News

ಮದುವೆಗೆ ಒಪ್ಪದ ಗೆಳತಿಯನ್ನು ಬರ್ಬರವಾಗಿ ಕೊಂದು ಬಿಟ್ಟ ಗೆಳೆಯ, ಆರೋಪಿ ಗಂಡಾಗಿ ಬದಲಾದ ಹೆಣ್ಣಾಗಿದ್ದನಂತೆ…..!

ತನ್ನ ಬಾಲ್ಯದ ಗೆಳತಿಯನ್ನು ವಿವಾಹವಾಗಲು ಇಷ್ಟಪಟ್ಟ ವ್ಯಕ್ತಿಯೋರ್ವ ಮದುವೆಗೆ ಒಪ್ಪದ ಕಾರಣದಿಂದ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. 25 ವರ್ಷ ವಯಸ್ಸಿನ ಯುವತಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಚೆನೈನ ಸಮೀಪದ ತಲಂಬೂರಿನಲ್ಲಿ ಈ ಘೋರ ಕೃತ್ಯ ನಡೆದಿದ್ದು, ಈ ಹತ್ಯೆ ತಮಿಳುನಾಡಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

ಕೊಲೆಯಾದ ಯುವತಿಯನ್ನು ಸಾಫ್ಟ್ ವೇರ್‍ ಉದ್ಯೋಗಿ ನಂದಿನಿ (25) ಎಂದು ಗುರ್ತಿಸಲಾಗಿದೆ. ಆರೋಪಿ ವೆಟ್ರಿಮಾರನ್ (26) ಮಧುರೈನಲ್ಲಿದ್ದ ಒಂದೇ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಎಂಟು ತಿಂಗಳ ಹಿಂದೆಯಷ್ಟೆ ಇಬ್ಬರೂ ಒಂದೇ ಸಾಫ್ಟ್ ವೇರ್‍ ಕಂಪನಿಗೆ ಸಹ ಸೇರಿಕೊಂಡಿದ್ದರು. ಇನ್ನೂ ವೆಟ್ರಿಮಾರನ್ ಓರ್ವ ಟ್ರಾನ್ಸ್ ಜೆಂಡರ್‍ ಆಗಿದ್ದ. ಪಾಂಡಿ ಮಹೇಶ್ವರಿ ಆಗಿದ್ದ ಆರೋಪಿ ಬಳಿಕ ವೆಟ್ರಿಮಾರನ್ ಆಗಿ ಗಂಡಾಗಿ ಬದಲಾಗಿದ್ದ ಎನ್ನಲಾಗಿದೆ. ಇಬ್ಬರೂ ಬಾಲ್ಯಂದಿದಲೂ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಆರೋಪಿ ಗಂಡಾಗಿ ಬದಲಾದ ಬಳಿಕ ನಂದಿನಿಯನ್ನು ಮದುವೆಯಾಗಲು ಬಯಸಿದ್ದಾನೆ. ಆದರೆ ನಂದಿನಿ ಆರೋಪಿಯ ಪ್ರಪೋಸಲ್ ನಿರಾಕರಿಸಿದ್ದಳಂತೆ. ಜೊತೆಗೆ ಆಕೆ ಬೇರೊಬ್ಬ ಯುವಕನೊಂದಿಗೆ ಸಲುಗೆಯಿಂದ ಇರಲು ಶುರು ಮಾಡಿದ್ದಾಳೆ. ಈ ಕಾರಣದಿಂದ ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

ಕಳೆದ ಶನಿವಾರ ರಾತ್ರಿ ಆರೋಪಿ ವೆಟ್ರಿಮಾರನ್ ನಂದಿನಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿ, ಹುಟ್ಟುಹಬ್ಬದ ಉಡುಗೊರೆ ಕೊಡಿಸುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಮೊದಲಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ನಂದಿನಿಯ ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿ, ಆಕೆಯಲ್ಲಿ ಇನ್ನೂ ಜೀವ ಇರುವಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇನ್ನೂ ಅರೆಬರೆ ಬೆಂದ ಮೃತ ದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಈ ಸುದ್ದಿ ಇದೀಗ ಇಡೀ ತಮಿಳುನಾಡಿನಾದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ ಎನ್ನಲಾಗಿದೆ.

Most Popular

To Top