ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ ಎಂಬ ರೂಮರ್, ವೈರಲ್ ಆದ ಪೋಸ್ಟರ್, ಅಷ್ಟಕ್ಕೂ ಆಗಿದ್ದೇನು?

Follow Us :

ಕಾಲಿವುಡ್ ಸ್ಟಾರ್‍ ನಟ ಅಜಿತ್ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಹಾಗೂ ನಯನತಾರಾ ಜೋಡಿಯ ಮಗಳ ಪಾತ್ರದಲ್ಲಿ ನಟಿಸಿದ್ದರು ಅನಿಖಾ ಸುರೇಂದ್ರನ್. ಈ ಸಿನೆಮಾದಲ್ಲಿ ಆಕೆ ಕ್ಯೂಟ್ ನಟನೆಯ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಇನ್ನೂ ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ಇದೀಗ ನಟಿಯಾಗಿದ್ದಾರೆ. ಕಾಲಿವುಡ್ ನಲ್ಲಿ ಕಾಣಿಸಿಕೊಂಡ ಈಕೆ ಇದೀಗ ಟಾಲಿವುಡ್ ನಲ್ಲೂ ಸಹ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಮೃತಪಟ್ಟಿದ್ದಾರೆ ಎಂದು ಶ್ರದ್ದಾಂಜಲಿ ಎಂಬ ಪೋಸ್ಟ್ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,

ಸಿನಿರಂಗದಲ್ಲಿ ಅನೇಕ ನಟಿಯರು ಮೊದಲಿಗೆ ಬಾಲನಟಿಯರಾಗಿ ಖ್ಯಾತಿ ಪಡೆದುಕೊಂಡು ಬಳಿಕ ನಟಿಯರಾಗಿ ಸದ್ದು ಮಾಡುತ್ತಾರೆ. ಅಂತಹವರ ಸಾಲಿಗೆ ಯಂಗ್ ಬ್ಯೂಟಿ ಅನಿಕಾ ಸುರೇಂದ್ರನ್ ಸಹ ಸೇರುತ್ತಾರೆ. ಕಾಲಿವುಡ್ ಸ್ಟಾರ್‍ ನಟ ಅಜಿತ್ ಹಾಗೂ ನಯನತಾರಾ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅವರ ಮಗಳಾಗಿ ನಟಿಸಿದ್ದಾರೆ. ಆಕೆಯ ಅಭಿನಯಕ್ಕೆ ಪ್ರೇಕ್ಷಕರಿಂದ ಪುಲ್ ಮಾರ್ಕ್ಸ್ ಸಹ ದೊರೆತಿದೆ. ಇತ್ತಿಚಿಗೆ ಸಿನೆಮಾಗಳಲ್ಲೂ ಸಹ ಆಕೆ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಬುಟ್ಟಬೊಮ್ಮ ಎಂಬ ಸಿನೆಮಾದಲ್ಲಿ ಆಕೆ ನಟಿಸಿದ್ದಾರೆ. ಈ ಸಿನೆಮಾ ಮಿಶ್ರಪ್ರತಿಕ್ರಿಯೆನ್ನು ಪಡೆದುಕೊಂಡಿದ್ದು, ಇದೀಗ ಆಕೆಗೆ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಇದೀಗ ಇಂಟರ್‍ ನೆಟ್ ನಲ್ಲಿ ಅನಿಕಾ ಸುರೇಂದ್ರನ್ ಗೆ ಸಂಬಂಧಿಸಿದ ಪೋಸ್ಟರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಪೋಸ್ಟರ್‍ ಕಂಡ ಅನೇಕರು ಶಾಕ್ ಆಗುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟರ್‍ ನೋಡಿದ ಅನೇಕರು ಶಾಕ್ ಆಗಿದ್ದು ಏಕೆ ಎಂದರೇ, ಅನಿಕಾ ಮೃತಪಟ್ಟಿರುವುದಾಗಿ ಶ್ರದ್ದಾಂಜಲಿ ಅರ್ಪಿಸುವಂತಹ ಪೋಸ್ಟರ್‍ ಇದಾಗಿದೆ. ಇನ್ನೂ ಈ ಪೋಸ್ಟರ್‍ ಸಖತ್ ವೈರಲ್ ಆಗುತ್ತಿದ್ದು, ಅನೇಕರು ಶಾಕ್ ಆಗಿ ಅನಿಕಾ ಗೆ ಏನಾಗಿದೆ ಎಂದು ಶಾಕ್ ಆಗಿದ್ದಾರೆ. ಇನ್ನೂ ಈ ಪೋಸ್ಟರ್‍ ನಿಜವೇ ಆಗಿದೆ. ಆದರೆ ಆಕೆ ಮರಣಿಸಿದ್ದು ಮಾತ್ರ ಸುಳ್ಳಾಗಿದೆ. ಅಂದರೇ ಅನಿಕಾ ನಟಿಸುತ್ತಿರುವಂತಹ ಸಿನೆಮಾಗೆ ಸಂಬಂಧಿಸಿದ ಪೋಸ್ಟರ್‍ ಇದಾಗಿದೆ. ಇದೀಗ ಆಕೆ ಪೋಸ್ಟರ್‍ ಲೀಕ್ ಆಗಿದ್ದು, ಆಕೆ ನಿಜವಾಗಿ ಮರಣಿಸಿದ್ದಾರೆ ಎಂದು ಕೆಲವರು ರೂಮರ್‍ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ಇನ್ನೂ ಟಾಲಿವುಡ್ ನ ದೊಡ್ಡ ನಿರ್ಮಾಣ ಸಂಸ್ಥೆಗಳು ಅನಿಖಾ ಜೊತೆ ಡೀಲ್ಸ್ ಮಾಡುತ್ತಿವೆಯಂತೆ. ಅನಿಖಾ ಈಗಾಗಲೇ ಎರಡು ಬಿಗ್ ಪ್ರಾಜೆಕ್ಟ್ ಗಳಿಗೂ ಸಹ ಸೈನ್ ಹಾಕಿದ್ದಾರಂತೆ. ಮತಷ್ಟು ಸಿನೆಮಾಗಳು ಚರ್ಚೆಗಳ ಹಂತದಲ್ಲಿವೆ ಎಂಬ ಸುದ್ದಿಗಳೂ ಸಹ ಜೋರಾಗಿಯೇ ಹರಿದಾಡುತ್ತಿವೆ. ಇನ್ನೂ ಆಕೆ ಕ್ವೀನ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಅನಿಕಾ ಸುರೇಂದ್ರನ್ ಗೆ ಒಂದು ಬಿಗ್ ಬ್ರೇಕ್ ಸಿಕ್ಕರೇ ಆಕೆ ಸಹ ಸೌತ್ ನಲ್ಲಿ ಬಹುಬೇಡಿಕೆ ನಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.