Film News

ಮದುವೆಯಾದ ಒಂದೇ ವಾರದಲ್ಲೇ ಆತಿಯಾ ಶೆಟ್ಟಿಗೆ ಎದುರಾಯ್ತು ಟೀಕೆಗಳು, ತಾಳಿ, ಸಿಂಧೂರ ತೆಗೆದ ಕಾರಣಕ್ಕೆ ಆಕ್ರೋಷ….!

ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಕ್ರಿಕೆಟ್ ಹಾಗೂ ಸಿನೆಮಾ ರಂಗಗಳೂ ಸಹ ಸೇರಿದೆ. ಈಗಾಗಲೇ ಕ್ರಿಕೆಟಿಗರು ಹಾಗೂ ಸಿನಿರಂಗದ ಅನೇಕರು ಮದುವೆಯಾಗಿದ್ದಾರೆ. ಅದರಂತೆ ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಹಾಗೂ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದರು. ಕಳೆದ ಜ.23 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿದ್ದು, ಮದುವೆಯಾಗಿ ಇನ್ನೂ ವಾರ ಸಹ ಕಳೆದಿಲ್ಲ. ಆತಿಯಾ ಶೆಟ್ಟಿ ವಿರುದ್ದ ನೆಟ್ಟಿಗರು ಆಕ್ರೋಷ ಹೊರಹಾಕಿದ್ದಾರೆ. ಕಾರಣ ಏನು ಎಂಬ ವಿಚಾರಕ್ಕೆ ಬಂದರೇ.

ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ರವರ ಮದುವೆ ಜ.23 ರಂದು ಸುನೀಲ್ ಶೆಟ್ಟಿಯವರ ಖಂಡಾಲಾ ಫಾರ್ಮ್ ಹೌಸ್ ನಲ್ಲಿ ಅದ್ದುರಿಯಾಗಿ ನೆರವೇರಿತ್ತು. ಅವರ ಮದುವೆಗೆ ಸಿನೆಮಾ ತಾರೆಯರು, ಟಿಂ ಇಂಡಿಯಾ ಆಟಗಾರರೂ ಸೇರಿದಂತೆ ಅನೇಕ ಗಣ್ಯರು ಹಾಜರಾಗಿದ್ದರು. ಇನ್ನೂ ಅವರ ಮದುವೆಗೆ ಸಂಬಂಧಿಸಿದ ಕೆಲವೊಂದು ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ದುಬಾರಿ ಬೆಲೆಯ ಮದುವೆ ವಸ್ತ್ರಗಳನ್ನು ಧರಿಸಿ ವಧು ವರರು ಇಬ್ಬರೂ ಮಿಂಚಿದ್ದರು. ಜೊತೆಗೆ ಅವರ ಅಭಿಮಾನಿಗಳು ಸೇರಿದಂತೆ ಅನೇಕರು ನೂತನ ವಧು ವರರಿಗೆ ಶುಭಾಷಯಗಳನ್ನೂ ಸಹ ಕೋರಿದ್ದರು. ಈ ಜೋಡಿಗೆ ದುಬಾರಿ ಬೆಲೆಯ ಗಿಫ್ಟ್ ಗಳೂ ಸಹ ಬಂದಿದೆ ಎಂಬ ಸುದ್ದಿ ಸಹ ಕೇಳಿಬಂದಿತ್ತು.

ಇನ್ನೂ ಮದುವೆಯಾದ ಬಳಿಕ ಆತಿಯಾ ಹಾಗೂ ರಾಹುಲ್ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಆತಿಯಾ ಕಾಣಿಸಿಕೊಂಡಿದ್ದಾರೆ. ಇನ್ನೂ ರಾಹುಲ್ ಸಿಂಪಲ್ ಆಗಿ ವೈಟ್ ಕಲರ್‍ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿದ್ದಾರೆ. ಜೋಡಿಯಿಬ್ಬರೂ ಸಹ ಸರಳವಾಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಆತಿಯಾ ಶೆಟ್ಟಿ ಕಾಣಿಸಿಕೊಂಡ ಲುಕ್ಸ್ ಅನ್ನು ಕೆಲವರು ಮೆಚ್ಚಿದ್ದಾರೆ. ಜೊತೆಗೆ ಕೆಲವರಂತೂ ಆಕ್ರೋಷ ಗೊಂಡಿದ್ದಾರೆ. ಕಾರಣ ಆತಿಯಾ ಹಣೆಗೆ ಸಿಂಧೂರ ಹಾಗೂ ಕತ್ತಲ್ಲಿ ತಾಳಿ ಕಾಣಿಸಿಕೊಂಡಿಲ್ಲ. ಈ ಕಾರಣದಿಂದ ಮದುವೆಯಾಗಿ ಇನ್ನೂ ಒಂದು ವಾರ ಸಹ ಕಳೆದಿಲ್ಲ ಆಗಲೇ ಆತಿಯಾ ಸಿಂಧೂರ ಹಾಗೂ ತಾಳಿಯನ್ನು ಮರೆತಿರುವುದು ಸರಿಯಲ್ಲ ಎಂದು ಅನೇಕರು ಆಕ್ರೋಷ ಹೊರಹಾಕಿದ್ದಾರೆ. ಸೆಲೆಬ್ರೆಟಿಗಳು ಈ ರೀತಿಯಲ್ಲಿ ಸಂಪ್ರದಾಯವನ್ನು ಮರೆತರೇ ಅದು ಸಾಮಾನ್ಯರ ಮೇಲೂ ಸಹ ಪರಿಣಾಮ ಬೀರುತ್ತದೆ. ಆದ್ದರಿಂದ ಈ ರೀತಿಯ ನಡೆ ಸರಿಯಲ್ಲ ಎಂದು ಆಕ್ರೋಷ ಗೊಂಡಿದ್ದಾರೆ.

ಇನ್ನೂ ಹಿಂದೂ ಸಂಪ್ರದಾಯದಂತೆ ಸಿಂಧೂರ ಹಾಗೂ ಮಾಂಗಲ್ಯ ಧರಿಸುವುದು ತುಂಬಾ ಮುಖ್ಯ ಎಂಬೆಲ್ಲಾ ಬುದ್ದಿ ಮಾತುಗಳನ್ನು ಕಾಮೆಂಟ್ ಗಳ ಮೂಲಕ ಸಲಹೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳಿಗೆ ಇಂತಹ ವಿಮರ್ಶೆಗಳು ಆಗಾಗ ಎದುರಾಗುತ್ತಲೇ ಇರುತ್ತವೆ. ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಇದೀಗ ಆತಿಯಾ ಹಾಗೂ ರಾಹುಲ್ ಅಧಿಕೃತವಾಗಿ ದಂಪತಿಯಾಗಿ ಜೀವನ ಸಾಗಿಸುತ್ತಿದ್ದಾರೆ.

Most Popular

To Top