ನಯನತಾರಾ ಅಭಿಮಾನಿಗಳಿಗೆ ಬಿಗ್ ಶಾಕ್, ಮಕ್ಕಳಿಗಾಗಿ ದೊಡ್ಡ ನಿರ್ಧಾರಕ್ಕೆ ಮುಂದಾದರೇ ನಯನತಾರಾ?

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಆಗಿ ಕ್ರೇಜ್ ದಕ್ಕಿಸಿಕೊಂಡಿರುವ ನಯನತಾರಾ ಮದುವೆಯಾದರೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಮದುವೆಯಾದ ಬಳಿಕ ತಮ್ಮ ಸಂಭಾವನೆಯನ್ನು ಮತಷ್ಟು ಹೆಚ್ಚಿಸಿಕೊಂಡಿದ್ದು, ದೊಡ್ಡ ಮಟ್ಟದ…

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಆಗಿ ಕ್ರೇಜ್ ದಕ್ಕಿಸಿಕೊಂಡಿರುವ ನಯನತಾರಾ ಮದುವೆಯಾದರೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಮದುವೆಯಾದ ಬಳಿಕ ತಮ್ಮ ಸಂಭಾವನೆಯನ್ನು ಮತಷ್ಟು ಹೆಚ್ಚಿಸಿಕೊಂಡಿದ್ದು, ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದಾ ಸುದ್ದಿಯಲ್ಲಿರುವಂತಹ ನಯನತಾರಾ ರವರ ಬಗ್ಗೆ ಒಂದು ಸುದ್ದಿ ಇದೀಗ ಸಿನಿವಲಯದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೋ ಸುಳ್ಳೋ ಆದರೆ ಈ ಸುದ್ದಿ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂತಲೇ ಖ್ಯಾತಿ ಪಡೆದುಕೊಂಡಿರುವ ನಯನತಾರಾ ಮದುವೆಯಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಹೆಚ್ಚು ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಮದುವೆಯಾದ ಬಳಿಕವೂ ಆಕೆ ಭಾರಿ ಸಂಭಾವನೆ ಪಡೆದುಕೊಳ್ಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.  ಮಲಯಾಳಂನ ಮನಸ್ಸಿನಕ್ಕರೆ ಸಿನೆಮಾದ ಮೂಲಕ 2003 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಲ್ಲಿಂದ ಆಕೆ ಸೋಲು ಗೆಲುವು ಎರಡನ್ನೂ ಲೆಕ್ಕಿಸದೇ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಕಾಲಿವುಡ್ ಡೈರೆಕ್ಟರ್‍ ವಿಘ್ನೇಶ್ ಶಿವನ್ ಜೊತೆಗೆ ಜೂನ್ 9 ರಂದು ಸಪ್ತಪದಿ ತುಳಿದರು. ಸುಮಾರು ದಿನಗಳ ಕಾಲ ನಯನ್ ಅಂಡ್ ವಿಕ್ಕಿ ಡೇಟಿಂಗ್ ನಡೆಸಿ ಅಧಿಕೃತವಾಗಿ ಮದುವೆಯಾದರು. ಕೆಲವು ದಿನಗಳ ಹಿಂದೆಯಷ್ಟೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಈ ವಿಚಾರಕ್ಕಾಗಿ ನಯನತಾರಾ ತುಂಬಾನೆ ವಿಮರ್ಶೆಗೆ ಗುರಿಯಾಗಿದ್ದರು.

ಇದೀಗ ನಯನತಾರಾ ಸೌತ್ ಸಿನೆಮಾಗಳ ಜೊತೆಗೆ ಬಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆಗೆ ಜವಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ನಯನತಾರಾ ತಮ್ಮ ಮಕ್ಕಳಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರಂತೆ. ಮಕ್ಕಳ ಲಾಲನೆ ಪಾಲನೆಗಾಗಿ ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ನಟನೆ ಹಾಗೂ ಮಕ್ಕಳ ಲಾಲನೆ ಪಾಲನೆ ನೋಡಿಕೊಳ್ಳುವುದು ಕಷ್ಟ ಎಂದು ಭಾವಿಸಿ ಆಕೆ ಸಿನೆಮಾಗಳಿಗೆ ಬ್ರೇಕ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸುದ್ದಿ ಸಿನಿವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದ್ದು, ನಯನತಾರಾ ಅಭಿಮಾನಿಗಳೂ ಸಹ ಶಾಕ್ ಆಗಿದ್ದಾರೆ.

ಇನ್ನೂ ನಯನ್ ಹಾಗೂ ವಿಕ್ಕಿ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಗಳು ನಡೆದಿತ್ತು. ಅಷ್ಟೇಅಲ್ಲದೇ ಈ ಜೋಡಿ ವಿವಾಹವಾದಾಗಿನಿಂದ ಒಂದಲ್ಲ ಒಂದು ವಿಮರ್ಶೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಇದೀಗ ನಯನತಾರಾ ಸಿನೆಮಾಗಳಿಂದ ದೂರವುಳಿಯುವ ಕುರಿತು ಗುಸುಗುಸು ಕೇಳಿಬರುತ್ತಿದ್ದು, ಅಭಿಮಾನಿಗಳು ಮಾತ್ರ ತುಂಬಾನೆ ನಿರಾಸೆಯಾಗಿದ್ದಾರೆ ಎಂದು ಹೇಳಬಹುದಾಗಿದೆ.