Film News

ಮತ್ತೊಮ್ಮೆ ಸಂಚಲನಾತ್ಮಕ ಪೋಸ್ಟ್ ಹಂಚಿಕೊಂಡ ಕಲ್ಯಾಣ್ ದೇವ್, ಮೆಗಾಸ್ಟಾರ್ ಪುತ್ರಿ ಶ್ರೀಜಾರನ್ನು ಟಾರ್ಗೆಟ್ ಮಾಡಿದ್ರಾ?

ಸುಮಾರು ತಿಂಗಳುಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರ ಶ್ರೀಜಾ ಕೊಣಿದೆಲಾ ಹಾಗೂ ಕಲ್ಯಾಣ್ ದೇವ್ ಬೇರೆಯಾಗಿದ್ದಾರೆ, ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಅಧಿಕೃತವಾಗಿ ವಿಚ್ಚೇದನದ ಬಗ್ಗೆ ಘೋಷಣೆ ಮಾಡದಿದ್ದರೂ ಸಹ ಕೆಲವೊಂದು ಮೂಲಗಳಿಂದ ಇದು ಸತ್ಯ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಲ ಕೊಡುವಂತೆ ಕೆಲವೊಂದು ಆಧಾರಗಳೂ ಸಹ ಇದೆ ಎನ್ನಲಾಗಿದೆ. ಶ್ರೀಜಾ ಹಾಗೂ ಕಲ್ಯಾಣ್ ದೇವ್ ಜೋಡಿಯಾಗಿ ಕಾಣಿಸಿಕೊಂಡು ತಿಂಗಳುಗಳೇ ಕಳೆದಿದೆ. ಇದರ ಜೊತೆಗೆ ಅವರಿಬ್ಬರ ಕೆಲವೊಂದು ಪೋಸ್ಟ್ ಗಳೂ ಸಹ ಈ ರೂಮರ್‍ ಗಳಿಗೆ ಮತಷ್ಟು ಬಲ ಕೊಡುತ್ತಿದೆ ಎನ್ನಲಾಗಿದೆ. ಇದೀಗ ಕಲ್ಯಾಣ್ ದೇವ್ ಹಂಚಿಕೊಂಡ ಮತ್ತೊಂದು ಪೋಸ್ಟ್ ಸಂಚಲನ ಸೃಷ್ಟಿ ಮಾಡಿದೆ.

