Film News

ಅದು ಸೆಕ್ಸ್ ಸೀನ್ ಅಲ್ಲ, ಮದುವೆಯ ಬಳಿಕ ಪತಿ ಮಾಡುವ ಭಯಂಕರ ರೇಪ್ ದೃಶ್ಯ ಎಂದು ಫೈರ್ ಆದ ಮೆಹರೀನ್….!

ಟಾಲಿವುಡ್ ನಲ್ಲಿ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಪಂಜಾಬ್ ಮೂಲದ ಈಕೆ ಮೊದಲಿಗೆ ಮಾಡಲಿಂಗ್ ಮೂಲಕ ತನ್ನ ಕೆರಿಯರ್‍ ಪ್ರಾರಂಭಿಸಿದರು. ಆಕೆ ಗ್ಲಾಮರ್‍ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಿನೆಮಾದಲ್ಲಿನ ಪಾತ್ರಕ್ಕೆ ತಕ್ಕಂತೆ ಗ್ಲಾಮರ್‍ ಶೋ ಮಾಡುತ್ತಾ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಸುಲ್ತಾನ್ ಆಫ್ ಡೆಲ್ಲಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿನ ದೃಶ್ಯಗಳ ಬಗ್ಗೆ ಕೆಲವರು ತಪ್ಪಾಗಿ ಕಾಮೆಂಟ್ಸ್ ಮಾಡಿದ್ದು ಈ ಬಗ್ಗೆ ಆಕೆ ಫೈರ್‍ ಆಗಿದ್ದಾರೆ.

ನಟಿ ಮೆಹರೀನ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಫಿರಿಯಾಡಿಕಲ್ ಆಕ್ಷನ್ ಕಥೆಯುಳ್ಳ ಸುಲ್ತಾನ್ ಆಫ್ ಡೆಲ್ಲಿ ಎಂಬ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್ ನಲ್ಲಿ ಆಕೆ ಪ್ರಮುಖ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಕೊಂಚ ಪದ್ದತಿಯಾಗಿಯೇ ಕಾಣಿಸಿಕೊಂಡ ಮೆಹರೀನ್ ಈ ಸಿರೀಸ್ ನಲ್ಲಿ ಕೊಂಚ ಹಾಟ್ ಆಗಿ ಅಂದರೇ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗುತ್ತಿವೆ. ಮೆಹರೀನ್ ಲಿಪ್ ಲಾಕ್, ಸೆಕ್ಸ್ ದೃಶ್ಯಗಳಲ್ಲೂ ಸಹ ನಟಿಸಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ವೈರಲ್ ಆಗಿದೆ. ಇದನ್ನು ಗಮನಿಸಿದ ಮೆಹರೀನ್ ನಿಮಗೆ ಸೆಕ್ಸ್ ದೃಶ್ಯಕ್ಕೂ, ರೇಪ್ ದೃಶ್ಯಕ್ಕೂ ಡಿಫರೆನ್ಸ್ ಗೊತ್ತಿಲ್ಲವೇ ಎಂದು ಫೈರ್‍ ಆಗಿದ್ದು, ಈ ಬಗ್ಗೆ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ಮೆಹರೀನ್ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಈ ರೀತಿ ಬರೆದುಕೊಂಡಿದ್ದು,. ನಾನು ಸುಲ್ತಾನ್ ಆಫ್ ಡೆಲ್ಲಿ ಎಂಬ ಸಿನೆಮಾದ ಮೂಲಕ ಒಟಿಟಿಯಲ್ಲಿ ಕಾಣಿಸಿಕೊಂಡರು. ನನ್ನ ಅಭಿಮಾನಿಗಳು ಈ ಸಿರೀಸ್ ನೋಡಿ ಎಂಜಾಯ್ ಮಾಡಿದ್ದೀರಾ ಅಂದುಕೊಳ್ಳುತ್ತೇನೆ. ಕೆಲವೊಂದು ದೃಶ್ಯಗಳು ನೈತಿಕತೆಯ ವಿರುದ್ದವಾಗಿ ಅನ್ನಿಸಿದರೂ ಸಹ ನಟಿಯಾಗಿ ಆ ಕಥೆಗೆ ಅನುಗುಣವಾಗಿ ನಟಿಸಬೇಕಾಗುತ್ತದೆ. ಓರ್ವ ಪ್ರೊಫೆಷನಲ್ ಆಗಿ ನಟನೆಯನ್ನು ಉದ್ಯೋಗವಾಗಿ ಭಾವಿಸುತ್ತೇನೆ. ಮದುವೆ ಬಳಿಕ ಬೆಡ್ ರೂಂ ನಲ್ಲಿ ಪತಿ ಮಾಡುವಂತಹ ಧಾರುಣವಾದ ರೇಪ್ ದೃಶ್ಯಗಳನ್ನು ಕೆಲವರು ಸೆಕ್ಸ್ ದೃಶ್ಯಗಳು ಎಂದು ಬರೆದರುವುದು ಸರಿಯಲ್ಲ. ನಿಮಗೆ ಅಕ್ಕ ತಂಗಿ, ಮಗಳು ಯಾರೂ ಇಲ್ಲವೇ, ಅವರಿಗೂ ಇದೇ ರೀತಿಯಾದರೇ ಹೀಗೆ ಮಾತನಾಡುತ್ತೀರಾ. ಕೆಲವೊಂದು ಮಿಡಿಯಾಗಳಲ್ಲಿ ಆ ರೀತಿಯಾಗಿ ತಪ್ಪಾಗಿ ಬರೆದಿರುವುದು ತುಂಬಾ ನೋವಾಗಿದೆ. ನಿಮ್ಮ ಮನೆಯವರಿಗೆ ಆ ರೀತಿಯ ಪರಿಸ್ಥಿತಿ ಬರಬಾರದೆಂದು ಪ್ರಾರ್ಥನೆ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Most Popular

To Top