ಬಾಡಿ ಶೇಮಿಂಗ್ ನಿಂದಾಗಿ ಜೋರಾಗಿ ಅಳುತ್ತಿದ್ದರಂತೆ ಕಾಲಿವುಡ್ ಸ್ಟಾರ್ ಧನುಷ್…!

ಸಿನಿರಂಗದಲ್ಲಿ ಎಂಟ್ರಿ ಕೊಟ್ಟ ಪ್ರಾರಂಭದಲ್ಲಿ ನಟ ನಟಿಯರು ಸಹ ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತಾರೆ. ಅನೇಕ ನೋವುಗಳನ್ನು, ಸೋಲುಗಳನ್ನು ಕಂಡು ತುಂಬಾನೆ ನೊಂದಿರುತ್ತಾರೆ. ಇದೀಗ ಕಾಲಿವುಡ್ ಸ್ಟಾರ್‍ ನಟ ಧನುಷ್ ಸಹ ಸಿನಿರಂಗದಲ್ಲಿ ಎಂಟ್ರಿ ಕೊಟ್ಟ…

ಸಿನಿರಂಗದಲ್ಲಿ ಎಂಟ್ರಿ ಕೊಟ್ಟ ಪ್ರಾರಂಭದಲ್ಲಿ ನಟ ನಟಿಯರು ಸಹ ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತಾರೆ. ಅನೇಕ ನೋವುಗಳನ್ನು, ಸೋಲುಗಳನ್ನು ಕಂಡು ತುಂಬಾನೆ ನೊಂದಿರುತ್ತಾರೆ. ಇದೀಗ ಕಾಲಿವುಡ್ ಸ್ಟಾರ್‍ ನಟ ಧನುಷ್ ಸಹ ಸಿನಿರಂಗದಲ್ಲಿ ಎಂಟ್ರಿ ಕೊಟ್ಟ ಮೊದಲಲ್ಲಿ ತುಂಬಾನೆ ನೋವನ್ನು ಅನುಭವಿಸಿದ್ದರಂತೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಧನುಷ್ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಸಮಯದಲ್ಲಿ ಬಾಡಿ ಶೇಮಿಂಗ್ ಗೆ ಸಹ ಒಳಗಾಗಿದ್ದರಂತೆ. ಈ ವಿಚಾರವನ್ನು ಧನುಷ್ ಇದೀಗ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟರಲ್ಲೊಬ್ಬರಾದ  ಧನುಷ್ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಳೆದ 2003 ರಲ್ಲಿ ತೆರೆಕಂಡ ಕಾದಲ್ ಕೊಂಡೇನ್ ಎಂಬ ಸಿನೆಮಾದ ಶೂಟಿಂಗ್ ಸಮಯದಲ್ಲಿ ನಡೆದ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಕಾದಲ್ ಕೊಂಡೇನ್ ಸಿನೆಮಾಗಾಗಿ ಧನುಷ್ ನಾಯಕನಾಗಿ ಆಯ್ಕೆ ಆಗಿದ್ದರಂತೆ. ಆದರೆ ಶೂಟಿಂಗ್ ಸೆಟ್ ನಲ್ಲಿ ಸಿನೆಮಾದ ಹಿರೋ ಯಾರು ಎಂದು ಕೇಳುತ್ತಿದ್ದರಂತೆ. ಆ ಸಮಯದಲ್ಲಿ ಧನುಷ್ ತುಂಬಾನೆ ನೋವು ಅನುಭವಿಸಿದ್ದರಂತೆ. ತಾನೆ ನಾಯಕ ಎಂದು ಹೇಳದೆ ಬೇರೆಯವರನ್ನು ನಾಯಕ ಎಂದು ತೋರಿಸಿದ್ದರಂತೆ. ಬಳಿಕ ಆ ಸಿನೆಮಾದ ನಾಯಕ ನಾನೇ ಎಂದು ಗೊತ್ತಾದಾಗ ಅಲ್ಲಿದ್ದ ಎಲ್ಲರೂ ನಕ್ಕಿದ್ದರಂತೆ. ನೋಡು ಆಟೋ ಡ್ರೈವರ್‍ ನಂತೆ ಕಾಣುತ್ತಾನೆ, ಅವರು ಹಿರೋನಾ ಎಂದು ಅಪಹಾಸ್ಯ ಮಾಡಿದ್ದರಂತೆ.

ಅಷ್ಟೇಅಲ್ಲದೇ ಧನುಷ್ ಆಗ ಸಿಕ್ಕ ಹುಡುಗನಾಗಿದ್ದ. ಅವರ ಮಾತುಗಳನ್ನು ಕೇಳಿ ಕಾರಿನ ಬಳಿ ತೆರಳಿ ತುಂಬಾನೆ ಅಳುತ್ತಿದ್ದೆ. ನನ್ನನ್ನು ಟ್ರೋಲ್ ಮಾಡಿದಂತಹವು, ಬಾಡಿ ಶೇಮಿಂಗ್ ಮಾಡಿದಂತಹವರು ಈಗ ಯಾರು ಇಲ್ಲ ಎಂದು ಧನುಷ್ ಹೇಳಿದ್ದಾರೆ. ಒಬ್ಬ ಆಟೋ ಡ್ರೈವರ್‍ ಏಕೆ ಹಿರೋ ಆಗಬಾರದು. ಪ್ರತಿಭೆ ಮುಖ್ಯವೇ ಹೊರತು ಇಲ್ಲಿ ದೈಹಿಕವಾದ ನೋಟವಲ್ಲ ಎಂಬುದು ಧನುಷ್ ಅಭಿಪ್ರಾಯವಾಗಿದ್ದು, ಸಿನಿಮಾಗಳಲ್ಲಿ ಸಕ್ರೀಯರಾಗಿ ಸಾಗುತ್ತಿದ್ದಾರೆ. ಕಳೆದ 2002 ರಿಂದ ಸಿನಿಮಾಗಳಲ್ಲಿ ಸಕ್ರೀಯರಾಗಿರುವ ಧನುಷ್ ಇದೀಗ ಸ್ಟಾರ್‍ ನಟರಾಗಿದ್ದಾರೆ. ಕೇವಲ ತಮಿಳು ಸಿನೆಮಾಗಳಲ್ಲಿ ಮಾತ್ರವಲ್ಲದೇ ಸೌತ್ ನಲ್ಲೂ ಸಹ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಸಹ ನಟಿಸಿ ಮಿಂಚುತ್ತಿದ್ದಾರೆ ಧನುಷ್.

ಇನ್ನೂ ಧನುಷ್ ಸಾರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಧನುಷ್ ಜೊತೆಗೆ ಸಂಯುಕ್ತಾ ಮಿನನ್ ಸಹ ನಟಿಸಿದ್ದರು. ಕ್ಯಾಪ್ಟನ್ ಮಿಲ್ಲರ್‍ ಎಂಬ ಸಿನೆಮಾದಲ್ಲೂ ಸಹ ಧನುಷ್ ನಟಿಸುತ್ತಿದ್ದು. ಈ ಸಿನೆಮಾದಲ್ಲಿ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಸಹ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದ್ದು, ಸಿನೆಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.