ಬಾಯ್ ಫ್ರೆಂಡ್ ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ, ವೈರಲ್ ಆದ ರೊಮ್ಯಾಂಟಿಕ್ ಪೊಟೋ…..!

Follow Us :

ಸಂದೀಪ್ ರೆಡ್ಡಿ ವಂಗಾ ಹಾಗೂ ರಣಬೀರ್‍ ಕಪೂರ್‍ ಕಾಂಬಿನೇಷನ್ ನಲ್ಲಿ ಬಂದ ಯಾನಿಮಲ್ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ಲೂಟಿ ಮಾಡಿದೆ. ಈ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸಿದ್ದ ತೃಪ್ತಿ ಡಿಮ್ರಿ ಸಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾದರಿಯಲ್ಲೇ  ಭಾರಿ ಸುದ್ದಿಯಾಗುತ್ತಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಸದ್ಯ ಭಾರಿ ಸುದ್ದಿಯಾಗುತ್ತಿರುವ ತೃಪ್ತಿ ಡಿಮ್ರಿ ಇದೀಗ ತನ್ನ ಬಾಯ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡಿದ್ದು, ಅವರಿಬ್ಬರ ರೊಮ್ಯಾಂಟಿಕ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಯಾನಿಮಲ್ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದಂತಹ ತೃಪ್ತಿ ಡಿಮ್ರಿ ಭಾರಿ ಫ್ಯಾನ್ ಫಾಲೋಯಿಂಗ್ ಸಹ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸುದ್ದಿಯಾಗುತ್ತಿದ್ದಾರೆ. ಯಾನಿಮಲ್ ಸಿನೆಮಾದ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡಿದಂತಹ ನಟಿ ತೃಪ್ತಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಫೆ.23 ಕ್ಕೆ ಆಕೆ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೆಟ್ಟಿಗರು ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ಈ ಹಿಂದೆ ತೃಪ್ತಿ ತಾನು ಮದುವೆಯಾಗುವ ಹುಡುಗನ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಅಮಾಯಕ ಹುಡುಗ ಹಾಗೂ ಒಳ್ಳೆಯ ವ್ಯಕ್ತಿತ್ವವುಳ್ಳ ಯುವಕನನ್ನು ಮದುವೆಯಾಗುವುದಾಗಿ ಹೇಳಿದ್ದರು.

ಇದೀಗ ತೃಪ್ತಿ ಡಿಮ್ರಿಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಎಲ್ಲ ನಟಿಯರಂತೆ ತೃಪ್ತಿ ಸಹ ಸಿಕ್ರೇಟ್ ಆಗಿ ಭಾಯ್ ಪ್ರೆಂಡ್ ಜೊತೆಗೆ ರಿಲೇಷನ್ ಶಿಪ್ ಮೈಂಟೈನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಓರ್ವ ಯುವಕನೊಂದಿಗೆ ಆಕೆ ತುಂಬಾ ಕ್ಲೋಜ್ ಆಗಿ ರೊಮ್ಯಾಂಟಿಕ್ ಆಗಿರುವಂತಹ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆತ ಸಹ ತೃಪ್ತಿಗೆ ತುಂಬಾ ಹತ್ತಿರದ ವ್ಯಕ್ತಿಯಂತೆ ಶುಭಾಷಯ ಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ಡಿಯರೆಸ್ಟ್ ತೃಪ್ತಿ ಎಂದು ವಿಶ್ ಮಾಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ತೃಪ್ತಿ ಹಂಚಿಕೊಂಡ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದ್ದು, ಆತನೇ ತೃಪ್ತಿ ಬಾಯ್ ಫ್ರೆಂಡ್ ಎಂದು ಪ್ರಚಾರ ಜೋರಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಆದರೆ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ. ಇನ್ನೂ ತೃಪ್ತಿ ಸದ್ಯ ವಿಜಯ್ ದೇವರಕೊಂಡ ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.