Film News

ಯಾರಾದ್ರೂ ಆಕೆಗೆ 50 ವರ್ಷ ಅಂದ್ರೇ ನಂಬೋಕೆ ಆಗುತ್ತಾ, ರೆಡ್ ಮಿರ್ಚಿಯಂತೆ ಗ್ಲಾಮರಸ್ ಆಗಿ ಮಿಂಚಿದ ಮಲೈಕಾ……!

ನಾರ್ತ್ ಸಿನಿರಂಗದಲ್ಲಿ ಪ್ರತಿಭೆಗಿಂತ ಗ್ಲಾಮರ್‍ ಗೆ ಹೆಚ್ಚು ಪ್ರಧಾನ್ಯತೆ ಇರುತ್ತದೆ ಎಂದು ಹೇಳಬಹುದಾಗಿದೆ. ಆ ಕಾರಣದಿಂದಲೇ ಅನೇಕ ನಟಿಯರೂ ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಅರೋರಾ ಸಹ ಸೇರುತ್ತಾರೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಗೆ 50 ವರ್ಷ ವಯಸ್ಸು ಎಂದು ನಂಬಲು ಸಾಧ್ಯವಾಗದಂತಹ ರೀತಿಯಲ್ಲಿ ಆಕೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ರೆಡ್ ಡ್ರೆಸ್ ನಲ್ಲಿ ಗ್ಲಾಮರಸ್ ಪೋಸ್ ಗಳನ್ನು ನೀಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಬಾಲಿವುಡ್ ಸೀನಿಯರ್‍ ಹಾಟ್ ಬ್ಯೂಟಿ ಮಲೈಕಾ ವಿಚಾರದಲ್ಲಿ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಎಂದು ಹೇಳಬಹುದಾಗಿದೆ. ಹಾಫ್ ಸೆಂಚುರಿಗೆ ಹತ್ತಿರದಲ್ಲಿದ್ದರೂ ಸಹ ಆಕೆ ಹದಿಹರೆಯದ ಯುವತಿಯಂತೆ ದೇಹದ ಮೈಮಾಟ ಹೊಂದಿದ್ದಾರೆ. ನಟಿ ಮಲೈಕಾ ಅರೋರ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸದಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಜಿಮ್ ಬಳಿ ಕಾಣಿಸಿಕೊಂಡಿದ್ದ ಪೊಟೋಗಳೂ ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಹ ಪಡೆದುಕೊಂಡಿದ್ದಾರೆ.

ಹಾಟ್ ನಟಿ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿಯೇ ಇರುತ್ತಾರೆ. ಸದ್ಯ ಸಿನೆಮಾಗಳಿಂದ ಕೊಂಚ ದೂರವೇ ಉಳಿದಿದ್ದರೂ ಕಿರುತೆರೆ ಹಾಗೂ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಇದೀಗ ಆಕೆ ವಿಚಿತ್ರವಾದ ರೆಡ್ ಸೀರೆಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸಾಮಾನ್ಯವಾಗಿ ಮಲೈಕಾ ಎಂತಹುದೇ ಡ್ರೆಸ್ ಧರಿಸಿದರೂ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಇದೀಗ ಆಕೆ ರೆಡ್ ಡ್ರೆಸ್ ನಲ್ಲಿ ರೆಡ್ ಮಿರ್ಚಿಯಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಆಕೆಯನ್ನು ನೋಡಿದರೇ ಆಕೆಗೆ 50 ವರ್ಷ ವಯಸ್ಸು ಎಂದು ಹೇಳಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. ಥೈಸ್ ಹಾಗೂ ಕ್ಲೀವೇಜ್ ಶೋ ಮಾಡುವ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಪೊಟೊಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.  ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳು ಹಾಗೂ ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮಲೈಕಾ ಅರೋರಾ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಆಕೆ ತನಗಿಂತ 12 ವರ್ಷ ಚಿಕ್ಕವನಾದ ನಟ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಸಾರ್ವಜನಿಕವಾಗಿಯೇ ಊರೂರು ಸುತ್ತಾಡುತ್ತಿದ್ದಾರೆ. ವೆಕೇಷನ್, ಪಾರ್ಟಿಗಳಿಗೆ ಅವರಿಬ್ಬರೂ ಜೋಡಿಯಾಗಿ ಹೋಗಿದಂತಹ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

Most Popular

To Top