ಬೀಯರ್ ‌ಇಷ್ಟಾನಾ ಅಥವಾ ವೈನ್ ‌ಇಷ್ಟಾನಾ ಎಂಬ ಪ್ರಶ್ನೆಗೆ ಯಂಗ್ ಬ್ಯೂಟಿ ಅನಿಖಾ ಕೊಟ್ಟ ಉತ್ತರಕ್ಕೆ ಶಾಕ್ ಆದ ನೆಟ್ಟಿಗ..!

Follow Us :

ಕಾಲಿವುಡ್ ಸ್ಟಾರ್‍ ನಟ ಅಜಿತ್ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಹಾಗೂ ನಯನತಾರಾ ಜೋಡಿಯ ಮಗಳ ಪಾತ್ರದಲ್ಲಿ ನಟಿಸಿದ್ದರು ಅನಿಖಾ ಸುರೇಂದ್ರನ್. ಈ ಸಿನೆಮಾದಲ್ಲಿ ಆಕೆ ಕ್ಯೂಟ್ ನಟನೆಯ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಇನ್ನೂ ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ಇದೀಗ ನಟಿಯಾಗಿದ್ದಾರೆ. ಕಾಲಿವುಡ್ ನಲ್ಲಿ ಕಾಣಿಸಿಕೊಂಡ ಈಕೆ ಇದೀಗ ಟಾಲಿವುಡ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಬುಟ್ಟಬೊಮ್ಮ ಎಂಬ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅನಿಖಾ ಸುರೇಂದ್ರನ್ ಗೆ ನೆಟ್ಟಿಗನೋರ್ವ ಕೇಳಿದ ಪ್ರಶ್ನೆಗೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ನೀಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.

ಮಲಯಾಳಂ ಮೂಲದ ಅನಿಖಾ ಸುರೇಂದ್ರನ್ ಬಾಲನಟಿಯಾಗಿ ಫೇಂ ಪಡೆದುಕೊಂಡು ಇದೀಗ ಸಿನೆಮಾಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಓ ಮೈ ಡಾರ್ಲಿಂಗ್ ಸಿನೆಮಾದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಅನಿಖಾ ತುಂಬಾನೆ ಬೋಲ್ಡ್ ಆಗಿ ಕಾಣಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನೆಮಾದ ಟೀಸರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನೆಮಾದಲ್ಲಿ ಅನಿಖಾಗೆ ಜೋಡಿಯಾಗಿ ಮೇಲ್ವಿನ್ ಜಿ ಬಾಬು ನಟಿಸಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಅನಿಖಾ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಆಸ್ಕ್ ಮಿ ಎನಿಥಿಂಗ್ ಎಂಬ ಸೆಷನ್ ನಡೆಸಿದ್ದರು. ಈ ವೇಳೆ ನೆಟ್ಟಿಗರ ಅನೇಕ ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ.

ಅನಿಖಾ ನಡೆಸಿದ ಆಸ್ಕ್ ಮಿ ಎನಿಥಿಂಗ್ ಸೆಷನ್ ನಲ್ಲಿ ಓರ್ವ ನಿಮಗೆ ಬೀಯರ್‍ ಅಥವಾ ವೈನ್ ಯಾವುದು ಇಷ್ಟ ಯಾವುದು ಕುಡಿಯುತ್ತೀರಾ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಅನಿಖಾ ನೀಡಿದ ಉತ್ತರ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ನಾನಿನ್ನು 18 ವರ್ಷದ ಹುಡುಗಿ, ನನಗೆ ಕುಡಿಯುವ ವಯಸ್ಸಲ್ಲ. ಅದನ್ನು ಕುಡಿಯಲು ನಾನು ಅಂಡರ್‍ ಏಜ್ ಎಂದು ಉತ್ತರ ನೀಡಿದ್ದಾರೆ. ಅಷ್ಟಗ್ಯೂ ಉತ್ತರ ಹೇಳಲೇ ಬೇಕಾದ ಸನ್ನಿವೇಶ ಉದ್ಬವಿಸಿದಾಗ ವೈನ್ ಅಂದರೇ ಇಷ್ಟ ಎಂದು ಹೇಳಿದ್ದಾರೆ. ಬಳಿಕ ಶಾರ್ಟ್ ಕೂದಲು ಇದ್ದರೇ ನನಗೆ ಇಷ್ಟ. ಉದ್ದನೇಯ ಕೂದಲನ್ನು ಮೇಂಟೈನ್ ಮಾಡುವುದು ತುಂಬಾ ಕಷ್ಟ ಎಂದಿದ್ದಾರೆ.  ಇನ್ನೂ ಅನೇಕ ವಿಚಾರಗಳನ್ನು ಈ ಸೆಷನ್ ನಲ್ಲಿ ಅನಿಖಾ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಫ್ಲಾಟ್ ಚಪ್ಪಲಿಗಿಂತ ಹೀಲ್ಸ್ ಚಪ್ಪಲಿ ಹಾಕಿಕೊಳ್ಳುವುದಕ್ಕೆ ತುಂಬಾ ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಬುಟ್ಟಬೊಮ್ಮ ಸಿನೆಮಾದ ಮೂಲಕವೇ ಅನಿಖಾ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡರು. ಸೌಂದರ್ಯ ನಟನೆ ಎರಡನ್ನೂ ಹೊಂದಿರುವ ಈ ಬ್ಯೂಟಿಗಾಗಿ ಸ್ಟಾರ್‍ ಪ್ರೊಡ್ಯೂಸರ್‍ ಗಳೂ ಸಹ ಕ್ಯೂ ಕಟ್ಟುತ್ತಿದ್ದಾರಂತೆ. ಜೊತೆಗೆ ಅನೇಕ ಯಂಗ್ ನಟರೂ ಸಹ ಆಕೆಯನ್ನು ತಮ್ಮ ಸಿನೆಮಾಗಳಲ್ಲಿ ಮೊದಲ ಆಯ್ಕೆಯಾಗಿ ಕೇಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈಕೆ ಸಿನೆಮಾಗಳಲ್ಲಿ ಯಾವ ಮಟ್ಟದಲ್ಲಿ ಕ್ರೇಜ್ ಸಂಪಾದಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.