ಅತ್ತೆ ಮನೆಯಲ್ಲಿ ಕಿರುಕುಳಕ್ಕೆ ಬೇಸತ್ತು ಹೊರಬಂದ ಮಗಳನ್ನು ಬ್ಯಾಂಡ್ ವಾಲಗದ ಜೊತೆಗೆ ಮೆರವಣಿಗೆ ಮೂಲಕ ತವರಿಗೆ ಕರೆತಂದ ತಂದೆ……!

ಮದುವೆಯಾದ ಬಳಿಕ ಮಗಳಿಗೆ ಅತ್ತೆ ಮನೆಯಲ್ಲಿ ಏನಾದರೂ ಕಿರುಕುಳ ಕೊಡುತ್ತಿರುವ ಬಗ್ಗೆ ಆಕೆ ತಮ್ಮ ಪೋಷಕರಿಗೆ ಹೇಳಿದರೇ ಸಹಿಸಿಕೊಂಡು ಹೋಗು, ಹೊಂದಾಣಿಕೆ ಮಾಡಿಕೊಂಡು ಹೋಗು ಸಂಸಾರ ಎಂದರೇ ಇದೆಲ್ಲಾ ಬರುತ್ತೆ ಎಂದು ಹೇಳುವ ಬಹುತೇಕ…

ಮದುವೆಯಾದ ಬಳಿಕ ಮಗಳಿಗೆ ಅತ್ತೆ ಮನೆಯಲ್ಲಿ ಏನಾದರೂ ಕಿರುಕುಳ ಕೊಡುತ್ತಿರುವ ಬಗ್ಗೆ ಆಕೆ ತಮ್ಮ ಪೋಷಕರಿಗೆ ಹೇಳಿದರೇ ಸಹಿಸಿಕೊಂಡು ಹೋಗು, ಹೊಂದಾಣಿಕೆ ಮಾಡಿಕೊಂಡು ಹೋಗು ಸಂಸಾರ ಎಂದರೇ ಇದೆಲ್ಲಾ ಬರುತ್ತೆ ಎಂದು ಹೇಳುವ ಬಹುತೇಕ ಪೋಷಕರನ್ನು ನಾವು ನೋಡಿದ್ದೆವೆ. ಆದರೆ ಇಲ್ಲೊಬ್ಬ ತಂದೆ ಮಾಡಿದ್ದೇ ಬೇರೆಯಾಗಿದೆ. ತನ್ನ ಮಗಳಿಗೆ ಅತ್ತೆ ಮನೆಯಲ್ಲಿ ಕಿರುಕುಳ ಕೊಟ್ಟ ಕಾರಣದಿಂದ ಹೊರಬಂದರೇ ಮೇಳ ತಾಳಗಳೊಂದಿಗೆ ಆಕೆಯನ್ನು ಮೆರವಣಿಗೆ ಮೂಲಕ ತವರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜಾರ್ಖಂಡ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎನ್ನಲಾಗಿದೆ.

