ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಪುಷ್ಪಾ ಸಿನೆಮಾದ ಶ್ರೀವಲ್ಲಿ ಪಾತ್ರದ ಬಗ್ಗೆ ಐಶ್ವರ್ಯ ರಾಜೇಶ್ ಕ್ಲಾರಿಟಿ……!

ಯಂಗ್ ನಟಿ ಐಶ್ವರ್ಯ ರಾಜೇಶ್ ವಿಭಿನ್ನ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಿನಿರಂಗದಲ್ಲಿ ವಿಭಿನ್ನ ಸಿನೆಮಾಗಳ ಮೂಲಕ  ಕ್ರೇಜ್ ಪಡೆದುಕೊಂಡು ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ. ಕೈತುಂಬಾ ಸಿನೆಮಾಗಳನ್ನು ಇಟ್ಟುಕೊಂಡು ಬ್ಯುಸಿಯಾಗಿರುವ ಈಕೆ…

ಯಂಗ್ ನಟಿ ಐಶ್ವರ್ಯ ರಾಜೇಶ್ ವಿಭಿನ್ನ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಿನಿರಂಗದಲ್ಲಿ ವಿಭಿನ್ನ ಸಿನೆಮಾಗಳ ಮೂಲಕ  ಕ್ರೇಜ್ ಪಡೆದುಕೊಂಡು ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ. ಕೈತುಂಬಾ ಸಿನೆಮಾಗಳನ್ನು ಇಟ್ಟುಕೊಂಡು ಬ್ಯುಸಿಯಾಗಿರುವ ಈಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪುಷ್ಪಾ ಸಿನೆಮಾದ ಶ್ರೀವಲ್ಲಿ ಪಾತ್ರದ ಬಗ್ಗೆ ಮಾತನಾಡಿದ್ದರು. ಆ ಪಾತ್ರಕ್ಕೆ ನಾನಾಗಿದ್ದರೇ ರಶ್ಮಿಕಾಗಿಂತ ಚೆನ್ನಾಗಿ ನಟಿಸುತ್ತಿದ್ದೆ ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾಗಿ ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ಐಶ್ವರ್ಯ ರಾಜೇಶ್ ಸ್ಪಷ್ಟನೆ ನೀಡಿದ್ದಾರೆ.

ಯಂಗ್ ನಟಿ ಐಶ್ವರ್ಯ ರಾಜೇಶ್ ಇತ್ತೀಚಿಗಷ್ಟೆ ಫರ್ಹಾನ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಸಿದ್ದರು. ಈ ಪ್ರಮೋಷನ್ ನಿಮಿತ್ತ ಐಶ್ವರ್ಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ತೆಲುಗು ಸಿನಿರಂಗದಲ್ಲಿ ಭಾರಿ ಸಕ್ಸಸ್ ಕಂಡುಕೊಂಡ ಪುಷ್ಪಾ ಸಿನೆಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಲ್ಲಿ ನಾನಾದರೇ ತುಂಬಾ ಚೆನ್ನಾಗಿ ನಟಿಸುತ್ತಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಆಕೆಯ ವಿರುದ್ದ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಫೈರ್‍ ಆಗಿದ್ದರು. ಅನೇಕ ವಿಮರ್ಶೆಗಳು ಎದುರಾದವು. ಇದೀಗ ಈ ಬಗ್ಗೆ ಐಶ್ವರ್ಯ ಸುದೀರ್ಘವಾದ ನೋಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಐಶ್ವರ್ಯ ರಾಜೇಶ್ ಹಂಚಿಕೊಂಡ ಈ ನೋಟ್ ನಲ್ಲಿರುವಂತೆ, ಡಿಯರ್‍ ಫ್ರೆಂಡ್ಸ್ ಇತ್ತಿಚಿಗೆ ಸಂದರ್ಶನವೊಂದರಲ್ಲಿ ತೆಲುಗಿನಲ್ಲಿ ಎಂತಹ ಪಾತ್ರಗಳಲ್ಲಿ ನೀವು ನಟಿಸಬೇಕೆಂಬ ಪ್ರಶ್ನೆ ನನಗೆ ಎದುರಾಗಿತ್ತು. ಅದಕ್ಕೆ ನಾನು ನನಗೆ ಟಾಲಿವುಡ್ ಅಂದರೇ ತುಂಬಾ ಇಷ್ಟ. ನನಗೆ ಇಷ್ಟವಾದ ಪಾತ್ರ ಬಂದರೇ ತಪ್ಪದೇ ನಟಿಸುತ್ತೇನೆ. ಪುಷ್ಪಾ ಸಿನೆಮಾದಲ್ಲಿನ ಶ್ರೀವಲ್ಲಿ ಪಾತ್ರ ನನಗೆ ಚೆನ್ನಾಗಿ ಹೊಂದಾಣಿಕೆ ಆಗುತ್ತಿತ್ತು ಎಂದು ಹೇಳಿದ್ದೆ. ಆದರೆ ನನ್ನ ಹೇಳಿಕೆಗಳು ತಪ್ಪಾಗಿ ಪ್ರಚಾರವಾಗಿದೆ. ರಶ್ಮಿಕಾ ಅಭಿನಯವನ್ನು ನಾನು ತಪ್ಪಾಗಿ ನೋಡಿದ್ದೇನೆ ಎಂಬ ಸುದ್ದಿಗಳು ಸಹ ಕೇಳಿಬಂದಿದೆ. ಆದರೆ ನಾನು ಸಹ ರಶ್ಮಿಕಾ ಅಭಿನಯಕ್ಕೆ ಫಿದಾ ಆಗಿದ್ದೇನೆ. ನಾನು ನನ್ನಂತೆ ಹಿರೋಯಿನ್ ಗಳ ಬಗ್ಗೆ ತುಂಬಾ ಗೌರವದಿಂದ ನಡೆದುಕೊಳ್ಳುತ್ತೇನೆ. ಆದರೆ ಕೆಲವು ಈ ರೀತಿಯ ರೂಮರ್‍ ಗಳನ್ನು ಹರಿಬಿಡುತ್ತಿದ್ದಾರೆ ಇನ್ನಾದರೂ ಈ ರೂಮರ್‍ ಗಳನ್ನು ನಿಲ್ಲಿಸಿ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಐಶ್ವರ್ಯ ರಾಜೇಶ್ ಹಂಚಿಕೊಂಡ ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈಕೆ ತೆಲುಗಿನಲ್ಲಿ ನಟಿಸಿದ ಕೌಸಲ್ಯ ಕೃಷ್ಣಮೂರ್ತಿ, ಟಕ್ ಜಗದೀಶ್, ರಿಪಬ್ಲಿಕ್, ಮಿಸ್ ಮ್ಯಾಚ್ ಸೇರಿದಂಯತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಈ ಸಿನೆಮಾಗಳು ಅಷ್ಟೊಂದು ಖ್ಯಾತಿ ಪಡೆದುಕೊಂಡಿಲ್ಲ. ಸದ್ಯ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ.