ನನ್ನ ದೇಹ ರೊಮ್ಯಾನ್ಸ್ ಗೆ ಸ್ಯೂಟ್ ಆಗೊಲ್ಲ ಎಂದ ಬಾಲಿವುಡ್ ಸ್ಟಾರ್ ನಟಿ ಕಾಜೋಲ್, ವೈರಲ್ ಆದ ಕಾಮೆಂಟ್ಸ್…..!

Follow Us :

90ರ ದಶಕದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಾಜೋಲ್ ಒಬ್ಬರು. 1999 ರಲ್ಲಿ ಜನಿಸಿದ ಈಕೆ ಸ್ಟಾರ್‍ ನಟಿಯಾಗಿ ಸ್ಟಾರ್‍ ನಟರ ಜೊತೆ ನಟಿಸುವ ಮೂಲಕ ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡಿದ್ದರು. ಸದ್ಯ ಆಕೆಗೆ 47 ವರ್ಷ ವಯಸ್ಸಾಗಿದ್ದರೂ ಸಹ ಯಂಗ್ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಈಗಲೂ ಸಹ ಕೆಲವೊಂದು ಸಿನೆಮಾಗಳೂ ಹಾಗೂ ವೆಬ್ ಸಿರೀಸ್ ಗಳಲ್ಲೂ ಸಹ ಈಕೆ ನಟಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ನಟನೆಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವು ಸಖತ್ ವೈರಲ್ ಆಗುತ್ತಿವೆ.

ಇತ್ತೀಚಿಗೆ ವೆಬ್ ಸಿರೀಸ್ ಗಳು ಎಂದರೇ ಸಾಕು ಬೋಲ್ಡ್ ಕಂಟೆಂಟ್ ಇರುವಂತಹವು ಎನ್ನಲಾಗುತ್ತಿದೆ. ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ಅಸಭ್ಯಕರವಾದ ಡೈಲಾಗ್ ಗಳು, ಕಿಸ್ ದೃಶ್ಯಗಳು, ಬೆಡ್ ರೂಂ ಸನ್ನಿವೇಶಗಳೂ ಸಹ ಪೋರ್ನ್ ಸಿನೆಮಾಗಳಲ್ಲಿರುವಂತೆ ಇರುತ್ತವೆ. ಅದರಲ್ಲೂ ಬಾಲಿವುಡ್ ನಲ್ಲಿ ನಿರ್ಮಾಣವಾಗುವ ವೆಬ್ ಸಿರೀಸ್ ಗಳಂತೂ ತುಂಬಾನೆ ಬೋಲ್ಡ್ ಆಗಿರುತ್ತವೆ. ಇದಕ್ಕೆ ಲಸ್ಟ್ ಸ್ಟೋರಿಸ್ ಎಂಬ ಸಿರೀಸ್ ಒಳ್ಳೆಯ ಉದಾಹರಣೆ ಎಂದು ಹೇಳಬಹುದಾಗಿದೆ. ಇದೀಗ ಲಸ್ಟ್ ಸ್ಟೋರಿಸ್-2 ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದ್ದು, ಈ ಸಿರೀಸ್ ನಲ್ಲಿ ತಮನ್ನಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ಸೀನಿಯರ್‍ ನಟಿ ಕಾಜೋಲ್ ಸಹ ನಟಿಸಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದು, ಅವು ಹಾಟ್ ಟಾಪಿಕ್ ಆಗಿದೆ.

ನಟಿ ಕಾಜೋಲ್ ಸಹ ಲಸ್ಟ್‌ ಸ್ಟೋರಿಸ್-2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಈ ಸಿರೀಸ್ ಸ್ಟ್ರೀಮಿಂಗ್ ಆಗಲಿದೆ. ಜೊತೆಗೆ ಈ ಸಿರೀಸ್ ತಂಡ ಸಹ ಪ್ರಮೋಷನ್ ಗಳಲ್ಲಿ ಪುಲ್ ಬ್ಯುಸಿಯಾಗಿದೆ. ಇದೀಗ ನಟಿ ಕಾಜೋಲ್ ಪ್ರಮೋಷನ್ ಭಾಗವಾಗಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಬೋಲ್ಡ್ ಕಾಮೆಂಟ್ ಗಳ ಮೂಲಕ ಹಾಟ್ ಟಾಪಿಕ್ ಆಗಿದ್ದಾರೆ. ನಾನು ನಟಿಸುವಂತಹ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಮವನ್ನು ಪ್ರದರ್ಶನ ಮಾಡಲು ತುಂಬಾನೆ ಕಷ್ಟಪಡುತ್ತೇನೆ. ರೊಮ್ಯಾನ್ಸ್ ಗೆ ಸ್ಯೂಟ್ ಆಗುವಂತಹ ಬಾಡಿ ನನಗಿಲ್ಲ. ಆ ಕಾರಣದಿಂದ ನಾನು ಅಂತಹ ದೃಶ್ಯಗಳಲ್ಲಿ ನಟಿಸಲು ತುಂಬಾನೆ ಕಷ್ಟಪಡುತ್ತೇನೆ.

ಈ ಹಿಂದೆ ಸೈಫ್ ಅಲಿಖಾನ್ ಜೊತೆಗೆ ಸಿನೆಮಾದ ಶೂಟಿಂಗ್ ನಲ್ಲಿ ರೊಮ್ಯಾಂಟಿಕ್ ಹಾಡೊಂದರ ಭಾಗವಾಗಿ ನನಗೆ ಸರಿಯಾಗಿ ನಟಿಸಲು ಆಗಲಿಲ್ಲ. ಇದೀಗ ಲಸ್ಟ್ ಸ್ಟೋರಿಸ್ ಸಿರೀಸ್ ನಲ್ಲಿ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದೇನೆ. ಆದರೆ ಅವೆಲ್ಲವೂ ಟೆಕ್ನಿಕಲ್ ಆಗಿ ಶೂಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಲಸ್ಟ್ ಸ್ಟೋರೀಸ್ 2 ಸಿರೀಸ್ ತುಂಬಾನೆ ಬೋಲ್ಡ್ ಆಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಇದರ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.