ಉರ್ಫಿ ಇನ್ಸ್ಟಾ ಸ್ಪಸ್ಪೆಂಡ್, ಶಾಕ್ ಆದ ಉರ್ಫಿ, ಆಕೆಯನ್ನು ನಾವು ನೋಡೋದು ಎಲ್ಲಿ ಎಂದ ಫ್ಯಾನ್ಸ್……!

Follow Us :

ಬಣ್ಣದ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಸೋಷಿಯಲ್ ಮಿಡಿಯಾದಲ್ಲೇ ಸದ್ದು ಮಾಡುತ್ತಿದ್ದ ಉರ್ಫಿಗೆ ಇನ್ಸ್ಟಾ ಶಾಕ್ ನೀಡಿದ್ದು, ಆಕೆಯ ಇನ್ಸ್ಟಾ ಖಾತೆಯನ್ನು ಬ್ಲಾಕ್ ಮಾಡಿದೆ. ಉರ್ಫಿ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಗೋಣಿಚೀಲ, ಚೈನ್ ಗಳು, ಸಿಮ್ ಕಾರ್ಡ್‌ಗಳು, ನ್ಯೂಸ್ ಪೇಪರ್‍, ಮಲ್ಲಿಗೆ ಹೂವು, ಹಣ್ಣುಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದ್ದರು. ಈ ಡ್ರೆಸ್ ಗಳ ಕಾರಣದಿಂದಲೇ ಉರ್ಫಿ ಭಾರಿ ಟ್ರೋಲ್ ಸಹ ಆಗುತ್ತಿದ್ದರು. ಆದರೂ ಸಹ ಆಕೆ ತನ್ನ ವರಸೆಯನ್ನು ಮಾತ್ರ ಬಿಟ್ಟಿಲ್ಲ ಎಂದೇ ಹೇಳಬಹುದು.

ಇನ್ನೂ ಇನ್ಸ್ಟಾಗ್ರಾಂ ಮೂಲಕ ಸದಾ ಸದ್ದು ಮಾಡುತ್ತಿದ್ದ ಉರ್ಫಿಗೆ ಇನ್ಸ್ಟಾಗ್ರಾಂ ಶಾಕ್ ನೀಡಿದೆ. ಆಕೆಯ ಖಾತೆಯನ್ನು ಸಸ್ಪೆಂಡ್ ಮಾಡಿದೆಯಂತೆ. ಈ ಬಗ್ಗೆ ಉರ್ಫಿ ರಿಯಾಕ್ಟ್ ಆಗಿದ್ದಾರೆ. ನನಗೆ ಇನ್ಸ್ಟಾಗ್ರಾಂ ಸಂದೇಶ ಕಳುಹಿಸಿದೆ. ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತೇವೆ. ನಿಮ್ಮ ಖಾತೆ ಕಾಣಿಸುವುದಿಲ್ಲ. ಈ ಕ್ಷಣದಿಂದ ನೀವು ಖಾತೆ ಬಳಸಲು ಆಗುವುದಿಲ್ಲ. ನೀವು ಈ ಬಗ್ಗೆ 180 ದಿನಗಳಲ್ಲಿ ಪ್ರಶ್ನೆ ಮಾಡಬಹುದು, ಇಲ್ಲವಾದಲ್ಲಿ ನಿಮ್ಮ ಇನ್ಸ್ಟಾ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಸೂಚಿಸಿದೆ. ಈ ಬಗ್ಗೆ ನಾನು ಆರು ತಿಂಗಳಲ್ಲಿ ಪ್ರಶ್ನೆ ಮಾಡದೇ ಹೋದರೇ ನನ್ನ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಉರ್ಫಿ ಹೇಳಿದ್ದಾರೆ. ಇನ್ನೂ ಈ ಸುದ್ದಿ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಮ್ಮ ಪ್ರೀತಿಯ ನಟಿಯನ್ನು ನೋಡುವುದಾದರೂ ಎಲ್ಲಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ಉರ್ಫಿ ಅನೇಕ ಸೀರಿಯಲ್ ಗಳ ಮೂಲಕ ಪರಿಚಯವಾದರು. 2016 ರಲ್ಲಿ ಬಡೇ ಭಯ್ಯಾ ಎಂಬ ಸಿರೀಯಲ್ ಮೂಲಕ ಪರಿಚಯವಾದ ಈಕೆ ಚಂದ್ರ ನಂದಿನಿ, ಬೆಪನ್ನಾ, ಜಿ ಜಿ ಮಾ, ದಯಾನ್ ಸೇರಿದಂತೆ ಅನೇಕ ಸೀರಿಯಲ್ಸ್ ಗಳಲ್ಲಿ, ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು.