ತಿಮ್ಮಪ್ಪನ ಭಕ್ತರಿಗೆ ಅಲರ್ಟ್, ತಿರುಮಲಕ್ಕೆ ಹೋಗುವ ಮುನ್ನಾ ಈ ಸುದ್ದಿ ಗಮನಿಸಿ……!

Follow Us :

ಸದ್ಯ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಭಾಗದಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರ ಜೋರಾಗಿದೆ. ಅನೇಕ ಕಡೆ ಜಲದಿಗ್ಬಂದನದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಚೆನೈನ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಇನ್ನೂ ತಿರುಮಲ ಸೇರಿದಂತೆ ರಾಯಲಸೀಮ ಪ್ರದೇಶದ ಕೆಲವೊಂದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೊಂದು ಜಿಲ್ಲೆಗಳು ಜಲಾವೃತಗೊಂಡಿವೆ ಎಂದು ತಿಳಿದುಬಂದಿದೆ.

ಕಲಿಯುಗ ದೈವ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ದಂಡು ದಂಡಾಗಿ ಬರುತ್ತಾರೆ. ಇದೀಗ ಮೈಚಾಂಗ್ ಚಂಡಮಾರುತದ ಎಫೆಕ್ಟ್ ಆ ಭಾಗದಲ್ಲಿ ಜೋರಾಗಿದೆ ಎನ್ನಲಾಗಿದೆ. ನಾಳೆ ಸಹ ರಾಯಸೀಮಾ ಭಾಗದ ಕೆಲವೊಂದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಚಿತ್ತೂರು ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ  ಕೆಲವೊಂದು ಕಡೆ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳು ಸಂಪೂರ್ಣ ನೀರುಮಯವಾಗಿದೆ. ಕೆಲವು ಕಡೆ ರಸ್ತೆಗೆ ನೀರು ನುಗ್ಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲಿನ ಜಿಲ್ಲಾಡಳಿತ ಸಹ ಎಚ್ಚರ ವಹಿಸಿ ತಗ್ಗು ಪ್ರದೇಶದಲ್ಲಿರುವಂತಹ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ತಿರುಮಲದಲ್ಲೂ ಸಹ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. 24 ಗಂಟೆಗಳ ಕಾಲ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಿಮ್ಮಪ್ಪನ ಭಕ್ತರು ಸಹ ಪರದಾಡುವಂತಾಗಿದೆ. ಮಳೆಯಿಂದ ಭಕ್ತರ ಸಂಖ್ಯೆ ಸಹ ಕಡಿಮೆಯಾಗಿದ. ಘಾಟ್ ರಸ್ತೆಗಳಲ್ಲಿ ಭಕ್ತರು ಎಚ್ಚರಿಕೆಯಿಂದ ಸಂಚರಿಸಬೇಕು. ದ್ವಿಚಕ್ರ ವಾಹನ ಚಾಲಕರಿಗೆ ಬೆಳಿಗ್ಗೆ 5 ರಿಂದ 10 ರವರೆಗೆ ಮಾತ್ರ ಅವಕಾಶ ನೀಡಿದ್ದು, ಕಾರು ಹಾಗೂ ಬಸ್ ಗಳಿಗೆ ಬೆಳಿಗ್ಗೆ 4 ರಿಂದ 12 ರವರೆಗೆ ಸಂಚರಿಸಲು ಟಿಟಿಡಿ ಅವಕಾಶ ನೀಡಿದೆ. ಮಳೆಯಲ್ಲಿ ಅಬ್ಬರದ ನಡುವೆ ತಿಮ್ಮಪ್ಪನ ದರ್ಶನಕ್ಕೆ ಹೋಗುವಂತಹ ಭಕ್ತರು ಈ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುವುದು ಸೂಕ್ತವಾಗಿದೆ.