ಒಂದೇ ಫ್ರೇಂ ನಲ್ಲಿ ಕಾಣಿಸಿಕೊಂಡ ದಿಗ್ಗಜರು, ರಜನಿಕಾಂತ್ ಅಂಡ್ ಕ್ರಿಕೆಟಿಗ ಕಪಿಲ್ ದೇವ್ ಪೊಟೋ ವೈರಲ್…..!

ಸೌತ್ ಸಿನಿರಂಗದ ದಿಗ್ಗಜ ನಟರಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಒಬ್ಬರಾಗಿದ್ದಾರೆ. ದೇಶದ ಹಿರೋಗಳಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟರ ಸಾಲಿನಲ್ಲೂ ಸಹ ರಜನಿಕಾಂತ್ ರವರಿದ್ದಾರೆ. ಸದ್ಯ ರಜನಿಕಾಂತ್ ರವರು ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ ಜೈಲರ್‍, ಲೈಕಾ ಪ್ರೊಡಕ್ಷನ್ ನಲ್ಲಿ ಒಂದು ಸಿನೆಮಾ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ರಾಜೇಶ್ ನಿರ್ದೇಶನದಲ್ಲೊಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಹಾಗೂ ರಜನಿಕಾಂತ್ ಇಬ್ಬರೂ ಇಂದೇ ಫ್ರೇಂ ನಲ್ಲಿ ಕಾಣಿಸಿಕೊಂಡಿದ್ದು ಪೊಟೋ ಸಖತ್ ವೈರಲ್ ಆಗುತ್ತಿದೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ತನ್ನ ಟ್ವಿಟರ್‍ ಖಾತೆಯಲ್ಲಿ ಪೊಟೋ ಒಂದನ್ನು ಶೇರ್‍ ಮಾಡಿದ್ದರು. ಈ ಪೊಟೋದಲ್ಲಿ ರಜನಿಕಾಂತ್ ಕಪಿಲ್ ದೇವ್ ರೊಂದಿಗೆ ಮಾತನಾಡುತ್ತಾ ಒಂದೇ ಫ್ರೇಂ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಇಬ್ಬರು ದಿಗ್ಗಜರನ್ನು ಒಂದೇ ಫ್ರೇಂ ನಲ್ಲಿ ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ರಜನಿಕಾಂತ್ ಫ್ಯಾನ್ಸ್ ಒಂದು ಕಡೆ, ಕ್ರಿಕೆಟ್ ಫ್ಯಾನ್ಸ್ ಒಂದು ಕಡೆ ಸಖತ್ ಖುಷಿಯಾಗಿದ್ದಾರೆ. ಇನ್ನೂ ಖುಷಿಯ ಜೊತೆಗೆ ಅವರಿಗೆ ಕುತೂಹಲ ಸಹ ಮೂಡಿದೆ. ಅವರು ಎಲ್ಲಿ ಏಕೆ ಭೇಟಿಯಾದರು. ಯಾವುದಕ್ಕಾಗಿ ಭೇಟಿಯಾದರು ಎಂಬ ಆಸಕ್ತಿ ಸಹ ಮೂಡಿದೆ. ಇನ್ನೂ ಅವರಿಬ್ಬರು ಲಾಲ್ ಸಲಾಮ್ ಸಿನೆಮಾದ ಸೆಟ್ಸ್ ನಲ್ಲಿ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ರಜನಿಕಾಂತ್ ಈ ಪೊಟೋ ಟ್ವೀಟ್ ಮಾಡುತ್ತಾ ಕ್ರಿಕೆಟ್ ನಲ್ಲಿ ಭಾರತ ದೇಶಕ್ಕೆ ಮೊದಲ ಬಾರಿ ವಿಶ್ವಕಪ್ ತಂದುಕೊಟ್ಟ ಲೆಜೆಂಡ್ ಜೊತೆಗೆ ಕೆಲಸ ಮಾಡುವುದು ಅತ್ಯಂತ ಗೌರವಯುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಕಾರಣದಿಂದ ಕಪಿಲ್ ದೇವ್ ಸಹ ಲಾಲ್ ಸಲಾಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆಯೇ ಎಂಬುದು ಮತಷ್ಟು ಆಸಕ್ತಿಕರವಾಗಿದೆ. ಇದರ ಜೊತೆಗೆ ಕಪಿಲ್ ರವರಿಗೆ ಸಂಬಂಧಿಸಿದ ಪಾತ್ರದಲ್ಲಿ ರಜನಿಕಾಂತ್ ನಟಿಸುತ್ತಾರೆ ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಇನಷ್ಟೆ ಈ ಬಗ್ಗೆ ಸ್ಪಷ್ಟನೆ ದೊರೆಯಬೇಕಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಇದೀಗ ಮುಂಬೈನಲ್ಲಿ ಭರದಿಂದ ಸಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ರಜನಿಕಾಂತ್ ಮೊಯಿದ್ದೀನ್ ಭಾಯ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಲಾಲ್ ಸಲಾಮ್ ಸಿನೆಮಾದ ರಜನಿಕಾಂತ್ ರವರ ನ್ಯೂ ಲುಕ್ ಪೋಸ್ಟರ್‍ ರಿಲೀಸ್ ಮಾಡಲಾಗಿತ್ತು. ಈ ಪೋಸ್ಟರ್‍ ಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯಲ್ಲಿ ಸ್ಪಂದನೆ ದೊರೆತಿದೆ.

Previous articleನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಪುಷ್ಪಾ ಸಿನೆಮಾದ ಶ್ರೀವಲ್ಲಿ ಪಾತ್ರದ ಬಗ್ಗೆ ಐಶ್ವರ್ಯ ರಾಜೇಶ್ ಕ್ಲಾರಿಟಿ……!
Next articleಮತ್ತೊಮ್ಮೆ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟ ಮೃಣಾಲ್, ಎದೆಯ ಸೌಂದರ್ಯ ಮೂಲಕ ಹಲ್ ಚಲ್ ಸೃಷ್ಟಿಸಿದ ಬ್ಯೂಟಿ…..!