News

ತನಗಿಂತ 10 ವರ್ಷ ಚಿಕ್ಕವನೊಂದಿಗೆ ಅಫೈರ್ ಇಟ್ಟುಕೊಂಡ 35ರ ಆಂಟಿ, ತಮ್ಮ ಸಂಬಂಧಕ್ಕೆ ಅಡ್ಡ ಎಂದು ಪತಿಯನ್ನೇ ಮುಗಿಸಿಬಿಟ್ಲು……!

ಇಂದಿನ ಸಮಾಜದಲ್ಲಿ ಅನೈತಿಕ ಸಂಬಂಧಗಳ ಕಾರಣದಿಂದ ಅನೇಕ ದುರ್ಘಟನೆಗಳು ನಡೆಯುತ್ತಿವೆ. ದಿನೇ ದಿನೇ ಅಪರಾಧಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಅನೈತಿಕ ಸಂಬಂಧದ ಕಾರಣದಿಂದ ಕೊಲೆಗಳು, ಅತ್ಯಾಚಾರಗಳು, ಆತ್ಮಹತ್ಯೆಗಳೂ ಸಹ ನಡೆಯುತ್ತಿರುವ ಬಗ್ಗೆ ನಾವು ಕೇಳಿದ್ದೇವೆ. ಇದೀಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಈ ಘಟನೆಯನ್ನು ತಿಳಿದ ಪೊಲೀಸರೂ ಸಹ ಶಾಕ್ ಆಗಿದ್ದಾರೆ.

ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನೊಂದಿಗೆ ಸಂಬಂಧ ಬೆಳೆಸಿದ್ದ 35ರ ಆಂಟಿ ತನ್ನ ಪತಿಯನ್ನೆ ಕೊಲೆ ಮಾಡಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಜಬಲ್ ಪುರ್‍ ಎಂಬ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪ್ರೇಮ್ ಸಿಂಗ್ ಮರಾವಿ ಎಂದು ಗುರ್ತಿಸಲಾಗಿದೆ. ಆತನನ್ನು ಕೊಲೆ ಮಾಡಿದ್ದು, ಆತನ ಪತ್ನಿ ಹಾಗೂ ಆಕೆಯ ಪ್ರಿಯರಕನೇ ಎಂದು ಹೇಳಲಾಗಿದೆ. ಈ ಘಟನೆ ನ.24 ರಂದು ನಡೆದಿದ್ದು, ಮಧ್ಯಪ್ರದೇಶದ ಬರೇಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೌಟಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಮೃತನ ಪತ್ನಿಯ ಪ್ರಿಯಕರ ಪ್ರೇಮ್ ಸಿಂಗ್ ಮರವಿ ರವರ ಸಂಬಂಧಿ (ಸೋದರಳಿಯ)ಗೆ ಐವತ್ತು ಸಾವಿರ ಹಣ ನೀಡಿ ಪ್ರೇಮ್ ಸಿಂಗ್ ಕೊಲೆಗೆ ಸುಪಾರಿ ನೀಡಿದ್ದರು. ಈ ಸಮಯದಲ್ಲಿ ಆಕೆಯ ಯುವ ಪ್ರಿಯಕರ ಸಹ ಜೊತೆಗಿದ್ದ ಎನ್ನಲಾಗಿದ್ದು, ಮಹಿಳೆ, ಆಕೆಯ ಪ್ರಿಯಕರ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿ ಮಹಿಳೆ ತನಗಿಂತ 10 ವರ್ಷ ಕಿರಿಯ ಯುವಕನ ಜೊತೆಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಎಷ್ಟೇ ಕಷ್ಟ ಬಂದರೂ ಇಬ್ಬರೂ ಬೇರೆಯಾಗಬಾರದು ಎನ್ನುವಷ್ಟು ಪ್ರೀತಿಸಿಕೊಳ್ಳುತ್ತಿದ್ದರಂತೆ. ಅವರ ಸಂಬಂಧಕ್ಕೆ ಆಕೆಯ ಪತಿ ಅಡ್ಡಿ ಎಂದು ಆತನನ್ನು ಕೊಲೆ ಮಾಡಲಾಗಿದೆ. ಮೃತನ ಪತ್ನಿ ಸಂಗೀತಾ ಮಾರಾವಿ (35) ತನಗಿಂತ 10 ವರ್ಷ ಚಿಕ್ಕವನಾದ ಪ್ರಲ್ಲಾದ್ ಪಟೇಲ್ (25) ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆರೋಪಿಗಳು ಮೊದಲಿಗೆ ಕೊಲೆಯ ಬಗ್ಗೆ ಕೇಳಿದಾಗ ಸ್ಪಷ್ಟವಾದ ಉತ್ತರ ನೀಡಿರಲಿಲ್ಲ. ಆದರೆ ತನಿಖೆಯ ವೇಳೆ ಎಲ್ಲಾ ವಿಚಾರಗಳು ಹೊರಬಂದಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top