ಬೆಡ್ ಮೇಲೆ ಒಬ್ಬರು, ಮೈಂಡನಲ್ಲಿ ಬೇರೊಬ್ಬರು ಎಂದ ನಿಹಾರಿಕಾ, ಸಖತ್ ಟ್ರೋಲ್ ಆದ ಮೆಗಾ ಡಾಟರ್…..!

Follow Us :

ಟಾಲಿವುಡ್ ನ ಮೆಗಾ ಫ್ಯಾಮಿಲಿಯ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇತ್ತೀಚಿಗೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಆಕೆ ಸಿನೆಮಾಗಳಿಗಿಂತ ವೈಯುಕ್ತಿಕ ಜೀವನದ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಕೆಲವು ದಿನಗಳಿಂದ ನಿಹಾರಿಕಾ ಹಾಗೂ ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ, ಇಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದೆ. ಈ ರೂಮರ್‍ ಹರಿದಾಡಿದ ಬಳಿಕ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ವೈರಲ್ ಆಗುವುದರ ಜೊತೆಗೆ ವಿಚ್ಚೇದನದ ರೂಮರ್‍ ಮತಷ್ಟು ಜೋರಾಗಿ ಹರಿದಾಡುತ್ತಿದೆ. ಇದೀಗ ಆಕೆ ಹೊಡೆದ ಡೈಲಾಗ್ ಒಂದು ಸಖತ್ ಟ್ರೋಲ್ ಗೆ ಗುರಿಯಾಗಿದೆ.

ಟಾಲಿವುಡ್ ನಟಿ ಕಂ ನಿರ್ಮಾಪಕಿ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ರವರ ವಿವಾಹ ಅದ್ದೂರಿಯಾಗಿ ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಎರಡು ವರ್ಷಗಳ ನಂತರ ಈ ಜೋಡಿಯ ನಡುವೆ ವಿಬೇದಗಳು ಸೃಷ್ಟಿಯಾಗಿ ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ರೂಮರ್‍ ಗಳು ಹರಿದಾಡುತ್ತಿರುವ ಸಮಯದಲ್ಲೇ ನಿಹಾರಿಕಾ ಒಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ತಮ್ಮ ಮೇಲಿನ ರೂಮರ್‍ ಗಳಿಗೆ ಸಂಬಂಧಿಸಿದ ವಿಚಾರ ಅಲ್ಲ. ಜೊತೆಗೆ ವಿಚ್ಚೇದನದ ಬಗ್ಗೆ ಯಾವುದೇ ಸ್ಪಷ್ಟನೆ ಸಹ ನೀಡಿಲ್ಲ. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಸಕ್ಸಸ್ ಕಾಣಲು ಪ್ರಯತ್ನಗಳನ್ನು ನಡೆಸುತ್ತಿದ್ದು, ಇದೀಗ ಆಕೆ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಆದಿತ್ಯ ಮಂಡಲ ನಿರ್ದೇಶನದ ಈ ಡೆಡ್ ಪಿಕ್ಸೆಲ್ಸ್ ಸಿರೀಸ್ ನಲ್ಲಿ ನಿಹಾರಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿರೀಸ್ ಮೇ.19 ರಿಂದ ಡಿಸ್ನಿ+ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇತ್ತಿಚಿಗೆ ಸಿನೆಮಾದ ಟ್ರೈಲರ್‍ ರಿಲೀಸ್ ಆಗಿದ್ದು, ಈ ಸಿರೀಸ್ ನಲ್ಲಿನ ಡೈಲಾಗ್ ಒಂದು ಇದೀಗ ವೈರಲ್ ಆಗಿದ್ದು, ಟ್ರೋಲ್ ಸಹ ಆಗುತ್ತಿದೆ. ಈ ಸಿರೀಸ್ ನಲ್ಲಿ ನಿಹಾರಿಕ ಆನ್ ಲೈನ್ ನಲ್ಲಿ ಒಬ್ಬರನ್ನು, ಆಫ್ ಲೈನ್ ನಲ್ಲಿ ಇನ್ನೊಬ್ಬರನ್ನು ಇಷ್ಟಪಡುತ್ತಿದ್ದಾರೆ. ಇಬ್ಬರಲ್ಲಿ ಯಾರನ್ನೂ ಆಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಆಕೆಗೆ ಅರ್ಥವಾಗುವುದಿಲ್ಲ. ಈ ವೇಳೆ ಆಕೆ ನನಗೆ ಬೆಡ್ ಮೇಲೆ ರೋಷನ್ ಬೇಕು, ಆದರೆ ಮೈಂಡ್ ನಲ್ಲಿ ಭಾರ್ಗವ್ ಇದ್ದಾನೆ ಎಂದು ಡೈಲಾಗ್ ಹೇಳಿದ್ದಾರೆ. ಇದು ಅನೇಕರನ್ನು ಕೆರಳಿಸಿದೆ ಇಂತಹ ಡೈಲಾಗ್ ಗಳು ಅವಸರವೇ, ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದ್ದೀಯಾ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಈ ಟ್ರೋಲ್ ಗೆ ನಿಹಾರಿಕಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ನಿಹಾರಿಕಾ ಹಾಗೂ ಚೈತನ್ಯ ಸೋಷಿಯಲ್ ಮಿಡಿಯಾದಲ್ಲಿ ಒಬ್ಬರನ್ನೊಬ್ಬರೂ ಅನ್ ಫಾಲೋ ಮಾಡಿಕೊಂಡರು. ಚೈತನ್ಯ ಸಹ ತಮ್ಮ ಮದುವೆಯ ಪೊಟೋಗಳನ್ನು ಡಿಲೀಟ್ ಮಾಡಿ ರೂಮರ್‍ ಗಳು ಹರಿದಾಡಲು ಕಾರಣವಾದರು. ಈ ಬಗ್ಗೆ ಮೆಗಾ ಕುಟುಂಬದಿಂದ ಸಹ ಸ್ಪಷ್ಟನೆ ಬಾರದ ಕಾರಣ ಮತಷ್ಟು ರೂಮರ್‍ ಜೋರಾಗಿದೆ.