Film News

ಅಂತೂ ತಮ್ಮ ಫ್ಯಾನ್ಸ್ ಗೆ ತನ್ನ ಮುದ್ದಿನ ಮಗಳ ಮುಖ ದರ್ಶನ ಮಾಡಿಸಿದ ಪ್ರಿಯಾಂಕಾ ಚೋಪ್ರಾ, ವೈರಲ್ ಆದ ಪೊಟೋಗಳು….!

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ ಅಲ್ಲೂ ಸಹ ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ತಮ್ಮ ಮುದ್ದಿನ ಮಗುವಿನೊಂದಿಗೆ ಸಾಮಾಜಿಕ ಜಾಲಾತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಟಿ ಪ್ರಿಯಾಂಕಾ ಹಾಗೂ ನಿಕ್ ಜಾನ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ವಿದೇಶದಲ್ಲೇ ನೆಲೆಯೂರಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲೇ ಪಿಂಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿ ತಿಂಗಳುಗಳು ಕಳೆದರೂ ಸಹ ಪ್ರಿಯಾಂಕ ತನ್ನ ಮಗುವಿನ ಮುಖವನ್ನು ತೋರಿಸಿಲ್ಲ. ಅನೇಕ ಬಾರಿ ಅಭಿಮಾನಿಗಳು ಮಗಳ ಮುಖ ತೋರಿಸುವಂತೆ ಕಾಮೆಂಟ್ ಮೂಲಕ ತಿಳಿಸಿದ್ದರು. ಇದೀಗ ತನ್ನ ಮುದ್ದಿನ ಮಗಳ ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಸೆರಗೋಸಿ ಪದ್ದತಿಯ ಮೂಲಕ ಆಕೆ ಮಗಳನ್ನು ಪಡೆದುಕೊಂಡರು. ನಟಿ ಪ್ರಿಯಾಂಕಾ ಚೋಪ್ರ ಹಾಗೂ ಸಿಂಗರ್‍ ನಿಕ್ ಜೋನಸ್ ಪ್ರೀತಿಸಿ ವಿವಾಹವಾದರು. ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ 2018 ರಲ್ಲಿ ಮದುವೆಯಾಗಿ 2022 ರಲ್ಲಿ ತಂದೆತಾಯಿಯಾಗಿ ಪ್ರಮೋಷನ್ ಪಡೆದುಕೊಂಡರು. 2022 ರ ಜನವರಿ 15 ರಂದು ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಹೆಣ್ಣುಮಗುವಿಗೆ ಜನ್ಮ ಕೊಟ್ಟರು. ಇನ್ನೂ ಮಗು ಜನಿಸಿದ ಬಳಿಕ ಮಗುವನ್ನು ಸುಮಾರು ನೂರು ದಿನಗಳ ಕಾಲ ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಪ್ರಿಯಾಂಕಾ ಇತ್ತೀಚಿಗೆ ಸುದ್ದಿ ಹಂಚಿಕೊಂಡಿದ್ದರು. ಇನ್ನೂ ತನ್ನ ಮುದ್ದಿನ ಮಗಳೊಂದಿಗೆ ಆಗಾಗ ಆಕೆ ಅನೇಕ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮಗಳ ಮುಖ ಮಾತ್ರ ರಿವೀಲ್ ಮಾಡಿರಲಿಲ್ಲ.  ಇದೀಗ ಮೊದಲ ಬಾರಿಗೆ ತನ್ನ ಮಗಳನ್ನು ಸಾರ್ವಜನಿಕವಾಗಿ ಕರೆದುಕೊಂಡು ಬಂದಿದ್ದು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕಳೆದ ಸೋಮವಾರ ಪ್ರಿಯಾಂಕ ತನ್ನ ಮಗಳಾದ ಮಾಲ್ತಿ ಮೇರಿಯೊಂದಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ನಿಕ್ ಜೋನಸ್ ಹಾಗೂ ಆತನ ತಂಡಕ್ಕೆ ಹಾಲಿವುಡ್ ವಾಕ್ ಆಫ್ ಫೇಂ ಸ್ಟಾರ್‍ ಅವಾರ್ಡ್ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ತನ್ನ ಮಗಳೊಂದಿಗೆ ಹಾಜರಾಗಿದ್ದರು. ಈ ವೇಳೆ ಮಾಲ್ತಿ ಮೇರಿ ಕ್ರೀಮ್ ಕಲರ್‍ ಸ್ವೆಟರ್‍ ಹಾಗೂ ಮ್ಯಾಚಿಂಗ್ ಶಾರ್ಟ್ ಧರಿಸಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಇನ್ನೂ ಈ ವಿಡಿಯೋ ಒಂದನ್ನು ಪ್ರಿಯಾಂಕಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇನ್ನೂ ಮೊದಲ ಬಾರಿಗೆ ಅಭಿಮಾನಿಗಳು ಮಾಲ್ತಿ ಮೇರಿಯ ಮುಖವನ್ನು ನೋಡಿ ತುಂಬಾ ಖುಷಿಯಾಗಿದ್ದಾರೆ. ಮಾಲ್ತಿ ಮೇರಿ ಥೇಟ್ ತನ್ನ ತಂದೆ ನಿಕ್ ರವರಂತೆ ಇದ್ದಾಳೆ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಮಾಲ್ತೀ ಮೇರಿಯ ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪ್ರಿಯಾಂಕಾ ತನ್ನ ಮಗಳ ಮುಖವನ್ನು ಯಾವಾಗ ತೋರಿಸುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಮಗಳ ಮುಖ ತೋರಿಸಿದ್ದಾರೆ. ಪ್ರಿಯಾಂಕ ಚೋಪ್ರ ತನಗಿಂತ ಚಿಕ್ಕವಯಸ್ಸಿನ ನಿಖ್ ನೊಂದಿಗೆ ವಿವಾಹವಾದರು. ಇನ್ನೂ ಮದುವೆಯಾದರೂ ಸಹ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸಿಟಾಡೆಲ್, ಲವ್ ಎಗೈನ್ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top