Film News

ಬಾಲಿವುಡ್ ನಟಿಯರ ರಹಸ್ಯ ಬಯಲು ಮಾಡಿದ ನಟಿ ಪ್ರಿಯಮಣಿ, ಹಣ ಕೊಟ್ಟು ಪೋಸ್ ಕೊಡುತ್ತಿದ್ದಾರಂತೆ?

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಿಯಮಣಿ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಇದೀಗ ಆಕೆ ಬಾಲಿವುಡ್ ನಟಿಯರ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿವೆ.

ಸದ್ಯ ನಟಿ ಪ್ರಿಯಮಣಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ಕೆಲವು ದಿನಗಳ ಕಾಲ ಆಕೆ ಸಿನಿರಂಗದಿಂದ ದೂರವೇ ಉಳಿದಿದ್ದರು. ಬಳಿಕ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಜಡ್ಜ್ ಆಗಿ, ತೆಲುಗು, ಹಿಂದಿ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಪೋಷಣೆ ಮಾಡುತ್ತಿದ್ದರು. ಬಳಿಕ ವೆಬ್ ಸಿರೀಸ್ ಗಳಲ್ಲೂ ಸಹ ನಟಿಸುತ್ತಿದ್ದರು. ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಬಳಿಕ ಆಕೆಗೆ ಹಿಂದಿಯಲ್ಲೂ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಹರಿದುಬಂದವು. ಸೌತ್ ಅಂಡ್ ನಾರ್ತ್‌ನಲ್ಲೂ ಆಕೆ ಬ್ಯುಸಿಯಾದರು. ಕಳೆದ ವರ್ಷ ಆಕೆ ಜವಾನ್ ಹಾಗೂ ಮಲಯಾಳಂ ನಲ್ಲಿ ನೆಹರು ಎಂಬ ಸಿನೆಮಾದಲ್ಲಿ ನಟಿಸಿ ಮತಷ್ಟು ಫೇಂ ಪಡೆದುಕೊಂಡರು. ಇತ್ತೀಚಿಗೆ ತೆರೆಕಂಡ ಭಾಮಾ ಕಲಾಪಂ-2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಈ ವೆಬ್ ಸಿರೀಸ್ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಿಡುಗಡೆಯಾದ ಐದು ದಿನದಲ್ಲೇ ನೂರು ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ.

ನಟಿ ಪ್ರಿಯಮಣಿ ಆರ್ಟಿಕಲ್ 370 ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ತಾರೆಯರ ರಹಸ್ಯವೊಂದನ್ನು ಬಯಲು ಮಾಡಿದ್ದಾರೆ. ಇಷ್ಟು ದಿನ ನೆಟ್ಟಿಗರು ಹಾಗೂ ಅಭಿಮಾನಿಗಳಿಗಿದ್ದ ಸಂದೇಹಗಳನ್ನು ಒಂದೇ ಮಾತಿನ ಮೂಲಕ ಸ್ಪಷ್ಟನೆ ಕೊಟ್ಟರು. ಬಾಲಿವುಡ್ ನಟಿಯರು ಎಲ್ಲಿ ಹೋದರು ಅವರ ಹಿಂದೆ ಪಾಪರಾಜಿಗಳು ಇರುತ್ತಾರೆ. ಜಿಮ್, ವಾಕಿಂಗ್, ಶಾಪಿಂಗ್, ವಿಮಾನ ನಿಲ್ದಾಣ ಎಲ್ಲಿ ಕಾಣಿಸಿಕೊಂಡರೂ ಸಹ ಪೊಟೋಗ್ರಾಫರಗಳು ಅವರ ಪೊಟೋ, ವಿಡಿಯೋ ತೆಗೆಯುತ್ತಿರುತ್ತಾರೆ. ಆದರೆ ನಮ್ಮನ್ನ ಯಾಕೇ ಯಾರು ಪೊಟೋ ತೆಗೆಯೊಲ್ಲ. ನಾನು ಸಹ ಜಿಮ್, ವಿಮಾನ ನಿಲ್ದಾಣಕ್ಕೆ ಹೋಗುತ್ತಿರುತ್ತೇನೆ. ಆಗ ನನಗೆ ಪಾಪರಾಜಿಗಳು ಯಾಕೆ ಕಾಣಿಸೊಲ್ಲ ಎಂಬ ಅನುಮಾನ ಸುಮಾರು ಬಾರಿ ತಿಳಿಯಿತು. ಈ ವಿಚಾರ ನನ್ನ ಸಹಚರರನ್ನು ಕೇಳಿದಾಗ ಅಸಲಿ ಸತ್ಯ ತಿಳಿಯಿತು. ಅದನ್ನು ತಿಳಿದು ನಾನು ಶಾಕ್ ಆದೆ ಎಂದಿದ್ದಾರೆ ಪ್ರಿಯಮಣಿ.

ನಟಿ-ನಟರು ತಾವು ಎಲ್ಲಿಗೆ ಹೋದರೂ ಮುಂದೆ ಪಾಪರಾಜಿಗಳಿಗೆ ತಿಳಿಸುತ್ತಾರೆ. ಅದಕ್ಕಾಗಿ ಅವರಿಗೆ ಹಣ ನೀಡಬೇಕಾಗುತ್ತದೆ. ಬಾಲಿವುಡ್ ನಲ್ಲಿ ಸುಮಾರು ಮಂದಿ ಆ ರೀತಿ ಡಬ್ಬು ನೀಡಿ ಪಬ್ಲಿಸಿಟಿ ಬಯಸುತ್ತಾರೆ. ಈ ವಿಚಾರ ತಿಳಿದು ನಾನು ಶಾಕ್ ಆದೆ. ಒಬ್ಬೊಬ್ಬ ಪೊಟೋಗ್ರಾಫರ್‍ ಗೂ ಒಂದೊಂದು ಧರ ಇರುತ್ತೆ ಎಂಬುದು ನನಗೆ ನಂಬೋಕೆ ಆಗಲಿಲ್ಲ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಸದ್ಯ ಪ್ರಿಯಮಣಿ ತಮಿಳಿನಲ್ಲಿ ಕೊಟೇಷನ್ ಗ್ಯಾಂಗ್, ಹಿಂದಿಯಲ್ಲಿ ಮೈಡನ್, ಕನ್ನಡದಲ್ಲಿ ಕೈಮರ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top