News

ಲವ್ ಜಿಹಾದ್ ಆರೋಪ, ಟ್ವೀಟ್ ಮೂಲಕ ರಕ್ಷಣೆ ಕೋರಿದ ಬೆಂಗಳೂರಿನ ಮಹಿಳಾ ಟೆಕ್ಕಿ……!

ದೇಶದಲ್ಲಿ ಆಗಾಗ ಲವ್ ಜಿಹಾದ್ ಕುರಿತಂತೆ ಸುದ್ದಿಗಳು ಕೇಳಿಬರುತ್ತಿರುತ್ತವೆ. ಇದೀಗ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಲವ್ ಜಿಹಾದ್ ಆರೋಪ ಮಾಡಿದ್ದಾರೆ. ಕಾಶ್ಮೀರದ ಮುಸ್ಲೀಂ ಯುವಕನೋರ್ವ ತನ್ನನ್ನು ಬಳಸಿಕೊಂಡು ಮತಾಂತರ ಆಗುವಂತೆ ಬೆದರಿಕೆ ಹಾಕುತ್ತಿದ್ದಾನೆ. ನಾನು ಲವ್ ಜಿಹಾದ್ ಗೆ ಒಳಗಾಗಿದ್ದೇನೆ ಎಂದು ಆಕೆ ಟ್ವೀಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನೂ ತಾನು ಲವ್ ಜಿಹಾದ್ ಗೆ ಒಳಗಾಗಿರುವ ಬಗ್ಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆದಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯವೆಸಗಿದ್ದಾನೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಪೊಲೀಸರ ಸಹಾಯ ಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ. ಅಷ್ಟೇಅಲ್ಲದೇ ಬೆಂಗಳೂರು ಪೊಲೀಸರ ಜೊತೆಗೆ ಕಾಶ್ಮೀರ ಪೊಲೀಸರನ್ನು ಸಹ ಟ್ಯಾಗ್ ಮಾಡಿ ಆಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ. ಇನ್ನೂ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಪೊಲೀಸರು ಬೆಳ್ಳಂದೂರು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನೂ ಕಾಶ್ಮೀರದ ಯುವಕನೊಂದಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಫೇಸ್ ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಜೊತೆಗೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಸಹ ನಡೆದಿದೆ. ಮುಂದುವರೆದು ಆಕೆಯೊಂದಿಗೆ ದೈಹಿಕ ಸಂಪರ್ಕ ಸಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಬಳಿಕ ಆಕೆಯನ್ನು ಬಲವಂತವಾಗಿ ಮತಾಂತರ ಸಹ ಮಾಡಿದ್ದಾನೆ ಎಂದು ಸಹ ಆಕೆ ಆರೋಪಿಸಿದ್ದಾಳೆ. 2019 ರಿಂದ ಇಬ್ಬರೂ ಒಟ್ಟಿಗೆ ವಾಸವಿದ್ದು,ಇದೀಗ ಆತ ಮದುವೆಯೋಗೊಲ್ಲ ಎಂದು ಆಕೆಯನ್ನು ದೂರ ಮಾಡಿದ್ದಾನಂತೆ. ಯುವತಿಗೆ ಪ್ರಾಣ ಬೆದರಿಕೆ ಸಹ ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.  ಸದ್ಯ ಮಹಿಳೆ ಇದುವರೆಗೂ ಯಾವುದೇ ದೂರು ನೀಡಿಲ್ಲ. ಯುವತಿ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Most Popular

To Top