Film News

ನಟಿ ಅನಸೂಯ ಬೇಬಿ ಬಂಪ್ ಪೊಟೋಸ್ ವೈರಲ್, ಗರ್ಭಿಣಿಯಾಗಿ ಕಾಣಿಸಿಕೊಂಡ ಅನಸೂಯ…!

ನಟಿ ಅನಸೂಯ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಬೇಬಿ ಬಂಪ್ ನ ಆಕೆಯ ಪೊಟೋಗಳು ವೈರಲ್ ಆಗುತ್ತಿವೆ. ಈ ಪೊಟೋಗಳನ್ನು ಆಕೆಯೇ ತನ್ನ ಇನ್ಸ್ಟಾಗ್ರಾಂ ನಲ್ಲಿ ಶೇರ್‍ ಮಾಡಿದ್ದು, ಕ್ಷಣದಲ್ಲೇ ವೈರಲ್ ಆಗುತ್ತಿವೆ. ಅನಸೂಯ ದಿಡೀರ್‍ ನೇ ಗರ್ಭಿಣಿಯಾಗಿರುವ ಪೊಟೋಗಳನ್ನು ಶೇರ್‍ ಮಾಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅನಸೂಯ ಹಂಚಿಕೊಂಡ ಈ ಗರ್ಭಿಣಿಯ ಪೊಟೋಗಳು ಯಾವುದು ಎಂಬ ವಿಚಾರಕ್ಕೆ ಬಂದರೇ, ಅದು ನಿಜವಲ್ಲ ಸಿನೆಮಾದಲ್ಲಿ ಪಾತ್ರಕ್ಕೆ ಸಂಬಂಧಿಸಿದ ಪೊಟೋಗಳಾಗಿವೆ.

ನಟಿ ಅನಸೂಯ ಖ್ಯಾತ ನಿರ್ದೇಶಕ ಕೃಷ್ಣವಂಶಿ ಸಾರಥ್ಯದಲ್ಲಿ ಮೂಡಿರಬರುತ್ತಿರುವ ರಂಗಮಾರ್ತಾಂಡ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಪ್ರಕಾಶ್ ರಾಜ್ ಹಾಗೂ ರಮ್ಯಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮರಾಠಿಯಲ್ಲಿ ಸೂಪರ ಹಿಟ್ ಆದ ನಟಸಾಮ್ರಾಟ್ ಎಂಬ ಸಿನೆಮಾದ ರಿಮೇಕ್ ಇದಾಗಿದೆ. ಈ ಸಿನೆಮಾ ಪ್ರಾರಂಭವಾಗಿ ಸುಮಾರು ತಿಂಗಳುಗಳೇ ಕಳೆದಿದೆ. ಕೋವಿಡ್ ಕಾರಣದಿಂದ ಈ ಸಿನೆಮಾ ಶೂಟಿಂಗ್ ಮೂಂದೂಡಲಾಗಿತ್ತು. ಕಳೆದ ವರ್ಷವಷ್ಟೆ ಸಿನೆಮಾದ ಶೂಟಿಂಗ್ ಪುನಃ ಪ್ರಾರಂಭವಾಗಿದ್ದು, ಸಿನೆಮಾ ಬಿಡುಗಡೆ ಇನ್ನೂ ತಡವಾಗುತ್ತಿದೆ. ಇನ್ನೂ ಈ ಸಿನೆಮಾದಲ್ಲಿ ಶಿವಾತ್ಮಿಕಾ ರಾಜಶೇಖರ್‍, ಅನಸೂಯ, ಬ್ರಹ್ಮಾನಂದಂ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಅನಸೂಯ ಪಾತ್ರ ಮಾತ್ರ ತುಂಭಾ ವಿಭಿನ್ನವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಗರ್ಭಿಣಿಯ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಅನಸೂಯ ತನ್ನ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ರಂಗಮಾರ್ತಾಂಡ ಸಿನೆಮಾದ ವರ್ಕಿಂಗ್ ಸ್ಟಿಲ್ ಶೇರ್‍ ಮಾಡಿದ್ದಾರೆ. ಈ ಪೊಟೋದಲ್ಲಿ ನಟಿ ಶಿವಾತ್ಮಿಕಾ ಮದುಮಗಳಾಗಿ ಸಿಂಗರಾಗೊಂಡಿದ್ದಾರೆ. ಆಕೆಯ ಪಕ್ಕದಲ್ಲೇ ಪ್ರಕಾಶ್ ರಾಜ್ ಹಾಗೂ ರಮ್ಯಕೃಷ್ಣ ಸಹ ತಂದೆತಾಯಿಯಾಗಿ ಇದ್ದಾರೆ. ಈ ಪೊಟೋದಲ್ಲೇ ಅನಸೂಯ ಸಹ ಇದ್ದು, ಬೇಬಿ ಬಂಪ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋ ನೋಡಿದ ಬಳಿಕ ಅನಸೂಯ ಈ ಸಿನೆಮಾದಲ್ಲಿ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ಸಿಕ್ಕಿದೆ. ಇನ್ನೂ ಈ ಪೊಟೋ ಬಳಿಕ ಅನಸೂಯ ಪಾತ್ರದ ಬಗ್ಗೆ ಮತಷ್ಟು ಹೈಪ್ ಕ್ರಿಯೇಟ್ ಆಗಿದೆ.

ಇನ್ನೂ ಅನಸೂಯ ಇತ್ತಿಚಿಗೆ ಕಿರುತೆರೆಗಿಂತಲೂ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿವೆ. ಅದರಲ್ಲೂ ಹೆಚ್ಚಾಗಿ ಆಕೆಗೆ ನೆಗೆಟೀವ್ ಶೇಡ್ಸ್ ಇರುವಂತಹ ಆಫರ್‍ ಗಳೇ ಬರುತ್ತಿವೆ. ಪುಷ್ಪಾ, ದರ್ಜಾ, ಖಿಲಾಡಿ ಸಿನೆಮಾಗಳಲ್ಲಿ ಆಕೆ ನೆಗೆಟೀವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವು ದಿನಗಳಲ್ಲೇ ಬಿಡುಗಡೆಯಾಗಲಿರುವ ಸಂದೀಪ್ ಕಿಷನ್ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಮೈಖಲ್ ಎಂಬ ಸಿನೆಮಾದಲ್ಲೂ ಸಹ ಅನಸೂಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲೂ ಸಹ ಆಕೆ ನೆಗೆಟೀವ್ ರೋಲ್ ನಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top