ಜಾರ್ಖಂಡ್ ಗೆ ಸೇರಿದ ವ್ಯಕ್ತಿಯೊಬ್ಬರ ಮಗಳು ಅತ್ತೆ ಮನೆಯಲ್ಲಿ ಆಕೆಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದು ಕೂಡಲೇ ಬ್ಯಾಂಡ್ ಸೆಟ್ ಕರೆದುಕೊಂಡು ಹೋಗಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಮಗಳನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಮಾನ್ಯವಾಗಿ ಪೋಷಕರು ತಮ್ಮ ಮಗಳು ಅತ್ತೆ ಮನೆಯಲ್ಲಿ ನೋವು ಪಡುತ್ತಿದ್ದರೇ, ಮರ್ಯಾದೆಗೆ ಅಂಜಿ ಮಗಳನ್ನು ಹೊಂದಾಣಿಕೆ ಮಾಆಡಿಕೊಂಡು ಹೋಗು ಎಂದು ಹೇಳುವುದು ಸಹಜ ಆದರೆ ಜಾರ್ಖಂಡ್  ಮೂಲದ ಪ್ರೇಮ್ ಗುಪ್ತಾ ಎಂಬುವವರು ತಮ್ಮ ಮಗಳು ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ತಿಳಿದು ಆಕೆಯನ್ನು ಮತ್ತೆ ಪ್ರೀತಿಯಿಂದ ತವರು ಮನೆಗೆ ಸಂಭ್ರಮದಿಂದ ಕರೆದುಕೊಂಡು ಹೋಗಿದ್ದಾರೆ. ನಾನು ಮಗಳಿಗೆ ಎಷ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇನೋ ಅದೇ ಮಾದರಿಯಲ್ಲಿ ಆಕೆಯನ್ನು ನೀವು ವಾಪಸ್ ಕರೆಸಿಕೊಳ್ಳಬೇಕು, ನನಗೆ ನನ್ನ ಮಗಳು ತುಂಬಾನೆ ಅಮೂಲ್ಯ ಎಂದು ಹೇಳಿದ್ದಾರೆ.

ಪ್ರೇಮ್ ಗುಪ್ತಾ ಮಗಳು ಸಾಕ್ಷಿ ಗುಪ್ತಾ ಕೆಲವು ತಿಂಗಳುಗಳ ಹಿಂದೆಯಷ್ಟೆ ಮದುವೆ ಮಾಡಿಕೊಟ್ಟಿದ್ದರು. ಕಳೆದ 2022 ಏಪ್ರಿಲ್ 28 ರಂದು ತಮ್ಮ ಪುತ್ರಿ ಸಾಕ್ಷಿ ಗುಪ್ತಾ ಹಾಗೂ ಸಚಿನ್ ಕುಮಾರ್‍ ಎಂಬ ವರನೊಂದಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಸಾಕ್ಷಿ ಗುಪ್ತಾಗೆ ಕಿರುಕುಳ ಶುರುವಾಗಿತ್ತಂತೆ. ಜೊತೆಗೆ ಆಕೆಯನ್ನು ಮನೆಯಿಂದ ಹೊರಹಾಕಲು ಸಹ ಪ್ರಯತ್ನಗಳನ್ನು ಮಾಡುತ್ತಿದ್ದರಂತೆ. ಇನ್ನೂ ಈಗಾಗಲೇ ಸಚಿನ್ ಕುಮಾರ್‍ ಗೆ ಎರಡು ಮದುವೆಯಾಗಿತ್ತಂತೆ. ಆದ್ದರಿಂದ ಆಕೆ ಮನೆಯಿಂದ ಹೊರಬರಲು ಪ್ರಯತ್ನ ಮಾಡುತಿದ್ದರಂತೆ. ಈ ಬಗ್ಗೆ ಸಾಕ್ಷಿ ತನ್ನ ತಂದೆಯ ಬಗ್ಗೆ ಚರ್ಚೆ ಮಾಡಿದ್ದಳಂತೆ. ಸಾಕ್ಷಿಯ ನಿರ್ಧಾರವನ್ನು ಸಂತೋಷದಿಂದ ಒಪ್ಪಿಕೊಂಡು, ಆಕೆಯನ್ನು ಅತ್ತೆ ಮನೆಯಿಂದ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತರಲು ನಿರ್ಧಾರ ಮಾಡಿದ್ದು, ಅದರಂತೆ ಡೋಳು-ಮೇಳಗಳೊಂದಿಗೆ ಪಟಾಕಿ ಸಿಡಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಸಾಕ್ಷಿ ವಿಚ್ಚೇದನಕ್ಕೆ ಸಾಕ್ಷಿ ಅರ್ಜಿ ಸಹ ಸಲ್ಲಿಸಿದ್ದಾಳೆ ಎಂದು ಹೇಳಲಾಗಿದೆ. ಅಷ್ಟೇಅಲ್ಲದೇ ಪತಿ ಸಚಿನ್ ಗೆ ಆಕೆ ಪರಿಹಾರ ಸಹ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.