ಬಗ್ಗೆ ಯಾವುದೇ ಸಮಾಚಾರ ಸಹ ಚೌದರಿ ಹೇಳಿಲ್ಲ ಎನ್ನಲಾಗಿದೆ. ಆದರೆ 12 ಮಂದಿಗೆ ಡ್ರಗ್ಸ್ ಪೂರೈಕೆ ಮಾಡಿದ್ದಾಗಿ ಕೆಪಿ ಚೌದರಿ ಒಪ್ಪಿಕೊಂಡಿದ್ದು, ಕೆಲವರ ಹೆಸರು ಮಾತ್ರ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸೌತ್ ಅಂಡ್ ನಾರ್ತ್ ಸಿನಿರಂಗದ ಅನೇಕ ತಾರೆಯರ ಹೆಸರುಗಳು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅಷುರೆಡ್ಡಿ ಹೆಸರು ಸಹ ಕೇಳಿಬರುತ್ತಿದ್ದು, ಈ ಬಗ್ಗೆ ಅಷುರೆಡ್ಡಿ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top