ಶ್ರೀಜಾ ಹಾಗೂ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟ ಬಳಿಕ ಕಲ್ಯಾಣ್ ದೇವ್ ಮೆಗಾ ಕುಟುಂಬದಿಂದ ಬೇರೆಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ಎಮೋಷನಲ್ ಕಾಮೆಂಟ್ಸ್ ಸಹ ಮಾಡುತ್ತಿರುತ್ತಾರೆ. ಅನೇಕ ಬಾರಿ ಕಲ್ಯಾಣ್ ದೇವ್ ತನ್ನ ಮಗಳ ಬಗ್ಗೆ ಮಾತ್ರ ಕಾಮೆಂಟ್ ಮಾಡುತ್ತಿದ್ದರು. ಅವರ ಮಗಳಿಗಾಗಿ ಆಗಾಗ ಎಮೋಷನಲ್ ಆಗಿ ಪೋಸ್ಟ್ ಮಾಡುತ್ತಿದ್ದರು. ಇನ್ನೂ ಶ್ರೀಜಾ ಸಹ ಕಲ್ಯಾಣ್ ದೇವ್ ಬಗ್ಗೆ ಎಲ್ಲೂ ಯಾವುದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ಆದರೆ ಇಬ್ಬರ ನಡುವೆ ವಿಬೇದಗಳು ಸೃಷ್ಟಿಯಾಗಿರುವುದು ಮಾತ್ರ ನಿಜ ಎಂದು ಹೇಳಲಾಗುತ್ತಿದೆ. ಇದೀಗ ಕಲ್ಯಾಣ್ ದೇವ್ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕಲ್ಯಾಣ್ ದೇವ್ ಮಗಳಾದ ನಿವಿಷ್ಕಾ ಶ್ರೀಜಾ ಜೊತೆಯಲ್ಲೇ ಇದ್ದಾರೆ. ಆಗಾಗ ಕಲ್ಯಾಣ್ ದೇವ್ ತನ್ನ ಮಗಳನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಇದೀಗ ಕಲ್ಯಾಣ್ ದೇವ್ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ವಿಡಿಯೋದಲ್ಲಿ ಒಬ್ಬ ಮಗು ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುತ್ತಾರೆ. ವೇದಿಕೆಯ ಮುಂಭಾಗದಲ್ಲಿರುವ ತನ್ನ ಪೋಷಕರನ್ನು ನೋಡಿ ಆಕೆಯಲ್ಲಿ ಮತಷ್ಟು ಉತ್ಸಾಹ ಹುಟ್ಟುತ್ತದೆ. ಈ ವಿಡಿಯೋ ಕಲ್ಯಾಣ್ ದೇವ್ ತನ್ನ ಇನ್ಸ್ಟಾ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋಗೆ ಆತ ಕಾಮೆಂಟ್ ಸಹ ಮಾಡಿದ್ದಾರೆ. ಮಕ್ಕಳಿಗೆ ತಾಯಿ ತಂದೆ ಇಬ್ಬರ ಪ್ರೀತಿ ಬೇಕು, ನವಿಷ್ಕಾ, ನವ್ರಿತಿ ರನ್ನು ನಾನು ತುಂಬಾ ಮಿಸ್ ಆಗುತ್ತಿದ್ದೀನಿ ಎಂದು ಕಾಮೆಂಟ್ ಮಾಡಿದ್ದಾರೆ. ನವ್ರಿತಿ ಶ್ರೀಜಾಳ ಮೊದಲ ಪತಿಯ ಮಗಳು. ನವಿಷ್ಕಾ ಕಲ್ಯಾಣ್ ದೇವ್ ಸಂತಾನವಾಗಿದೆ. ಇದೀಗ ಕಲ್ಯಾಣ್ ದೇವ್ ಇಬ್ಬರನ್ನೂ ನೆನಪಿಸಿಕೊಂಡಿರುವುದು ಇಂಟ್ರಸ್ಟಿಂಗ್ ವಿಚಾರವಾಗಿದೆ.

ಇನ್ನೂ ಕಳೆದ 2016 ರಲ್ಲಿ ಶ್ರೀಜಾ ಕಲ್ಯಾಣ್ ದೇವ್ ರನ್ನು ಎರಡನೇ ಮದುವೆಯಾದರು.  ಈ ಹಿಂದೆ ಕಲ್ಯಾಣ್ ದೇವ್ ನಟಿಸುವಂತಹ ಸಿನೆಮಾಗಳಿಗೆ ಮೆಗಾ ಕುಟುಂಬದಿಂದ ಒಳ್ಳೆಯ ಸಪೋರ್ಟ್ ಸಿಗುತ್ತಿತ್ತು. ಆದರೆ ಅವರ ಸಿನೆಮಾಗಳಿಗೆ ಯಾವುದೇ ಸಪೋರ್ಟ್ ಸಿಗುತ್ತಿಲ್ಲ. ಅಷ್ಟೇಅಲ್ಲದೇ ಕಲ್ಯಾಣ್ ದೇವ್ ಸಹ ಸಿನೆಮಾಗಳಿಂದ ಕೊಂಚ ದೂರವೇ ಇದ್ದಾರೆ. ಇನ್ನೂ ಕಲ್ಯಾಣ್ ದೇವ್ ಹಂಚಿಕೊಳ್ಳುವ ಪೋಸ್ಟ್ ಗಳು ವೈರಲ್ ಆಗುತ್ತಿರುತ್ತವೆ. ಇನ್ನೂ ಶ್ರೀಜಾ ಹಾಗೂ ಕಲ್ಯಾಣ್ ದೇವ್ ರವರ ವಿಚ್ಚೇದನದ ರೂಮರ್‍ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Most Popular

To Top